ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸುವುದು ದೇಶ ಪ್ರೇಮ : ಕೆ.ಆರ್.ನಂದಿನಿ

ಸನ್ಮಾನಿಸುವ ಭರದಲ್ಲಿ ಸಾಮಾಜಿಕ ಅಂತರಮರೆತ ಕೊರೊನಾ ವಾರಿಯರ್ಸ್

ತಿಪಟೂರು :

      ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಸ್ವಾತಂತ್ಯ ಬಂದಿದ್ದು ನಮ್ಮ ದೇಶದ ರಕ್ಷಣೆಗಾಗಿ ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳಿದ್ದು ಅವುಗಳನ್ನು ಪಾಲಿಸುವುದು ಸಹ ದೇಶಪ್ರೇಮವಾಗಿದೆ ಎಂದು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.

      ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನೆಡದ 74ನೇ ಸ್ವಾಂತ್ರ್ಯೋತ್ರವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ನಾವು ಸ್ವಾತಂತ್ರ್ಯ ದಿನದಂದು ನಮ್ಮ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದರ ಜೊತೆಗೆ, ಸಂಚಾರಿ ನಿಯಮ, ಕಾನೂನು ಸುವ್ಯವಸ್ಥೆ ಪಾಲಿಸುತ್ತೇನೆಂದು ಪ್ರತಿಜ್ಞೆಮಾಡಿ ಎಂದು ಕರೆನೀಡಿದ ಅವರು ಪ್ರತಿ ಭಾರಿ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದು ಅಬಾಲವೃದ್ಧರಾದಿಯಾಗಿ ಸಂತೋಷವಿರುತ್ತಿತ್ತು ಆದರೆ ಈ ಬಾರಿ ಕೊರೊನಾ ನಮ್ಮ ಸಂಂಭ್ರಮಕ್ಕೆ ತಣ್ಣೀರೆರಚಿದೆ. ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ನೀಡಿ ಅವರನ್ನು ಬುದ್ದಿವಂತರನ್ನಾಗಿ ಮಾಡುವ ಭರದಲ್ಲಿ ಮಕ್ಕಳಿಗೆ ತಮ್ಮದೇ ಆದ ಸಂಕೋಲೆಗಳನ್ನು ಬೀಗಿಯುತ್ತಿದ್ದಾರೆ.

     ಇದು ಮಕ್ಕಳ ಸ್ವತಂತ್ರ್ಯವನ್ನು ಕಸಿಯುತ್ತಿದ್ದು ಹಕ್ಕಿಗಳಿಗೆ ಹಾರಲು ರೆಕ್ಕಿ ಸಾಮಥ್ರ್ಯವಿದ್ದರು ರೆಕ್ಕೆಯನ್ನು ಕಟ್ಟಿದಂತೆ ಬಾಸವಾಗಿ ಹಾರುವುದನ್ನೆ ಮರೆತಂತಾಗುತ್ತದೆ ಆದ್ದರಿಂದ ಮಕ್ಕಳನ್ನು ಸ್ವೇಚ್ಚೆಯಾಗಿ ಬಿಟ್ಟು ನಿಗಾವಹಿಸಿ ಭವ್ಯಭಾರತದ ಪ್ರಜೆಗಳನ್ನಾಗಿ ಮಾಡಿ ಎಂದ ಅವರು ಸ್ವತಂತ್ರ ಬಂದ ನಂತರ ನಮ್ಮ ದೇಶ ಎಲ್ಲಾ ರೀತಿಯಲ್ಲಿಯೂ ಸಾಧನೆ ಮಾಡಿ ಅನೇಕಾರು ದೇಶಕ್ಕೆ ಮಾದರಿಯಾಗಿದೆ, ಬಾಹ್ಯ ಶತ್ರುಗಳನ್ನು ಹೋಡಿಸಿದ್ದೇವೆ, ನಮ್ಮ ಅಂತರಿಕ ಶತ್ರುಗಳ ವಿರುದ್ಧ ಹೋರಾಟ ಮಾಡಬೇಕಿದೆ, ದೇಶ ಕಾಯುವುದು ಒಂದು ರೀತಿಯ ದೇಶ ಪ್ರೇಮವಾದರೆ, ಎಲ್ಲರೂ ತಾವು ಮಾಡುವ ಕೇಲಸಗಳಲ್ಲಿಯೇ ದೇಶದ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಕೂಡ ದೇಶ ಪ್ರೇಮವಾಗುತ್ತದೆ, ನೇಗಿಲಯೋಗಿ ಕೂಡ ನಿಜವಾದ ದೇಶಭಕ್ತನಾಗಿದ್ದು ಪರೋಕ್ಷವಾಗಿ ಯೋಧನಿಗಿಂತ ಮಿಗಿಲಾಗಿ ದೇಶವನ್ನು ಕಾಯುತ್ತಿದ್ದಾನೆ ಎಂದರು.

   ಶಾಸಕ ಬಿ.ಸಿ.ನಾಗೇಶ್ ಮಾತನಾಡಿ ಈ ಬಾರಿ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಕೊರೊನಾ ಬಲಿತೆಗೆದುಕೊಂಡಿದೆ ಆದರೆ ಸೋಲೆ ಗೆಲುವಿನ ಮೆಟ್ಟಿಲು ಎಂಬಂತೆ 75ನೇ ಸ್ವಾತಂತ್ರ್ಯೋತ್ಸವಕ್ಕೆ ತಯಾರಾಗೋಣ ಎಂದು ಕರೆನೀಡಿದ ಅವರು ಹಿಂದಿನ ಸರ್ಕಾರಗೂ ಜನರಿಗೆ ಘೋಷಿಸಿದ ಯೋಜನೆಗಳು ಜನರ ಪಾಲಿಗೆ ತಲುಪುತ್ತಲೇ ಇರಲಿಲ್ಲ ಆದರೆ ಈಗಿನ ಕೇಂದ್ರದ ಮೋದಿ ಸರ್ಕಾರ ಜನರಿಗೆ ನೇರವಾಗಿ ಖಾತೆಗಳಿಗೆ ತಲುಪುವಂತಹ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದುವರೆಗೋ ಯಾವುದೇ ಹಗರಣಗಳು ಇಲ್ಲದೇ ಸ್ವಚ್ಚವಾಗಿದೆ ಎಂದು ತಿಳಿಸಿದರು.

    ಸನ್ಮಾನಿಸುವ ಭರದಲ್ಲಿ ಸಾಮಾಜಿಕ ಅಂತರ ಮರೆತರು : ಉಪವಿಭಾಗಮಟ್ಟದ ತಿಪಟೂರು, ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿಯ ಕೊರೊನಾ ವಾರಿಯರ್ಸ್‍ಗಳಿಗೆ ಮತ್ತು ಎಸ್.ಎಸ್.ಎಲ್.ಸಿಯಲ್ಲಿ ಅತೀಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಭರದಲ್ಲಿ ಅಧಿಕಾರಿಗಳಾದಿಯಾಗಿ ಎಲ್ಲರೂ ಸಾಮಾಜಿಕ ಅಂತರವಿರಲಿ ದೈಹಿಕಅಂತರವನ್ನು ಕಾಪಾಡಲಾಗದೇ ಇದ್ದದ್ದು ವಿಪರ್ಯಾಸವಾಗಿದ್ದು ಇದುವರೆಗೂ ಸಾವಿರಾರೂ ರೂಪಾಯಿಗಳ ವೆಚ್ಚದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸಾಮಾಜಿಕ ಅಂತರ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಯಿತು.

    ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಶಿವಸ್ವಾಮಿ, ಜಿ.ಪಂ ಸದಸ್ಯ ಜಿ.ನಾರಾಯಣ್, ಎ.ಪಿ.ಎಂ.ಸಿ ಅಧ್ಯಕ್ಷ ಬಜಗೂರು ಮಂಜುನಾಥ್, ತಹಸೀಲ್ದಾರ್ ಚಂದ್ರಶೇಖರ್, ಕ್ಷೇತ್ರ ಶಿಕ್ಷಾಣಾಧಿಕಾರಿ ಪ್ರಭುಸ್ವಾಮಿ, ಡಿ.ವೈ.ಎಸ್ಪಿ, ನಗರಸಭಾ ಪೌರಾಯುಕ್ತ ಉಮಾಕಾಂತ್ ಎಲ್ಲಾ ಉಪವಿಭಾಗ ಮಟ್ಟದ ಎಲ್ಲಾ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap