ಆಟೊ ಚಾಲಕರಿಗೆ ಪರವಾನಿಗೆ ಹಾಗೂ ಇನ್ಸೂರೆನ್ಸ್ ಕಡ್ಡಾಯ

ಹರಿಹರ:

        ಆಟೊರಿಕ್ಷಾ ಚಾಲನೆ ಮಾಡುವವರು ಇನ್ಸೂರೆನ್ಸ್ ಚಾಲನಾ ಪರವಾನಿಗೆ ಕಡ್ಡಾಯವಾಗಿ ತಮ್ಮ ಬಳಿ ಇರಬೇಕೆಂದು ವೃತ್ತ ನಿರೀಕ್ಷಕ ಈರಣ್ಣ ಸಿದ್ದಪ್ಪ ಗುರುನಾಥ್ ಹೇಳಿದರು.

        ನಗರದ ಆಟೋರಿಕ್ಷಾ ಚಾಲಕರೊಂದಿಗೆ ಸಂಚಾರಿ ನಿಯಮ ಸುರಕ್ಷತೆ ಕುರಿತು ಮಾತನಾಡಿದ ಅವರು ಆಟೋ ಚಾಲಕ ವೃತ್ತಿಯಲ್ಲಿರುವವರು ಅತಿ ಕಡು ಬಡವರಾಗಿರುತ್ತಾರೆ. ಆಟೊ ಚಾಲನೆ ಮಾಡುವವರು ತಮ್ಮ ಬಳಿ ಕಡ್ಡಾಯವಾಗಿ ಚಾಲನಾ ಪರವಾನಿಗೆ ಇನ್ಸೂರೆನ್ಸ್ ಹೊಂದಿರಬೇಕು ಎಂದು ತಿಳಿಸಿದರು.

         ಸಂಚಾರಿ ನಿಯಮಾನುಸಾರ ದಾಖಲೆಗಳನ್ನು ಇಲ್ಲದೆ ಚಾಲನೆ ಮಾಡುವುದು ಸಂಚಾರಿ ನಿಯಮವನ್ನು ಉಲ್ಲಂಘಿಸಿದಂತೆ ಆಗುತ್ತದೆ. ದಯಮಾಡಿ ಚಾಲಕರುಗಳು ಪರವಾನಿಗೆಗಳನ್ನು ಮಾಡಿಸಿಕೊಳ್ಳುವುದರ ಜೊತೆಗೆ ನಿಮ್ಮಜೀವನದ ರಕ್ಷಣೆ, ಜಾವಬ್ದಾರಿಯನ್ನು ನಿರ್ವಹಿಸಬೇಕೆಂದು ಎಮದರು.

        ಪರವಾನಿಗೆ ಇನ್ಸೂರೆನ್ಸ್ ಇಲ್ಲದೆ ಆಟಗಳನ್ನು ಓಡಿಸುವುದರಿಂದ ಅಪಘಾತವಾದ ಸಂದರ್ಭದಲ್ಲಿ ಲಕ್ಷಗಟ್ಟಲೆ ದಂಡವನ್ನು ಕಟ್ಟುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಂದು ದಿನಕ್ಕೆ ಮುನ್ನೂರು ರೂಪಾಯಿ ನಾನೂರು ರೂಪಾಯಿವರೆಗೂ ದುಡಿಯುವ ನೀವುಗಳು ಲಕ್ಷ ಲಕ್ಷ ಹಣ ದಂಡವನ್ನು ಹೇಗೆ ಕಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದರು.

         ದಯಮಾಡಿ ಆಟೋ ರಿಕ್ಷಾ ಚಾಲನೆ ಮಾಡುವಂಥವರು ತಮ್ಮ ಪರವಾನಿಗೆ ಇನ್ಸೂರೆನ್ಸ್ ಇತರೆ ದಾಖಲೆಗಳನ್ನು ಮಾಡಿಸಿಕೊಳ್ಳಬೇಕು ಮದ್ಯಪಾನ ಮಾಡಿ ಚಾಲನೆಯನ್ನು ಮಾಡಬಾರದು ದುಶ್ಚಟಗಳಿಂದ ದೂರವಿರಬೇಕು ತಮ್ಮ ವೃತ್ತಿ ಜೀವನದ ಬದುಕಿನ ನಡುವಿನಲ್ಲಿ ತಮ್ಮ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಿ ಸಮಾಜದಲ್ಲಿ ಅವರ ಉಜ್ವಲ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ ಎಂದು ಹೇಳಿದರು.

       ಕಾನೂನು ಸುವ್ಯವಸ್ಥೆ ಸಂಚಾರಿ ನಿಯಮವನ್ನು ಪಾಲಿಸಬೇಕು, ನೀವು ಸಹ ಪೆÇಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಮೋಹನ್, ಜೆಎಸ್. ನಾಗರಾಜ್, ಬೆಂಕಿ ತಿಪ್ಪೇಶ್ .ಸಿಕಂದರ್ .ಕೇಶವ್. ಕಂಚಿಕೇರಿ ಮಂಜುನಾಥ್ .ಆಟೊ ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ