ಲಾಕ್ ಡೌನ್ ಸಂದರ್ಭದಲ್ಲಿ ಆದ ಮದುವೆಗಳ ಸಂಖ್ಯೆಯಾದರೂ ಎಷ್ಟು ಗೊತ್ತೇ..?

ಬಳ್ಳಾರಿ

     ಕೊರೋನಾ ಕೆಲವರ ಬಾಳಲ್ಲಿ ಕರಾಳತೆ ಮೆರೆದರೆ ಇನ್ನು ಕೆಲಚರ ಬಾಳಿಗೆ ಹೊಸಬರ ಾಗಮನಕ್ಕೆ ನಾಂದಿ ಹಾಡಿದ್ದಂತೂ ನಿಜ ಲಾಕ್ ಡೌನ್ ಸಂದರ್ಭವನ್ನು ಉಪಯೋಗಿಸಿಕೊಂಡು ರಾಜ್ಯಾದ್ಯಂತ ಆದ ಸರಳ ವಿವಾಹಗಳ ಸಂಖ್ಯೆ ಎಷ್ಟು ಗೊತ್ತೇ..?

      ಆದರೆ ಈ ಸಮಯದಲ್ಲಿ ಮದುವೆ ಮಾಡಬೇಕೆಂದವರು, ಮದುವೆ ಆಗಬೇಕೆಂದವರು ಕಡಿಮೆ ಸಂಖ್ಯೆಯಲ್ಲಿ ಅತಿಥಿಗಳನ್ನು ಸೇರಿಸಿಯಾದರೂ ಮಾಡಿ ಮುಗಿಸಿದ್ದಾರೆ. ಸಾಮೂಹಿಕ ಮದುವೆ ಕಾರ್ಯಕ್ರಮಗಳು, ಬೃಹತ್ ಸಂಖ್ಯೆಯಲ್ಲಿ ಮದುವೆಗೆ ಜನ ಸೇರುವುದಕ್ಕೆ ಸರ್ಕಾರ ತಡೆ ನೀಡಿದರೂ ಕೂಡ ಮದುವೆ ದಾಖಲಾತಿಗಳ ಪ್ರಮಾಣ ಮಾತ್ರ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಕಡಿಮೆಯೇನೂ ಆಗಿಲ್ಲ ಎನ್ನುತ್ತದೆ ವರದಿ.

     ಮಾರ್ಚ್ ನಿಂದ ಜೂನ್ ತಿಂಗಳವರೆಗೆ ಕರ್ನಾಟಕ ಸರ್ಕಾರದ ದಾಖಲೆಗಳ ಪ್ರಕಾರ ಸುಮಾರು 40 ಸಾವಿರಕ್ಕೂ ಹೆಚ್ಚು ಮದುವೆಗಳಾಗಿದ್ದು ಬಳ್ಳಾರಿ ಜಿಲ್ಲೆಯಲ್ಲಿ ಸರಿಸುಮಾರು 12 ಸಾವಿರದಷ್ಟು ಮದುವೆಗಳು ನಡೆದಿ ಸಾಮಾನ್ಯವಾಗಿ ಇತರ ಸಮಯಗಳಲ್ಲಾದರೆ ಬಹುತೇಕ ಮದುವೆಗಳು ದಾಖಲಾಗುವುದೇ ಇಲ್ಲ. ಆದರೆ ಈ ಬಾರಿ ಮದುವೆಗೆ ಮುನ್ನ ದಾಖಲಾತಿ ಮಾಡಿಕೊಳ್ಳಲೇಬೇಕಾಗಿದ್ದರಿಂದ ಅಂಕಿಅಂಶ ಸಿಕ್ಕಿದೆ.

      ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮದುವೆ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ ಎಂದು ಜಿಲ್ಲಾ ವಿವಾಹ ದಾಖಲಾತಿ ಅಧಿಕಾರಿಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ವರ್ಷ ಲಾಕ್ ಡೌನ್ ನಿರ್ಬಂಧದಿಂದಾಗಿ ರಿಜಿಸ್ಟರ್ ಮದುವೆ ಜಾಸ್ತಿಯಾಗಿದೆ. ಕಳೆದ ವರ್ಷ ಬಳ್ಳಾರಿಯಲ್ಲಿ 1,141 ಮದುವೆಗಳು ರಿಜಿಸ್ಟರ್ ಆಗಿದ್ದರೆ, ಕಳೆದ ಮೂರು ತಿಂಗಳಲ್ಲಿ 12,300 ಮದುವೆಗಳು ರಿಜಿಸ್ಟರ್ ಆಗಿವೆ ಎಂದು ಅಧಿಕಾರಿಗಳು ಸಂಖ್ಯೆಯ ಏರಿಕೆ ಬಗ್ಗೆ ಹೇಳುತ್ತಾರೆ.ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ವಿಐಪಿ ಕುಟುಂಬದ ಮದುವೆಗಳು, ಬೃಹತ್ ಸಂಖ್ಯೆಯಲ್ಲಿ ಸೇರಿದ ಮದುವೆಗಳು ನೆರವೇರಿವೆ. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಕೂಡ ಮದುವೆಗಳಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap