ತುಮಕೂರು
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರ ಮೇಲೆ ಮಾಜಿ ಶಾಸಕರು ಇಲ್ಲ ಸಲ್ಲದ ಆರೋಪಗಳು ಮಾಡುತ್ತಾ, ದಾಖಲೆ ರಹಿತಿವಾಗಿ ಆಪಾದನೆಗಳನ್ನು ಮಾಡುತ್ತಿದ್ದು ಇದನ್ನು ನಿಲ್ಲಿಸದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಗ್ರಾಮಾಂತರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಎಚ್ಚರಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕರಾದ ಸುರೇಶ್‍ಗೌಡರು ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ. ಗೌರಿಶಂಕರ್ ಅವರು ಕೇವಲ ಒಂದು ವರ್ಷದಲ್ಲೇ 312 ಕೋಟಿ ರೂಗಳ ಅನುದಾನ ತಂದು ಅಭಿವೃದ್ಧಿ ಕೆಲಸಗಳು ಮಾಡುತ್ತಿರುವುದನ್ನು ಸಹಿಸಲಾರದೆ ಹತಾಶೆಯಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲಿ ಕಳ್ಳತನಗಳು ನಡೆದಿಲ್ಲವೇ ? ಈಗ ನಡೆಯುತ್ತಿರುವ ಕಳ್ಳತನಗಳಿಗೆ ಶಾಸಕರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಓರ್ವ ಕಾರ್ಯಕರ್ತ ಹಾಕಿದ್ದಂತಹ ಪೋಸ್ಟ್‍ಗೆ ಮಹಿಳೆಯರನ್ನು ಒಟ್ಟುಗೂಡಿಸಿ ಪೊರಕೆ ಹಿಡಿದು ಶಾಸಕರ ವಿರುದ್ಧ ಪ್ರತಿಭಟನೆ ಮಾಡಿದ್ದು ಖಂಡನೀಯ. ಶಾಸಕರು ಕಾರ್ಯಕರ್ತರಿಗೆ ಪೋಸ್ಟ್ ಹಾಕುವಂತೆ ತಿಳಿಸಿಲ್ಲ. ಈ ವಿಷಯ ತಿಳಿದ ನಂತರ ಆ ಯುವಕನಿಗೆ ಬುದ್ದಿವಾದ ಹೇಳಿದ್ದಾರೆ. ಅಂತವರ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿರುವುದು ತರವಲ್ಲ. ಜೊತೆಗೆ ಜಾತಿನಿಂದನೆ ಮಾಡುತ್ತಾ ಮಾತನಾಡುವುದು ಸರಿಯಲ್ಲ ಎಂದರು.
ಗೌರವಾಧ್ಯಕ್ಷೆ ವಿಜಯಕುಮಾರಿ ಮಾತನಾಡಿ, ಮಾಜಿ ಶಾಸಕರ ಆಡಳಿತದಲ್ಲಿ ಮಲ್ಲಸಂದ್ರದ ದೇವಸ್ಥಾನವೊಂದರಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಶಾಸಕರಿಗೂ ಮನವಿ ಮಾಡಲಾಗಿತ್ತು. ಆದರೆ ಅದರ ಬಗ್ಗೆ ಇಂದಿಗೂ ಮಾಹಿತಿ ಇಲ್ಲ. ಅಂತಹದ್ದು, ಈಗ ಕಾನೂನು ಪಾಲಿಸಿಕೊಂಡು ಕೆಲಸ ಮಾಡುತ್ತಿರುವ ಹಾಲಿ ಶಾಸಕರ ಮೇಲೆ ಮಾಜಿ ಶಾಸಕರ ಆಪಾದನೆಗಳು ಮಾಡುವುದನ್ನು ಬಿಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಂತಕುಮಾರಿಸುರೇಶ್, ಪುಷ್ಪಲತಾ, ನಾಗರತ್ನ, ನಾಗರತ್ನಮ್ಮ ಸೇರಿಂದತೆ ಇನ್ನಿತರರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.