ಮಧುಗಿರಿ:
ಪರೀಕ್ಷಾ ಕಾರ್ಯವನ್ನು ಶ್ರದ್ಧೆ ಮತ್ತು ಪರಿಶ್ರಮ ದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವಿಶಂಕರರೆಡ್ಡಿ ತಿಳಿಸಿದರು.
ಪಟ್ಟಣದ ಸಿದ್ದಾರ್ಥ ಪಿಯು ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮುಖ್ಯ ಅಧೀಕ್ಷಕ ಹಾಗೂ ಪ್ರಶ್ನೆ ಪತ್ರಿಕೆ ಪಾಲಕರಿಗೆ ಕರೆದಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಈ ಭಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಅವಶ್ಯವಿರುವಂತಹ ಸಕಲ ಸಿದ್ದತೆಗಳನ್ನು ಕೂಡ ಜಿಲ್ಲೆಯ ಎಲ್ಲೆಡೆ ಮಾಡಲಾಗಿದ್ದು ಸಂಬಂಧ ಪಟ್ಟ ಅಧೀಕ್ಷಕರುಗಳಿಗೆ ಎಲ್ಲಾ ರೀತಿಯ ಅನುಮತಿ ನೀಡಲಾಗಿದೆ ಅದನ್ನು ಬಳಸಿಕೊಂಡು ಪರೀಕ್ಷಾ ನಕಲು ಮತ್ತು ಅಕ್ರಮಗಳನ್ನು ತಡೆಯಿರಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಿವೈಪಿಸಿ ರಾಜ್ ಕುಮಾರ್ ಮಾತನಾಡಿ ಬಿಇಒಗಳಾದ ರಂಗಪ್ಪ, ಗಂಗಾಧರ್, ಸಿದ್ದಗಂಗಯ್ಯ, ರಾಮಯ್ಯ, ಹಾಗೂ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಮಾತನಾಡಿದರು.ಇದೇ ಸಂದರ್ಭದಲ್ಲಿ ವಿಷಯ ಪರಿವೀಕ್ಷಕ ಮೋಹನ್ಕುಮಾರ್, ಎಲ್ಲಾ ತಾಲೂಕುಗಳ ನೋಡಲ್ ಅಧಿಕಾರಿಗಳು ಹಾಗೂ ಪರೀಕ್ಷ ಕೇಂದ್ರಗಳ ಮುಖ್ಯ ಅಧೀಕ್ಷಕರು ಮತ್ತು ಪ್ರಶ್ನೆ ಪತ್ರಿಕೆ ಪಾಲಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








