ಸರ್ಕಾರಿ ಆಸ್ಪತ್ರೆಗೆ ಬಾರದೆ ಅಪಪ್ರಚಾರ ಮಾಡಬೇಡಿ..!

ಹುಳಿಯಾರು:

   ಸರ್ಕಾರಿ ಆಸ್ಪತ್ರೆ ಮೆಟ್ಟಿಲನ್ನೇ ತುಳಿಯದೆ ಅಪಪ್ರಚಾರ ಮತ್ತು ಅಪನಂಬಿಕೆ ಬೇಡ ಎಂದು ಹುಳಿಯಾರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ವೆಂಕಟರಾಮಯ್ಯ ಹಾಗೂ ಎಲ್.ಎಚ್.ವಿ.ಅನುಸೂಯಮ್ಮ ಅವರಿಬ್ಬರೂ ಮನವಿ ಮಾಡಿದ ಪ್ರಸಂಗ ಹುಳಿಯಾರಿನಲ್ಲಿ ನಡೆಯಿತು.

  ಇಲ್ಲಿನ ಆಜಾದ್ ನಗರದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಸ್ತನ್ಯ ಪಾನ ಸಪ್ತಾಹದ ಕಾರ್ಯಕ್ರಮದಲ್ಲಿ ಸುವರ್ಣ ವಿದ್ಯಾ ಕೇಂದ್ರದ ರಾಮಕೃಷ್ಣಪ್ಪ ಅವರು ಮಾತನಾಡುವ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗೂ ಹದಿನೈದು ಇಪ್ಪತ್ತು ಸಾವಿರ ಕೇಳುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಪುಕ್ಕಟ್ಟೆ ಹೆರಿಗೆ ಮಾಡಿ ಆರೈಕೆಗೆ ಹಣ ಸಹ ಕೊಡ್ತಾರೆ ಎಂದರು. ಇದನ್ನು ಕೇಳಿದ ಸಭೀಕರೊಬ್ಬರು ಸರ್ಕಾರಿ ಆಸ್ಪತ್ರೆಗೆ ಹೋಗಿ ಅಂತೀರಲ್ಲ ಅಲ್ಲಿ ವೈದ್ಯರೇ ಇರಲ್ಲ. ಓದರೆ ಸ್ಪಂದಿಸುವವರಿರಲ್ಲ ಸುಮ್ಮನಿರಿ ಸಾರ್ ಎಂದರು.

   ಸಬೀಕರ ಈ ಆರೋಪಕ್ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೆಂಕಟರಾಮಯ್ಯ ಮತ್ತು ಅನುಸೂಯಮ್ಮ ಇಬ್ಬರೂ ಎದ್ದು ನಿಂತು ಖಾರವಾಗಿ ಪ್ರತಿಕ್ರಿಯಿಸಿದರು. ನೀವು ಎಷ್ಟು ಬಾರಿ ಆಸ್ಪತ್ರೆಗೆ ಬಂದಿದ್ದೀರಿ, ಹೆರಿಗೆಗೆ ಎಷ್ಟು ಜನರನ್ನು ಕರೆದುಕೊಂಡು ಬಂದಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ಹುಳಿಯಾರು ಆಸ್ಪತ್ರೆಗೆ ಈಗ 24*7 ಆಸ್ಪತ್ರೆಯಾಗಿದ್ದು ಹಗಲಿನಲ್ಲಿ 1 ವೈದ್ಯರು ರಾತ್ರಿ 3 ಮಂದಿ ನರ್ಸ್ ಇರ್ತಾರೆ. ಆಸ್ಪತ್ರೆಗೆ ಬಾರದೆ ಸುಮ್ಮನೆ ಅಪಪ್ರಚಾರ ಮತ್ತು ಅಪನಂಬಿಕೆ ಮಾಡಬೇಡಿ ಎಂದರು.

   ಗರ್ಭಿಣಿಯರಂತೂ ತಾಯಿ ಕಾರ್ಡ್ ಪಡೆಯಲು ಮಧ್ಯರಾತ್ರಿ ಎನ್ನದೆ ಪೋನ್ ಮಾಡ್ತಾರೆ, ಪ್ರಭಾವಿಗಳಿಂದ ಒತ್ತಡ ತರುತ್ತಾರೆ, ಊಟತಿಂಡಿ ಮಾಡಲು ಬಿಡದೆ ದುಂಬಾಲು ಬಿದ್ದು ಮಾಡಿಸಿಕೊಳ್ಳುತ್ತಾರೆ. ಆದರೆ ಹೆರಿಗೆಗೆ ಮಾತ್ರ ಖಾಸಗಿ ಆಸ್ಪತ್ರೆಗೆ ಹೋಗ್ತಾರೆ. ಹೆರಿಗೆ ನಂತರ ಪುನಃ ಮಕ್ಕಳಿಗೆ ಚುಚ್ಚು ಮದ್ದು ಹಾಕಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಬಿಸಿಜಿ, ಪೆಂಟಾವೆಂಟ್, ಹೆಪಟೈಟಿಸ್ ಬಿ, ಒಪಿವಿ, ದಡಾರ ಹೀಗೆ ಒಂದೂವರೆ ವರ್ಷದವರೆವಿಗೂ ಬಂದು ಚಚ್ಚುಮದ್ದು ಹಾಕಿಸಿಕೊಳ್ತಾರೆ ಎಂದರು.

   ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಹೆರಿಗೆ ಸೌಲಭ್ಯಗಳಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಕಷ್ಟವಾದರೆ 108 ಆಬ್ಯೂಲೆನ್ಸ್‍ನಲ್ಲೇ ತಾಲೂಕು ಆಸ್ಪತ್ರೆಗೆ ಕಳುಹಿಸಿಕೊಟ್ಟು ಉಚಿತವಾಗಿ ಸಿಜೇರಿಯನ್ ಹೆರಿಗೆ ಸಹ ಮಾಡಿಸಿ 48 ಗಂಟೆಗಳ ಕಾಲ ಗರ್ಬಿಣಿ ಸಹಾಯಕರಿಗೆ ಊಟ, ತಿಂಡಿ ಕೊಟ್ಟು ನಂತರ ಮಗು-ನಗು ವಾಹನದಲ್ಲಿ ಮನೆಗೆ ಕಳುಹಿಸಿಕೊಡಲಾಗುತ್ತದೆ. ಹಾಗಾಗಿ ತಾಯಿ ಕಾರ್ಡ್ ಪಡೆದವರೆಲ್ಲರೂ ಹೆರಿಗೆಗೆ ಸರ್ಕಾರಿ ಆಸ್ಪತ್ರೆಗೆ ಬನ್ನಿ ಎಂದು ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link