ಬೆಂಗಳೂರು
ರಾಜ್ಯ ಸರ್ಕಾರ ಕೇಂದ್ರದಿಂದ ಬರಬೇಕಾಗಿದ್ದ ರಾಜ್ಯದ ಪಾಲಿನ ಜಿ.ಎಸ್.ಟಿ. ಬಾಕಿ ಹಣವನ್ನು ಕೇಳುವ ಧೈರ್ಯ ಮಾಡುವ ಬದಲು ಸಾಲ ಮಾಡಲು ಒಪ್ಪಿಕೊಂಡು ರಾಜ್ಯದ ಜನರ ತಲೆಯ ಮೇಲೆ ಮತ್ತಷ್ಟು ಸಾಲದ ಹೊರೆ ಹೊರಿಸಲು ನಿರ್ಧರಿಸಿರುವುದು ರಾಜ್ಯದ ಜನತೆಯ ದುರ್ದೈವ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಅನಗತ್ಯ ವಿಷಯಗಳಿಗೆ ಬಾಯಿ ಬಡೆದುಕೊಳ್ಳುವ ಬಿಜೆಪಿ ನಾಯಕರು, ಜಿ.ಎಸ್.ಟಿ ಬಾಕಿ ಕೇಳುವ ವಿಷಯದಲ್ಲಿ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ರಾಜ್ಯದ ಸಲುವಾಗಿ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಅಭಿವೃದ್ಧಿಗೆ ಪೂರಕ ಎನ್ನುತ್ತಿದ್ದ ಬಿಜೆಪಿ ನಾಯಕರೆ ಕೇಂದ್ರದಲ್ಲಿ ತಮ್ಮ ಸರ್ಕಾರವಿದ್ದರೂ ರಾಜ್ಯದ ಪರವಾಗಿ ಮಾತನಾಡದೇ ಇರುವುದು ಬೇಸರದ ಸಂಗತಿ. 25 ಮಂದಿ ಬಿಜೆಪಿ ಸಂಸದರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದ ಜನರ ಋಣ ತೀರಿಸಲು ಸಿಕ್ಕಿರುವ ಅವಕಾಶ ಬಳಸಿಕೊಳ್ಳಬೇಕು. ಜಿ.ಎಸ್.ಟಿ. ಬಾಕಿ ಹಣಕ್ಕಾಗಿ ಪ್ರಧಾನಿ ಮುಂದೆ ಮಾತನಾಡಬೇಕು. ಸಇದು ಸಾಧ್ಯವಾಗದೇ ಇದ್ದರೆ ರಾಜಿನಾಮೆ ಕೊಡಬೇಕು ಎಂದು ಎಸ್.ಆರ್.ಪಾಟೀಲ್ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
