ತಿಪಟೂರು
ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ
ಕಾಲೇಜು ಪ್ರಾರಂಭವಾಗಿ 15 ದಿನಗಳು ಕಳೆದರೆ ಇತ್ತ ಪಾಠಪ್ರವಚನಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳ ಸ್ಥಿತಿ ಡೋಲಾಯ ಮಾನವಾಗಿದ್ದು ಸಾಧ್ಯವಾದಷ್ಟು ಬೇಗ ಅತಿಥಿ ಶಿಕ್ಷಕರನ್ನಾದರು ನೇಮಿಸಿದರೆ ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿನ ಪ್ರಯೋಜನವಾಗ ಬಹುದೆಂಬ ಆಶಾಭಾವನೆಯಲ್ಲಿ ವಿದ್ಯಾರ್ಥಿಗಳು ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯದ 10 ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದ್ದು ಫಲಿತಾಂಶಲ್ಲೂ ಹಿಂದೆ ಬಿದ್ದಿಲ್ಲ. ಈ ಬಾರಿಯ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ 96%, ವಾಣಿಜ್ಯ ವಿಭಾಗದಲ್ಲಿ 95% ಮತ್ತು ವಿಜ್ಞಾನ ವಿಭಾಗದಲ್ಲಿ 57% ಫಲಿತಾಂಶ ಪಡೆದಿದ್ದು ಇದರ ಉಪನ್ಯಾಸಕರ ಜೊತೆಗೆ ಹಿಂದೆ ಹೆಚ್ಚಿನದ್ದಾಗಿ ಅತಿಥಿ ಶಿಕ್ಷಕರ ಕೊಡುಗೆ ಮರೆಯುವಂತಿಲ್ಲ. ಜೊತೆಗೆ ಕಾಲೇಜು ಪ್ರಾರಂಭವಾಗಿ ದಶಕದಲ್ಲಿ ಸುಮಾರು 175 ರಿಂದ 200 ವಿದ್ಯಾರ್ಥಿಗಳು ಸರ್ಕಾರಿ ಸೇವೆಗೆ ಆಯ್ಕೆಯಾಗಿರುವುದು ಕಾಲೇಜಿಗೆ ಮೆರುಗನ್ನು ನೀಡುತ್ತಿದೆ.
ರಾಜ್ಯದ ಎಷ್ಟೋ ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಸ್ಥಿತಿಯಲ್ಲಿವೆ. ಆದರೆ ಇದಕ್ಕೆ ಹೊರತಾಗಿ ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೃಢವಾಗಿ ನಿಂತಿದ್ದು ಉಪನ್ಯಾಸಕರ ಕೊರತೆಯನ್ನು ಎದುರಿಸುತ್ತಿದೆ. 2007-08ನೇ ಸಾಲಿನಲ್ಲಿ ಪ್ರಾರಂಭವಾಗಿ ಮೊನ್ನೆ ತಾನೆ ದಶಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರುವ ಈ ಕಾಲೇಜು ರಾಜ್ಯ ಸರ್ಕಾರಿ ಕಾಲೇಜುಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.
2007-08 ರಲ್ಲಿ 500 ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ಇಂದು 2012-13ನೇ ಸಾಲಿನಲ್ಲಿ 3356 ವಿದ್ಯಾರ್ಥಿಗಳು ಮತ್ತು ಈ ಸಾಲಿನಲ್ಲು 3000 ವಿದ್ಯಾರ್ಥಿಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ಕಲಾ 7×3=21 ವಿಭಾಗದಲ್ಲಿ ವ್ಯಾಸಂಗದ ವಿಭಾಗಗಳು, ವಿಜ್ಞಾನ ವಿಭಾಗದಲ್ಲಿ 5×3=15 ವಿಭಾಗಗಳು, ವಾಣಿಜ್ಯ ವಿಭಾಗದಲ್ಲಿ 5×3=15, ಬಿ.ಬಿ.ಎಂ 3 ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಇದರ ಜೊತೆಗೆ ಸ್ನಾತಕೋತ್ತರ ವಿಭಾಗದಲ್ಲೂ ವಿದ್ಯಾರ್ಥಿಗಳಿದ್ದು ಇಷ್ಟೆಲ್ಲಾ ಇರುವ ಕಾಲೇಜಿಗೆ ಕೇವಲ 2018-19ನೇ ಸಾಲಿನಲ್ಲಿ ಬೋಧಕ ವರ್ಗ 48, ಬೋಧಕೇತರ ಸಿಬ್ಬಂದಿ 15 ಜನರಿದ್ದು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಉಪನ್ಯಾಸಕರ ಕೊರತೆಯು ಎದ್ದುಕಾಣುತ್ತಿದೆ.
ಕಾಲೇಜಿನಲ್ಲಿ 34 ಆಡಳಿತಾತ್ಮಕ ಸಮಿತಿಗಳು ಕಾರ್ಯನಿವಹಿಸುತ್ತಿದ್ದು ಇವುಗಳಿಗೆ ಒಬ್ಬೊಬ್ಬರು ಮೇಲ್ವಿಚಾರಕರೆಂದರೆ 34 ಜನರಾಗುತ್ತಾರೆ. ಆದರೆ ಕಾಲೇಜು ಸಿಬ್ಬಂದಿಗಳು 45 ಜನರಿದ್ದರೆ, ಅವುಗಳನ್ನು ಯಾವಾಗ ನಿರ್ವಹಿಸುತ್ತಾರೆ, ಇಲ್ಲ ಪಾಠಪ್ರವಚನಗಳನ್ನು ಮಾಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಅತಿಥಿ ಶಿಕ್ಷಕರ ಗೋಳು ಹೇಳತೀರದು :
ಇನ್ನು ಇಷ್ಟೆಲ್ಲಾ ವಿದ್ಯಾರ್ಥಿಗಳಿದ್ದು ಕರ್ನಾಟಕದಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಅತಿಥಿ ಶಿಕ್ಷಕರುಗಳನ್ನೊಳಗೊಂಡ ಕಾಲೇಜೆಂದು ಹೆಸರುವಾಸಿಯಾಗಿದ್ದು ಇತ್ತ ಅತಿಥಿ ಶಿಕ್ಷಕರುಗಳು ತಮ್ಮನ್ನು ತಾವೆ ತೊಡಗಿಸಿಕೊಂಡು ಪಾಠಪ್ರವಚನಗಳನ್ನು ಮಾಡುತ್ತಿದ್ದಾರೆ. ಆದರೆ ಅವರಿಗೂ ಸೂಕ್ತ ಸೇವಾಭದ್ರತೆಯಿಲ್ಲ ಮತ್ತು ಅದನ್ನೇ ನಂಬಿಕೊಂಡು ತಮ್ಮ ಹೊಟ್ಟೆಪಾಡನ್ನು ನೋಡಿಕೊಳ್ಳಲಾಗದ ಸ್ಥಿಯಲ್ಲಿರುವುದರ ಜೊತೆಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಿ ಅದು ಯಾವಾಗ ಬರುತ್ತದೋ, ನಮ್ಮದು ಆಗುತ್ತದೋ, ಇಲ್ಲವೋ ಎಂಬ ಚಿಂತೆಯಲ್ಲಿ ದಿನವನ್ನು ದೂಡುತ್ತಿದ್ದಾರೆ.
ಬೋರ್‍ವೆಲ್‍ನಲ್ಲಿ ನೀರಿಲ್ಲ : ಶೌಚಾಲಯಗಳನ್ನು ನೋಡಲಾಗುತ್ತಿಲ್ಲ.
ಬೋರ್‍ವೆಲ್‍ನಲ್ಲಿ ನೀರಿಲ್ಲದೆ ಕುಡಿಯುವ ನೀರಿನ ಕೊರತೆಯನ್ನು ಹೆಚ್ಚಾಗಿ ಅನುಭವಿಸುತ್ತಿದ್ದು ಕುಡಿಯುವ ನೀರನ್ನು ಟ್ಯಾಂಕರ್ ಮತ್ತು ಖಾಸಗಿಯವರ ಮುಖಾಂತರ ಹಾಕಿಸಿಕೊಳ್ಳಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಶೌಚಾಲಯದ ದುಸ್ಥಿತಿಯನ್ನು ನೀರಿಲ್ಲದೆ ಊಹಿಸಿಕೊಳ್ಳಲಾಗುತ್ತಿಲ್ಲ. ಇನ್ನು ವಿದ್ಯಾರ್ಥಿಗಳು ಕೊಠಡಿಗಳಿಗೆ ಅಲೆಯುವಂತಾಗಿದ್ದು ಪ್ರತಿಯೊಂದಕ್ಕೂ ರಾಷ್ಟ್ರೀಯ ಹೆದ್ದಾರಿ206ನ್ನು ದಾಟಬೇಕಾಗಿದ್ದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದ್ದರಿಂದ ಇಲ್ಲೊಂದು ಸ್ಕೈವಾಕ್ ನಿರ್ಮಾಣ ಮಾಡಿದರೆ ಅಪಘಾತಗಳು ಕಡಿಮೆಯಾಗುತ್ತದೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಮತ್ತು ಅಧ್ಯಕ್ಷರಾದ ಶಾಸಕರು ಸ್ವಲ್ಪ ಮುತುವರ್ಜಿ ವಹಿಸಿದರೆ ಕಾಲೇಜು ಇನ್ನಷ್ಟು ಅಭಿವೃದ್ಧಿಯಾಗಿ ರಾಜ್ಯದಲ್ಲೇ ಪ್ರಥಮಸ್ಥಾನದಲ್ಲಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ