ಹಿರಿಯೂರು
ಹಿರಿಯೂರು ನಗರ ಸೇರಿದಂತೆ ಇಲ್ಲಿನ ವಿವಿಧ ಬಡಾವಣೆಗಳಲ್ಲಿ ನಾಯಿಗಳ ಹಾವಳಿ ತೀರಾ ಹೆಚ್ಚಾಗಿದ್ದು ಸಾರ್ವಜನಿಕರು ಓಡಾಡಲು ಭಯಭೀತರಾಗಿದ್ದಾರೆ ಎಂದು ನಗರಸಭೆ ಸದಸ್ಯ ಎ.ಪಾಂಡುರಂಗ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಯಾವುದೇ ರಸ್ತೆಗಳಿಗೆ ಹೋಗಲಿ ಅಥವಾ ಯಾವುದೇ ಬಡಾವಣೆಗಳಿಗೆ ಹೋಗಲಿ ನಾಯಿಗಳು ಹಿಂಡು ಹಿಂಡಾಗಿ ಬವ್ ಬವ್ ಎಂದು ಜಗಳ ಆಡುತ್ತಾ ಇರುವ ದೃಶ್ಯ ಸಾಮಾನ್ಯವಾಗಿದೆ.
ದಾರಿಯಲ್ಲಿ ಓಡಾಡುವವರು, ಮಕ್ಕಳು ವೃದ್ಧರು, ವಾಕಿಂಗ್ ಮಾಡುವವರು ಶ್ವಟ್ಟರ್ ಧರಿಸಿದವರ ಮೇಲೆ ಗುರ್ ಎಂದು ಹೋಗುತ್ತವೆ. ಹಾಲು ಬ್ರೆಡ್ ತಿಂಡಿ ತಿನಿಸುಗಳನ್ನು ಕಸಿದುಕೊಳ್ಳುತ್ತವೆ. ಅಲ್ಲದೇ ಬೈಕ್ ಸವಾರರಿಗೂ ಅಟ್ಟಿಸಿಕೊಂಡು ಹೋಗುತ್ತವೆ. ಹಿರಿಯೂರಿನಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಮುಕ್ತಿ ಎಂದು ಎಂದು ಪಾಂಡುರಂಗ ನಗರಸಭೆಯವರನ್ನು ಪ್ರಶ್ನಿಸಿದ್ದಾರೆ. ಅಧಿಕಾರಿ ವರ್ಗದವರು ಇತ್ತ ಗಮನಿಸಿ ತಕ್ಷಣ ಹಿರಿಯೂರಿನಲ್ಲಿ ಈ ನಾಯಿಗಳ ಹಾವಳಿಯಿಂದ ಮುಕ್ತಿ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
