ಬೆಂಗಳೂರು
ಮದುವೆಯಾಗುವುದಾಗಿ ಹೇಳಿ ವೈದ್ಯೆ ಮೇಲೆ ಅತ್ಯಾಚಾರವೆಸಗಿದ ಕಾಮುಕನ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯೆಯೊಬ್ಬರನ್ನು ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡಿದ್ದ ರಾಮಮೂರ್ತಿ ಎಂಬಾತ ಮೊದಲ ಬಾರಿಗೆ ಫೋರಂ ಮಾಲ್‍ನಲ್ಲಿ ಇಬ್ಬರೂ ಭೇಟಿಯಾಗಿ ನಾನು ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದೇನೆ ಎಂದು ಹೇಳಿಕೊಂಡು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದ. ಅಲ್ಲದೆ, ನಿಮ್ಮ ಕಡೆಯವರಿಗೆ ಯಾರಿಗಾದರೂ ಕೆಲಸ ಬೇಕಿದ್ದರೆ ಹೇಳಿ ಎಂದೂ ವೈದ್ಯೆಗೆ ತಿಳಿಸಿದ್ದ ಎನ್ನಲಾಗಿದೆ.
ಅದನ್ನು ನಂಬಿದ ವೈದ್ಯೆ ಸಂಬಂಧಿಕರಿಂದ 22 ಲಕ್ಷ ರೂಪಾಯಿ ಕೊಡಿಸಿದ್ದರು. ಹಾಗೇ ತಾವೂ ಕೂಡ 4 ಲಕ್ಷ ರೂಪಾಯಿ ನೀಡಿದ್ದರು.ವೈದ್ಯೆಯನ್ನು ನಂಬಿಸಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ನ.22ರಂದು ಶೇಷಾದ್ರಿಪುರಂ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆಯಾಗಲು ದಿನಾಂಕ ನಿಗದಿಪಡಿಸಿದ್ದರು.
ಅಲ್ಲದೆ, ನ.20ರಂದು ಹೋಟೆಲ್‍ವೊಂದರಲ್ಲಿ ಇವರಿಬ್ಬರೂ ಭೇಟಿಯಾಗಿದ್ದರು. ಆದರೆ, ರಾಮಮೂರ್ತಿ ಮದುವೆ ದಿನ ರಿಜಿಸ್ಟರ್ ಕಚೇರಿಗೆ ಬಾರದೆ ಪರಾರಿಯಾಗಿದ್ದಾನೆ ಹಣವನ್ನೂ ವಾಪಸ್ ಕೊಟ್ಟಿಲ್ಲ. ಕೆಲಸವನ್ನೂ ಕೊಡಿಸಿಲ್ಲ ಎಂದು ವೈದ್ಯೆ ದೂರಿನಲ್ಲಿ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
