ತುರುವೇಕೆರೆ
ಸರ್ಕಾರಿ ನೌಕರರಿಗೆ ವಯೋನಿವೃತ್ತಿ ಔಪಚಾರಿಕ ಪ್ರಕ್ರಿಯೆಯಾಗಿದ್ದರೂ, ಏತನ್ಮಧ್ಯೆ ನಾವು ಸಮಾಜಮುಖಿಯಾಗಿ ನಿರ್ವಹಿಸಿದ ಕೆಲಸ ಕಾರ್ಯಗಳು ಮಾತ್ರ ನಮ್ಮ ಜೀವನದುದ್ದಕ್ಕೂ ಶಾಶ್ವತವಾಗಿ ಉಳಿದು ಬಿಡುತ್ತವೆ. ಇದನ್ನು ಎಲ್ಲರೂ ಅರಿಯ ಬೇಕಿದೆ ಎಂದು ತಿಪಟೂರು ಬಿಎಸ್‍ಎನ್‍ಎಲ್ ಉಪಮಂಡಲ ಅಭಿಯಂತರ ಗುರುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಬಿಎಸ್‍ಎನ್‍ಎಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಎಸ್‍ಎನ್‍ಎಲ್ ತಾಂತ್ರಿಕ ನೌಕರ ಬಿ.ಚಂದ್ರಯ್ಯ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ಮೊಬೈಲ್ ಟವರ್ ಕಂಪನಿಗಳು ದೇಶದಾದ್ಯಂತ ಪ್ರಬಲ ಪೈಪೋಟಿಯಲ್ಲಿ ತೊಡಗಿವೆ. ಅಲ್ಲದೆ ಈ ಕಂಪನಿಗಳು ವಿವಿಧ ಆಫರ್‍ಗಳನ್ನು ನೀಡುತ್ತಾ ಗ್ರಾಹಕರನ್ನು ತನ್ನತ್ತ ಸೆಳೆಯುವ ಭರಾಟೆಯಲ್ಲಿ ನಿರತವಾಗಿವೆ. ಇವುಗಳ ನಡುವೆಯೂ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಕಂಪನಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಾ ಜಾಗತಿಕ ಮಟ್ಟದಲ್ಲೂ ತನ್ನದೇ ಆದ ಅಸ್ಥಿತ್ವವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಸಂತಸದ ಸಂಗತಿಯಾಗಿದೆ.
ಇದೇ ವೇಳೆ ಬಿಎಸ್‍ಎನ್‍ಎಲ್ ನೌಕರರಿಂದ ನಿವೃತ್ತ ಬಿ.ಚಂದ್ರಯ್ಯ ಅವರನ್ನು ಮೈಸೂರ ಪೇಟ ತೊಡಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಿಎಸ್‍ಎನ್‍ಎಲ್ ಜೆ.ಇ.ನಟರಾಜ್, ಜಿಲ್ಲಾ ಎನ್‍ಎಫ್‍ಟಿಇ ರಾಜ್‍ಕುಮಾರ್, ಸಿಬ್ಬಂದಿಗಳಾದ ನಾರಾಯಣ್, ಬಲರಾಮಯ್ಯ, ಬಸವೇಗೌಡ, ಶಿವಲಿಂಗಯ್ಯ, ಸುರೇಶ್ ಬಾಬು, ಸಿದ್ದೇಶ್, ಬಸವರಾಜು, ಸುರೇಶ್ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
