ಸರ್ಕಾರಿ ನೌಕರಿ ಸಿಕ್ಕಿರುವುದು ತಮ್ಮ ಪುಣ್ಯ ಎಂದು ಭಾವಿಸಿ ನೌಕರರು ಪ್ರಮಾಣಿಕ ಸೇವೆಯನ್ನು ಸಲ್ಲಿಸಿ-ಎಂ.ಚಂದ್ರಪ್ಪ

ಹೊಳಲ್ಕೆರೆ:

        ರಾಜ್ಯಾಂಗ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಕೆಲಸ ಮಾಡುವ ನಿರ್ವಹಣೆ ಪ್ರತಿಯೊಬ್ಬ ಸರ್ಕಾರಿ ನೌಕರರ ಆದ್ಯ ಕರ್ತವ್ಯವಾಗಿದೆ. ನಿಮಿಗೆ ಸಿಕ್ಕಿರುವ ಈ ಪುಣ್ಯದ ಕೆಲಸವನ್ನು ಪ್ರಮಾಣಿಕವಾಗಿ ನಿರ್ವಹಿಸಿದರೆ ನಿಮ್ಮ ಜೀವನ ಸಾರ್ಥಕವಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಸಲಹೆ ನೀಡಿದರು.

        ರಾಜ್ಯ ಸರ್ಕಾರಿ ನೌಕರರ ಸಂಘದ ಪ್ಯಾಕೇಟ್ ಕ್ಯಾಲೆಂಡರ್ ಬಿಡುಗಡೆ ತಾಲ್ಲೂಕು ಮಟ್ಟದ ಅಧಿಕಾರಿ ವರ್ಗದವರಿಗೆ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ. ಇಲಾಖಾವಾರು ಉತ್ತಮ ನೌಕರರಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಮತ್ತು ಹೆಚ್ಚುವರಿ ಕೊಠಡಿ ಉದ್ಘಾಟನಾ ಸಮಾರಂಭ ಇಲ್ಲಿಯ ಶ್ರೀ ಪ್ರಸನ್ನ ಗಣಪತಿಯ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

        ಸರ್ಕಾರಿ ನೌಕರರಲ್ಲಿ ಸೇವಾ ಮನೋಭಾವನೆಯನ್ನು ತಮ್ಮ ಕರ್ತವ್ಯದಲ್ಲಿ ಚಾಚು ತಪ್ಪದೆ ಅಳವಡಿಸಿಕೊಳ್ಳಬೇಕು. ತಮ್ಮ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಮಾಡುವಾಗ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ತಮ್ಮ ಕರ್ತವ್ಯವನ್ನು ಅನುಸರಿಸಬೇಕು. ದೇಶದ ಸರ್ವತೋಮುಖ ಅಭಿವೃಧ್ದಿ ಆಗಲು ನೌಕರರ ಸಹಕಾರ ಅತ್ಯಗತ್ಯ ಎಂದು ತಿಳಿಸಿದ ಶಾಸಕರು ಅಮೇರಿಕಾದ ವಾಷಿಂಗಟನ್‍ನಲ್ಲಿ(ಡಿಸಿ) ಅಲ್ಲಿಯ ನೌಕರರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತಮ್ಮ ಕರ್ತವ್ಯಗಳನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಸರ್ಕಾರಿ ನೌಕರರಿಗೆ ತಮ್ಮ ಕರ್ತವ್ಯದ ಸಮಯವೇ ಗೊತ್ತಿಲ್ಲ ಎಂದರು.

        ಸರ್ಕಾರಿ ನೌಕರರಿಗೆ ಸೇವಾ ಮುಂಚೆ ಹಲವಾರು ವರ್ಷಗಳು ಕೆಲಸವಿಲ್ಲದೆ ಅಲೆದಾಡುತ್ತೀರಾ ಕಂಡ ಕಂಡವರ ಕಾಲು ಹಿಡಿಯುತ್ತೀರಾ. ಸರ್ಕಾರಿ ನೌಕರಿ ಸಿಕ್ಕಿದ ತಕ್ಷಣ ಇಂದಿನ ಕಷ್ಟ ಅನುಭವಗಳನ್ನು ಮರೆಯುತ್ತೀರಾ. ನಿಮಿಗೆ ಸಿಕ್ಕಿರುವ ಅವಕಾಶ ಇದು ಒಂದು ಪುಣ್ಯ ಇದನ್ನು ಅರಿತು ಸಾರ್ವಜನಿಕರ ಸೇವೆ ದೇವರ ಸೇವೆ ಎಂದು ಪರಿಗಣಿಸಿದರೆ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ಶಾಸಕರು ಸರ್ಕಾರಿ ನೌಕರರಿಗೆ ಕಿವಿ ಮಾತು ಹೇಳಿದರು.

        ಸಾನಿಧ್ಯವನ್ನು ಶ್ರೀ ಕುಂಚಿಟಿಗ ಮಹಾ ಸಂಸ್ಥಾನ ಮಠ ಹೊಸದುರ್ಗ ಶ್ರೀ ಡಾ.ಶಾಂತವೀರ ಮಹಾಸ್ವಾಮಿಗಳು ವಹಿಸಿ ಮಾತನಾಡಿ ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಟವಾದುದು. ನಮ್ಮ ಪ್ರಜಾ ಪ್ರಭುತ್ವದ ಸಂವಿಧಾನ ವಿಶ್ವದ ಯಾವುದೇ ದೇಶದಲ್ಲಿ ಇಲ್ಲ. ಸಂವಿಧಾನ ಅತ್ಯಂತ ಶ್ರೇಷ್ಟವಾದುದು. ಇದನ್ನು ಪ್ರತಿಯೊಬ್ಬ ಭಾರತೀಯರು ಅನುಸರಿಸಬೇಕು ಅದರಂತೆ ಕಾನೂನುಗಳನ್ನು ಗೌರವಿಸಬೇಕು.

          ಸಂವಿಧಾನದ ಆಶಯದಂತೆ ಎಲ್ಲರು ಸರಿ ಸಮಾನರು. ಇದರಲ್ಲಿ ಯಾವುದೇ ಧರ್ಮ, ಜಾತಿ, ಮತ ಪ್ರತ್ಯೇಕತೆ ಏನಿಲ್ಲ. ಎಲ್ಲಾ ಧರ್ಮಗಳು ಸಂವಿಧಾನದ ಅಡಿಯಲ್ಲಿಯೇ ನಡೆಯುತ್ತಿವೆ ಎಂದು ತಿಳಿಸಿದರು.ವಿಶೇಷ ಸನ್ಮಾನಿತರಾಗಿ ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಚಂದ್ರಶೇಖರ್ ತಾಳ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಕೆ.ಜೆ.ಜಗದೀಶ್ , ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾನಿಲಯದ ಸಂಚಾಲಕಿ ಸುಮಿತ್ರಕ್ಕ ಮತ್ತು ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎನ್.ಶಿವಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

        ಮುಖ್ಯ ಅತಿಥಿಗಳಾಗಿ ಪ.ಪಂ ಅಧ್ಯಕ್ಷೆ ಸವಿತಾ ಬಸವರಾಜು, ತಾ.ಪಂ. ಅಧ್ಯಕ್ಷೆ ಸುಜಾತ ಧನಂಜಯ್ ನಾಯ್ಕ್, ತಹಶೀಲ್ದಾರ್ ಕೆ.ನಾಗರಾಜು, ತಾ.ಪಂ. ಇಓ ಕೆ.ಎಂ.ಮಹಾಂತೇಶ್, ಬಿಇಓ ಜಗದೀಶ್ವರ್, ಮುಂತಾದ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಎ.ಜಯಪ್ಪ ಸ್ವಾಗತಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap