ಬರಗೂರು
ಬಿಜೆಪಿಯ ಒಂದು ಕಾಲು ವರ್ಷ ಆಳ್ವ್ವಿಕೆಯಲ್ಲಿ ನಿಮ್ಮ ಅಕೌಂಟ್‍ಗೆ ಹಣ ಬಂದಿದೆಯಾ? ರೈತರು, ಕಾರ್ಮಿಕರ, ಬೀದಿ ವ್ಯಾಪಾರಿಗಳ ಬಳಿ ಹಣ ಇದ್ಯಾ? ಸಣ್ಣ ಉದ್ಯೋಗ ಇದ್ಯಾ? ಇಲ್ಲ. ಈ ಸರ್ಕಾರದಿಂದ ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿಗೆ ಏಕೆ ಮತ ಹಾಕುತ್ತೀರಾ? ಸಿರಾ ಕ್ಷೇತ್ರದಿಂದ ಟಿಬಿ ಜಯಚಂದ್ರ ಗೆಲ್ಲಿಸಿದರೆ, ವಿಧಾನ ಸೌಧದಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಪಕ್ಕ ಕುಳಿತು ಯಡಿಯೂರಪ್ಪನವರನ್ನು ಜಗ್ಗಿಸುವ ಶಕ್ತಿ ಜಯಚಂದ್ರಗೆ ಬರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಸಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಹಂದಿಕುಂಟೆ ಗ್ರಾಪಂ ವ್ಯಾಪ್ತಿಯ ಪೂಜಾರಮುದ್ದನಹಳ್ಳಿ, ಅಗ್ರಹಾರ, ಹಂದಿಕುಂಟೆ, ಗೋಣಿಹಳ್ಳಿ, ಬಡಮಾರನಹಳ್ಳಿ, ಕಲ್ಲಹಳ್ಳಿ, ಕರೇಕ್ಯಾತನಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರ ರೋಡ್ ಶೂ ನಡೆಸಿ, ಪ್ರಚಾರ ಮಾಡಿ, ಮಾತನಾಡಿದರು.
ನಿಮ್ಮ ಕ್ಷೇತ್ರದ ಅಭಿವೃದ್ದಿಯಾಗಬೇಕಾದರೆ ಈ ಕೆಲಸ ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಅಸಾಧ್ಯ. ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಎರಡೂವರೆ ಸಾವಿರ ಕೋಟಿ ಐದು ವರ್ಷದಲ್ಲಿ ಸಿರಾ ಕ್ಷೇತ್ರಕ್ಕೆ ಬಂದಿರುವುದು ನನ್ನ ಕ್ಷೇತ್ರಕ್ಕೆ ಒಂದು ಕೋಟಿ ತರಲು ಆಗಲಿಲ್ಲ, ಸಿರಾ ಭಾಗದಲ್ಲಿ ಅಂತರ್ಜಲ ಅಭಿವೃದ್ದಿಯಾಗಲು ಚಕ್‍ಡ್ಯಾಮ್, ಸೇತುವೆ, ರಸ್ತೆಗಳು, ಹಾಸ್ಟ್ಟೆಲ್‍ಗಳು ಮಾಡಿದ್ದಾರೆ. ಅಭಿವೃದ್ಧಿಯ ಹರಿಕಾರ ಇದಕ್ಕೆ ಮತ್ತೊಂದು ಹೆಸರೆ ಟಿ.ಬಿ. ಜಯಚಂದ್ರ.
ಹಲವಾರು ಶಾಸಕರು ಎಂಪಿಯಾಗಿದ್ದಾರೆ ಯಾವುದಾದರೂ ಸಾಧಿಸಿ ಗುಡ್ಡೆ ಮಾಡಿಲ್ಲ. ಗೋಣಿಹಳ್ಳಿ ಗ್ರಾಮಕ್ಕೆ 6 ಕೋಟಿ ರೂ. ಹಣ ತಂದು ವಿವಿಧ ಕೆಲಸ ಮಾಡಿ ಸಾಧಿಸಿ ತೋರಿಸಿದ್ದಾರೆ. ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಮಾಡಿ ಇಂದು ಜಯಚಂದ್ರ ಕೂಲಿ ಕೇಳುತ್ತಿದ್ದಾರೆ. ದೇಶಕ್ಕೆ, ರಾಜ್ಯಕ್ಕೆ ಒಂದು ಸಂದೇಶ ಕಳುಹಿಸಬೇಕು. ವಿಧಾನಸೌಧದಲ್ಲಿ ನನ್ನ ಪಕ್ಕ ಕುಳಿತು ಸಿರಾ ಜನತೆ ಬಗ್ಗೆ ಮಾತನಾಡಬೇಕು. ನನಗೆ ಸೂಕ್ತವಾದ ವ್ಯಕ್ತಿ ಎಂದರೆ ಟಿ.ಬಿ. ಜಯಚಂದ್ರ. ಹಿರಿಯರಿದ್ದಾರೆ, ನೂರಾರು ನಾಯಕರನ್ನು ಸೃಷ್ಟಿ ಮಾಡುವ ಶಕ್ತಿ ಇವರಿಗಿದೆ. ಈ ಹರಿಕಾರನಿಗೆ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಕೊಂಡೊಯ್ಯೊ ಶಕ್ತಿ, ಬುದ್ದಿವಂತಿಕೆ ಇದೆ. ಪ್ರತಿಯೊಬ್ಬರು ಇವರಿಗೆ ಆಶೀರ್ವಾದ ಮಾಡುವ ಮೂಲಕ ತಮ್ಮ ಕೈ ಬಲ ಪಡಿಸುವಂತೆ ಹೇಳಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ. ಜಯಚಂದ್ರ ಮಾತನಾಡಿ, ಕಳೆದ ಬಾರಿ ನಾನು ಸಚಿವನಾಗಿದ್ದಾಗ ಸಿರಾ ಕ್ಷೇತ್ರಕ್ಕೆ ಎರಡೂವರೆ ಕೋಟಿ ರೂ. ತಂದು ಅಭಿವೃದ್ಧಿ ಪಡಿಸಿದ್ದೇನೆ. ನನಗೆ ಮತ ನೀಡುವ ಮೂಲಕ ಮುಂದಿನ ಯೋಜನೆಗಳನ್ನು ತಂದು ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಪಡಿಸಲು ಸಹಕಾರ ನೀಡಿ ಎಂದರು.
ಡಿಸಿಸಿ ಬ್ಯಾಂಕ್ ತಾಲ್ಲೂಕು ನಿರ್ದೇಶಕ ಜಿ.ಎಸ್. ರವಿ, ಹಂದಿಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್,ಎಲ್. ನಾರಾಯಣಪ್ಪ, ಪಿ.ಬಿ. ನರಸಿಂಹಯ್ಯ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಲ್. ಮುಕುಂದಪ್ಪ, ಅನಿಲ್ ಕುಮಾರ್, ಸಿದ್ದಪ್ಪ, ಸಿದ್ದೇಶ್, ಕಾಂತರಾಜು, ಬೋರೇಗೌಡ, ದೇವರಾಜು, ಸುರೇಶ್, ಕರೇಗೌಡ, ಸೀತಾರಾಮು, ರಂಗನಾಥ್, ಅಳ್ಳಪ್ಪ, ಮದ್ದಣ್ಣ, ಅಗ್ರಹಾರ ಜಗನ್ನಾಥ್, ರಘು, ಸಿದ್ದೇಶ್, ಗೋಣಿಹಳ್ಳಿ ದೇವರಾಜು, ಹೆಚ್.ಎಲ್ ರಂಗನಾಥ್, ಮಹೇಂದ್ರ ಗೌಡ, ತುಮಕೂರು ತಿಮ್ಮಣ್ಣ, ರೋಖ್ ಸಾಬ್, ಸುರೇಶ್ ಗೌಡ ಇತರೆ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ