ಅಪಪ್ರಚಾರಕ್ಕೆ ಕಿವಿಗೊಡಬೇಡಿ :ಟಿ. ಆರ್.ಚಿಕ್ಕರಂಗಣ್ಣ

ತುಮಕೂರು

     ಬ್ಯಾಂಕಿನ ಸದಸ್ಯರ ಮತದಾನದ ಹಕ್ಕನ್ನು ತಾವು ರದ್ದು ಮಾಡಿಸಿರುವುದಾಗಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ರದ್ದಾಗಿರುವುದ್ದಕ್ಕೆ ಸಹಕಾರ ಇಲಾಖೆಯ ನಿಯಮ ಹಾಗೂ ಆದೇಶ ಕಾರಣ ಎಂದು ಶ್ರೀ ಭೈರವೇಶ್ವರ ಸಹಕಾರ ಬ್ಯಾಂಕ್ ಅಧ್ಯಕ್ಷ ಟಿ. ಆರ್.ಚಿಕ್ಕರಂಗಣ್ಣ ಹೇಳಿದರು.

     ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳ 23ರಂದು ನಡೆಯಲಿರುವ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರುಗಳ ಚುನಾವಣೆ ತಾವು ಸ್ಪರ್ಧೆ ಮಾಡಿದ್ದು ತಮ್ಮ ಎದುರಾಳಿ ಸಿಂಡಿಕೇಟ್‍ನವರು ತಮ್ಮ ವಿರುದ್ಧ ಹಾಗೂ ಬ್ಯಾಂಕಿನ ಆರ್ಥಿಕ ವಹಿವಾಟಿನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹವರ ಮಾತು ನಂಬದೆ ಸದಸ್ಯರು ಸತ್ಯ ತಿಳಿಯಬೇಕು ಎಂದು ಮನವಿ ಮಾಡಿದರು.

    ಸಹಕಾರಿ ಕಾಯ್ದೆ ಅನ್ವಯ ಯಾವ ಸದಸ್ಯ ಸಹಕಾರಿ ಸಂಸ್ಥೆಯ ಮೂರು ಸರ್ವಸದಸ್ಯರ ಸಭೆಗೆ ಗೈರು ಹಾಜರಾಗಿದ್ದರೆ ಹಾಗೂ ಕನಿಷ್ಟ ಮೂರು ಬಾರಿ ಬ್ಯಾಂಕಿನಲ್ಲಿ ಹಣಕಾಸಿನ ವಹಿವಾಟು ನಡೆಸದಿದ್ದರೆ ಅಂತಹ ಸದಸ್ಯರು ಬ್ಯಾಂಕ್ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಕಳೆದುಕೊಳ್ಳುತ್ತಾರೆ. ಸದಸ್ಯರು ಮತದಾನದ ಹಕ್ಕು ವಚಿತರಾಗಿದ್ದರೆ ಅದು ಸಹಕಾರಿ ನಿಯಮದಿಂದಾಗಿಯೇ ಹೊರತು ತಾವು ರದ್ದು ಮಾಡಿಸಿಲ್ಲ ಎಂಬುದನ್ನು ಸದಸ್ಯರು ತಿಳಿಯಬೇಕು ಎಂದು ಟಿ. ಆರ್.ಚಿಕ್ಕರಂಗಣ್ಣ ಹೇಳಿದರು.

    ತಾವು ಶ್ರೀ ಭೈರವೇಶ್ವರ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ನಂತಹ ಬ್ಯಾಂಕಿನ ಬೆಳವಣಿಗೆಗೆ ಹಲವು ಕಾರ್ಯಕ್ರಮ ರೂಪಿಸಿದ್ದು, ಬ್ಯಾಂಕಿನ ಹಣಕಾಸಿನ ವ್ಯವಹಾರ ಸುವ್ಯವಸ್ಥಿತವಾಗಿ, ಲಾಭದಾಯಕವಾಗಿ ನಡೆಯುತ್ತಿದೆ. ಎದುರುದಾರರ ಅಪಪ್ರಚಾರಗಳಿಗೆ ಸದಸ್ಯರು ಕಿವಿಗೊಡಬಾರದು ಎಂದು ಹೇಳಿದರು.

    ತಾವು ಬ್ಯಾಂಕ್ ಅಧ್ಯಕ್ಷರಾದ ಮೇಲೆ ಶೇಕಡ 80ರಷ್ಟು ಹಳೆ ಸಾಲಗಳನ್ನು ವಸೂಲಿ ಮಾಡಲಾಗಿದೆ. ಸಾಲದ ಮಿತಿಯನ್ನು 15 ಲಕ್ಷದಿಂದ 55 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ಈ ಸ್ಟಾಂಪಿಂಗ್ ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕಿನ ಬೆಳ್ಳಿಹಬ್ಬ ಆಚರಿಸಿ ಎಲ್ಲಾ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಲಾಗಿದೆ. ಬೆಳ್ಳಿಹಬ್ಬಕ್ಕಾಗಿ ಬ್ಯಾಂಕಿನ ಯಾವುದೇ ಹಣ ಖರ್ಚು ಮಾಡದೆ. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆಗಾಗಿ ಬಂದ ಜಾಹೀರಾತು ಹಣದಲ್ಲಿ ಐದು ಲಕ್ಷ ರೂ ಉಳಿಸಿ, ಆ ಹಣಕ್ಕೆ ಡಿವಿಡೆಂಟ್ ಹಣ ಸೇರಿಸಿ ಭೈರವ ಸಭಾಂಗಣ ನಿರ್ಮಾಣ ಮಾಡಲಾಗಿದೆ. ಈ ಸಭಾಂಗಣವನ್ನು ಸದಸ್ಯರ ಕುಟುಂಬದ ಕಲ್ಯಾಣ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಲು ಸಮಿತಿ ತೀರ್ಮಾನ ಮಾಡಿದೆ ಎಂದು ಚಿಕ್ಕರಂಗಣ್ಣ ಹೇಳಿದರು.

    ಮುಂದಿನ ಐದು ವರ್ಷದ ಅವಧಿಗೆ ತಮ್ಮ ಸಿಂಡಿಕೇಟ್ ಅನ್ನು ಆಯ್ಕೆ ಮಾಡಿದರೆ ಬ್ಯಾಂಕಿನಲ್ಲಿ 8 ಕೋಟಿ ಇದ್ದ ಠೇವಣಿಯನ್ನು 30 ಕೋಟಿ ರೂ.ಗೆ ಕ್ರೂಢೀಕರಿಸಲಾಗುವುದು. ತುಮಕೂರಿನ ಉದ್ಯಮಿಗಳನ್ನು ಕರೆಸಿ ನಮ್ಮ ಬ್ಯಾಂಕಿನಲ್ಲಿ ಅವರು ವ್ಯವಹಾರ ಮಾಡಲು ಮನವೊಲಿಸುವುದು. ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ವ್ಯವಸ್ಥೆ ಮಾಡುವುದು. ಆರ್‍ಬಿಐ ಅನುಮತಿ ನೀಡಿದ ನಂತರ ತುರುವೇಕೆರೆ, ಸಿ.ಎಸ್.ಪುರ, ಗುಬ್ಬಿಯಲ್ಲಿ ಬ್ಯಾಂಕಿನ ಶಾಖೆ ಆರಂಭಿಸಲಾಗುವುದು ಎಂದು ತಿಳಿಸಿದರು.

      ಸದಸ್ಯರ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಹಣಕಾಸಿನ ನೆರವು ನೀಡಲಾಗುವುದು, ಸದಸ್ಯರ ಆರೋಗ್ಯ ಶಿಬಿರ ಏರ್ಪಡಿಸುವುದೂ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಚಿಕ್ಕರಂಗಣ್ಣರ ಸಿಂಡಿಕೇಟ್‍ನ ಅಭ್ಯರ್ಥಿಗಳಾದ ಆರ್. ರಾಮಲಿಂಗೇಗೌಡ, ಚಂದ್ರಶೇಖರ್, ಕೃಷ್ಣಮೂರ್ತಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap