ಕುಷ್ಟರೋಗದ ಬಗ್ಗೆ ಹೆದರಿಕೆ ಬೇಡ,ಎಚ್ಚರಿಕೆ ಇರಲಿ

ಹುಳಿಯಾರು

       ಕುಷ್ಠರೋಗವು ತುಂಬಾ ಕಡಿಮೆ ಪ್ರಮಾಣದಲ್ಲಿ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದ್ದುಕುಷ್ಟರೋಗದ ಬಗ್ಗೆ ಹೆದರಿಕೆ ಬೇಡ, ಎಚ್ಚರಿಕೆ ಇರಲಿ ಎಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯಾಧಿಕಾರಿ ವೆಂಕಟರಾಮಯ್ಯ ತಿಳಿಸಿದರು.

       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಷ್ಟರೋಗ ವಿಭಾಗದ ಸಹಯೋಗದೊಂದಿಗೆ ಹುಳಿಯಾರು ಪಟ್ಟಣದ ಕೇಶವ ವಿದ್ಯಾಮಂದಿರದಲ್ಲಿ ಬುಧವಾರದಂದು ಆಚರಿಸಲಾದ ಕುಷ್ಟರೋಗ ನಿವಾರಣಾ ಪಕ್ಷಾಚರಣೆಯಲ್ಲಿ ಅವರು ಮಾತನಾಡಿದರು.
ಕುಷ್ಠರೋಗವು ಮೈಕ್ರೋ ಬ್ಯಾಕ್ಟಿರಿಯಾ ಲೆಪ್ರೇ ಎಂಬ ರೋಗಾಣುವಿನಿಂದ ಬರುವ ಮತ್ತು ತುಂಬಾ ಕಡಿಮೆ ಪ್ರಮಾಣದಲ್ಲಿ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದೆ ಎಂದರು.

       ಕುಷ್ಟರೋಗ ವಂಶ ಪಾರಂಪರ್ಯವಲ್ಲ, ಜನ್ಮತಹ ಯಾರು ಕುಷ್ಠರೋಗಿಗಳಾಗಿ ಹುಟ್ಟುವುದಿಲ್ಲ. ಕುಷ್ಟರೋಗ ಲಕ್ಷಣಗಳು ಕಂಡು ಬಂದ ಮೇಲೆಯೂ ರೋಗಿ ಶೀಘ್ರ ಚಿಕಿತ್ಸೆ ಪಡೆಯದೇ ರೋಗದ ಬಗ್ಗೆ ನಿಗಾವಹಿಸದಿದ್ದಲ್ಲಿ ಆತನಲ್ಲಿ ಅಂಗವಿಕಲತೆ ಉಂಟಾಗುತ್ತದೆಯೇ ಹೊರತು ರೋಗದಿಂದ ಅಂಗವಿಕಲತೆ ಬರುವುದಿಲ್ಲ. ಎಲ್ಲಾ ಕುಷ್ಟ ರೋಗಿಗಳನ್ನು ಯಾವ ಹಂತದಲ್ಲಾದರೂ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ ಎಂದರು.

       ಕುಷ್ಟರೋಗದ ಬಗ್ಗೆ ಸಲಹೆ ಮತ್ತು ಉಚಿತ ಚಿಕಿತ್ಸೆಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆ ಅಥವಾ ಕುಷ್ಟರೋಗ ಕಾರ್ಯಕ್ರಮದ ನಿರ್ಮೂಲನ ಕಚೇರಿಯನ್ನು ಸಂಪರ್ಕಿಸುವಂತೆ ಅವರು  ತಿಳಿಸಿದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಚಂದ್ರಕಾಂತ್, ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಬಿ.ಸನತ್ ಕುಮಾರ್, ಶಿಕ್ಷಕರಾದ ಚಂದ್ರಕಲಾ, ಮಧು, ಶ್ರೀನಿವಾಸ್, ಸುಗುಣ, ಯಶಸ್ವಿನಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link