ಸಹಕಾರಿ ಬ್ಯಾಂಕ್ ನಲ್ಲಿ ಯಾವುದೇ ಜಾತಿ, ಮತ, ಪಕ್ಷ ಭೇದÀಭಾವಗಳು ಅಂಕುರಿಸಬಾರದು-ಕೆ.ಎನ್.ರಾಜಣ್ಣ

ಶಿರಾ

       ದೇಶದ ಸಹಕಾರಿ ತತ್ವದಡಿಯಲ್ಲಿ ಯಾವ ಸಹಕಾರಿಗಳೇ ಆಗಲಿ ಆತ ಯಾವುದೇ ಪಕ್ಷ, ಜಾತಿ ಹಾಗೂ ಮತ ಪಂಥಗಳನ್ನು ಮೀರಿ ಸಹಕಾರ ಸಂಘಗಳಲ್ಲಿ ಪ್ರಾಮಾಣಿಕವಾಗಿ ದುಡಿಯುವಂತಾದಾಗ ಮಾತ್ರ ಅರ್ಹ ಫಲಾನುಭವಿಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಾಧ್ಯ ಎಂದು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

         ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ಸೋಮವಾರ ಕೈಗೊಳ್ಳಲಾಗಿದ್ದ ಕೆ.ಸಿ.ಸಿ. ಸಾಲ ವಿತರಣಾ ಸಮಾರಂಭ ಹಾಗೂ ಬೀದಿ ಬದಿ ವ್ಯಾಪಾರಿಗಳ ಸಾಲ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

         ಕಳೆದ ಒಂದು ವರ್ಷದಲ್ಲಿ ಬ್ಯಾಂಕಿನ ಕ್ರೋಡೀಕೃತ ಸಂಪನ್ಮೂಲವನ್ನು ಗಮನದಲ್ಲಿಟ್ಟುಕೊಂಡು ಹೊಸ ರೈತರಿಗೆ ಸಾಲ ನೀಡುವ ಮೂಲಕ ಅವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲಾಗಿದೆ. ಕನಿಷ್ಠ 5 ಗುಂಟೆ ಜಮೀನಿದ್ದ ರೈತರಿಗೂ ಸುಮಾರು 25,000 ರೂ.ಗಳಿಂದ ಸಾಲ ನೀಡಲಾಗಿದೆ. ನಮ್ಮ ಉದ್ದೇಶ ಅತ್ಯಂತ ಸಣ್ಣ ರೈತನೂ ಕೂಡ ಸಾಲ ಸೌಲಭ್ಯ ಪಡೆದು ಜಮೀನಿನ ಅಭಿವೃದ್ಧಿ ಕೈಗೊಳ್ಳಲಿ ಅನ್ನುವುದೇ ಆಗಿತ್ತು ಎಂದರು.

         ಕಳೆದ ಒಂದೇ ವರ್ಷದಲ್ಲಿ ರೈತರಿಗೆ ನೀಡುವ ಸಲುವಾಗಿ ಬ್ಯಾಂಕಿನ ದುಡಿಯುವ ಬಂಡವಾಳದ ಸುಮಾರು 20 ಕೋಟಿ ರೂ.ಗಳನ್ನು ಸಾಲ ನೀಡಲಾಗಿದೆ. ಇಂತಹ ಸಾಲವನ್ನು ಬಹುತೇಕ ಎಲ್ಲಾ ರೈತರು ಸದ್ಬಳಕೆ ಮಾಡಿಕೊಂಡಿದ್ದಾರೆಂಬ ತೃಪ್ತಿ ನಮಗಿದೆ. ಯಾವ ರೈತರೇ ಆಗಲಿ ಬ್ಯಾಂಕಿನಿಂದ ನೀಡಿದ ಹಿಡಿಗಂಟಿನ ಸಾಲವನ್ನು ವ್ಯಯ ಮಾಡಬಾರದು ಎಂದು ರಾಜಣ್ಣ ತಿಳಿ ಹೇಳಿದರು.

        ರೈತರು ಕೇವಲ ವ್ಯವಸಾಯನ್ನಷ್ಟೇ ಮಾಡಿದರೆ ಸಾಲದು. ಆರ್ಥಿಕವಾಗಿ ಸಬಲರಾಗಬೇಕಾದರೆ ಉಪ ಕಸುಬುಗಳನ್ನೂ ಕೈಗೊಳ್ಳಬೇಕು. ರೈತರು ಹೆಚ್ಚಾಗಿ ಹೈನುಗಾರಿಕೆಯನ್ನು ಅನುಸರಿಸಿದಲ್ಲಿ ದುಡಿಯುವ ಬಂಡವಾಳ ಹೆಚ್ಚಾಗಿ ಕೌಟುಂಬಿಕ ಸಮಸ್ಯೆಗಳನ್ನು ನೀಗಿಸಿಕೊಳ್ಳಲು ಸಾಧ್ಯ ಎಂದರು.

      ಪೋಷಕರು ತಮ್ಮ ಮಕ್ಕಳಿಗೆ ಶೈಕ್ಷಣಿಕ ಭವಿಷ್ಯಕ್ಕೆಂದು ಹಾಕುವ ಹಣ ಒಂದು ರೀತಿಯಲ್ಲಿ ಠೇವಣಿಯ ಹಣವನ್ನು ಬ್ಯಾಂಕಿನಲ್ಲಿ ಇಟ್ಟಂತೆ. ಈ ಬಂಡವಾಳ ಇಂದಲ್ಲಾ ನಾಳೆ ಫಲವನ್ನು ಕೊಡುತ್ತದೆ. ಪೋಷಕರ ಇಂತಹ ಬಂಡವಾಳ ಹೂಡಿಕೆಯ ಹಣವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದರೆ ಶೈಕ್ಷಣಿಕ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಕೆ.ಎನ್.ರಾಜಣ್ಣ ಹೇಳಿದರು.

        ಬ್ಯಾಂಕಿನ ನಿರ್ದೇಶಕ ಜಿ.ಎಸ್.ರವಿ ಮಾತನಾಡಿ, ಬಡವರ ಬಂಧು ಬೀದಿ ಬದಿಯ ವ್ಯಾಪಾರಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುವ ಮೂಲಕ ಕೆ.ಎನ್.ರಾಜಣ್ಣ ಅವರು ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸುವ ಮಹತ್ವದ ಯೋಜನೆಯನ್ನು ರೂಪಿಸಿದ್ದಾರೆ. ಅವರ ಕನಸಿನ ಕೂಸಾದ ಬೀದಿ ಬದಿಯ ವ್ಯಾಪಾರಿಗಳ ಬಡವರ ಬಂಧು ಯೋಜನೆ ಸಫಲ ಕಾಣುವುದರಲ್ಲಿ ಎರಡು ಮಾತಿಲ್ಲ. ಇಂತಹ ಅದೆಷ್ಟೋ ಯೋಜನೆಗಳಿಂದ ಬ್ಯಾಂಕಿನ ಪ್ರಗತಿಗೂ ಕಾರಣವಾಗಿದೆ ಎಂದರು.

         ಮತ್ತೋರ್ವ ನಿರ್ದೇಶಕ ಗಂಗಣ್ಣ ಮಾತನಾಡಿ, ಸಿದ್ಧರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಯೋಜನೆ ಹಾಗೂ ಶಾಲಾ ಮಕ್ಕಳಿಗೆ ಸರ್ಕಾರದ ಶೂ ಭಾಗ್ಯದಂತಹ ಯೋಜನೆಗಳು ಕಾರ್ಯರೂಪಕ್ಕೆ ಬರುವಲ್ಲಿ ಕೆ.ಎನ್.ರಾಜಣ್ಣ ಅವರ ಸಲಹೆ ಸೂಚನೆಗಳೂ ಕಾರಣವಾಗಿವೆ. ಬುಕ್ಕಾಪಟ್ಟಣ ಒಂದರಲ್ಲಿಯೇ ಸುಮಾರು 856 ಮಂದಿ ರೈತರಿಗೆ ಸಾಲ ವಿತರಣೆ ಮಾಡುತ್ತಿರುವ ಈ ಕಾರ್ಯಕ್ರಮ ಎಲ್ಲಾ ಸಹಕಾರ ಸಂಘಗಳಿಗೂ ಮಾದರಿಯಾಗಲಿದೆ ಎಂದರು.

         ಜಿ.ಪಂ. ಸದಸ್ಯ ಜಯಪ್ರಕಾಶ್ ಮಾತನಾಡಿ, ಕೆ.ಎನ್.ರಾಜಣ್ಣ ಅವರ ಜಾತ್ಯತೀತ ಮನೋಭಾವನೆಗಳು ಸಹಕಾರ ಬ್ಯಾಂಕ್‍ನ ಅಭಿವೃದ್ಧಿಗೆ ಕಾರಣವಾಗಿದೆ. ಅತ್ಯಂತ ಸಣ್ಣ ರೈತನನ್ನೂ ಕೂಡ ವಿಶ್ವಾಸದಿಂದ ಕಾಣುವ ಅವರ ಭಾವನೆಗಳು ಎಲ್ಲಾ ಸಹಕಾರಿಗಳಲ್ಲೂ ಇರುವಂತಾಗಬೇಕು ಎಂದರು.

        ಬ್ಯಾಂಕಿನ ನಿರ್ದೇಶಕ ರಾಜ್‍ಕುಮಾರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್, ಪಿ.ಎ.ಸಿ.ಎಸ್. ಅಧ್ಯಕ್ಷ ಗಿಡ್ಡಪ್ಪ, ಜಿ.ಪಂ. ಮಾಜಿ ಸದಸ್ಯ ಎಸ್.ರಾಮಚಂದ್ರಯ್ಯ, ತಾ.ಪಂ. ಮಾಜಿ ಅಧ್ಯಕ್ಷ ಜಿ.ಎನ್.ಮೂರ್ತಿ, ಎಚ್.ಜಿ.ಲಿಂಗಯ್ಯ, ಟಿ.ಡಿ.ಮಲ್ಲೇಶ್, ಮುಕುಂದಪ್ಪ, ಶಿರಾ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಮುಕುಂದಪ್ಪ, ಉಪಾಧ್ಯಕ್ಷ ಶಿವಣ್ಣ, ಹುಣಸೇಹಳ್ಳಿ ಶಿವಕುಮಾರ್, ಚಂಗಾವರ ಮಾರಣ್ಣ, ಗೋಪಿಕುಂಟೆ ಜೈರಾಮೇಗೌಡ ಸೇರಿದಂತೆ ತಾಲ್ಲೂಕಿನ ವಿವಿಧ ಪಿ.ಎ.ಸಿ.ಎಸ್. ಪದಾಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ವಿವಿಧ ಮುಖಂಡರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link