7 ದಿನದ ಬಜೆಟ್ ಅಧಿವೇಶನದಲ್ಲಿ ಕಲಾಪ ನಡೆದಿದ್ದು ಎಷ್ಟು ಗಂಟೆ ಗೋತ್ತೆ….?

ಬೆಂಗಳೂರು:

       ರಾಜ್ಯ ಸಮ್ಮಿಶ್ರ ಸರ್ಕಾರದ ಬಹುನಿರೀಕ್ಷಿತ ಬಜೆಟ್ ಅಧಿವೇಶನ ಅಂತೂಇಂತೂ ಮುಕ್ತಾಯವಾಗಿದೆ.ಇಡೀ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನೂರಾರು ಸಮಸ್ಯೆಗಳಿವೆ, 150ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ.

      ಇಂತಹ ವಿಚಾರ ಸದನದಲ್ಲಿ ಚರ್ಚೆ ಮಾಡಬೇಕಾಗಿತ್ತು  ಆದರೆ ಇವಾವುದರ ಬಗ್ಗೆ ಜನಪ್ರತಿನಿಧಿಗಳು ಸದನದಲ್ಲಿ ಬಾಯಿ ಸಹ ಬಿಟ್ಟಿಲ್ಲ .ನಿನ್ನೆ ಸ್ಪೀಕರ್ ರಮೇಶ್ ಕುಮಾರ್ ಅವರು ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಆದರೆ ಇಂದು ಅಧಿವೇಶನ ಕೊನೆಗೊಳ್ಳಬೇಕಾಗಿತ್ತು.

      ಮುಂಚೆ ಘೋಷಿಸಿದ ಹಾಗೆ ಸದನ ಒಟ್ಟು 7 ದಿನಗಳ ಕಾಲ ನಡೆಯಿತು ಅದರಲ್ಲಿ ಸದನ ನಡೆದಿದೆ ಎಂದು ಎನ್ನಿಸ್ಸಿದ್ದು ಕೇವಲ 15 ಗಂಟೆ 10 ನಿಮಿಷಗಳು ಮಾತ್ರ ಅದರಲ್ಲಿ ಮೂರೂವರೆ ಗಂಟೆ ಮುಖ್ಯಮಂತ್ರಿಗಳ ಭಾಷಣ ಇತ್ತು.ಈ ಬಾರಿಯ ಕಲಾಪವನ್ನು ನುಂಗಿದ್ದು ಆಡಿಯೊ ಟೇಪ್ ವಿವಾದ. ಇದು ಉಭಯ ಸದನಗಳಲ್ಲಿ ತೀವ್ರ ಕೋಲಾಹಲ, ಗದ್ದಲ ಎಬ್ಬಿಸಿತ್ತು. ಮೈತ್ರಿ ಸರ್ಕಾರದ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡಲು ಬಿಜೆಪಿ ಹೊರಟಿದೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಅವರ ಮಾತುಗಳು ಎನ್ನಲಾದ ಆಡಿಯೊವನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಜೆಟ್ ಮಂಡನೆಯ ದಿನ ಬಿಡುಗಡೆ ಮಾಡಿದ ನಂತರ ಸದನದಲ್ಲಿ ಇಷ್ಟು ದಿನಗಳ ಕಾಲ ಗದ್ದಲ, ಕೋಲಾಹಲಗಳೇ ಕೇಳಿಬಂದವು.

        ಅಯವ್ಯಯ ಮಸೂದೆ ಸೇರಿದಂತೆ 9 ಮಸೂದೆಗಳು ಈ ಗದ್ದಲಗಳ ನಡುವೆಯೇ ಲೇಖಾನುಮೋದನೆ ಕಂಡಿವೆ. ಆದರೆ ಅವುಗಳ ಮೇಲೆ ಚರ್ಚೆಗಳಾಗಿಲ್ಲ. ಏಳು ದಿನಗಳಲ್ಲಿ ಪ್ರತಿ ದಿನ ಕಲಾಪ ನಡೆದದ್ದು ಸುಮಾರು ಎರಡೂವರೆ ಗಂಟೆಗಳು ಮಾತ್ರ.  ನಮ್ಮ ರಾಜ್ಯದಲ್ಲಿ ಆರ್ಥಿಕ ಮತ್ತು ಕೃಷಿ ಸಮಸ್ಯೆ ಬೇಕಾದಷ್ಟಿದೆ.ಆದರೆ ಯಾವ ಒಬ್ಬ ಶಾಸಕನು ಸಹ ಅವುಗಳ ಬಗ್ಗೆ ಚರ್ಚೆ ನಡೆಸಿಲ್ಲ. ಜನಪ್ರತಿನಿಧಿಗಳು ತಮ್ಮ ಕುರ್ಚಿ ಕಾಳಗದಲ್ಲಿಯೇ ಬ್ಯೂಸಿಯಾಗಿದ್ದರು.ಇದರಿಂದ ನಾವು ಜನಸಾಮಾನ್ಯರು ಕಟ್ಟಿದ ತೆರಿಗೆ ಹಣವನ್ನು ಬಳಸಿಕೊಂಡು ನಮ್ಮ ಬಗ್ಗೆ ಚರ್ಚಿಸಿ ಎಂದು ಸದಸ್ಯರನ್ನು  ಆಯ್ಕೆ ಮಾಡಿದರೆ ಇವರುಗಳು ತಮ್ಮ ಕುರ್ಚಿಗಳನ್ನು ಉಳಿಸಿಕೊಳ್ಳುವ  ವಿಚಾರವನ್ನೇ ಪ್ರಧಾನ ಚರ್ಚಾ ವಿಷಯವಾಗಿ ತೆಗೆದುಕೊಂಡು ಜನಸಾಮಾನ್ಯರನ್ನು ಮರೆತಿರುವುದು ವಿಷಾದನೀಯ ಎಂಬುದು ಜನಸಾಮಾನ್ಯನ ಅಳಲು. 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link