ಹಾವೇರಿ
ಪೌರತ್ವ ತಿದ್ದಪಡೆ ಕಾಯ್ದೆ ವಿಚಾರದಲ್ಲಿ ಯಾರೂ ಶಾಂತಿ ಕದಡುವ ಹಾಗೂ ದಿಕ್ಕು ತಪ್ಪಿಸುವ ಕೆಲಸ ಆಗಬಾರದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 2014 ರಲ್ಲಿಯೇ ಈ ಕಾಯ್ದೆಯ ಬಗ್ಗೆ ಬಿಜೆಪಿ ಪಕ್ಷ ಪ್ರನಾಳಿಕೆಯಲ್ಲಿ ತಿಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ,ಗೃಹ ಸಚಿವ ಅಮಿತ್ ಷಾ ಕೆಲವೇ ಘಂಟೆಗಳಲ್ಲಿ ಜಾರಿಗೆ ತರಲು ನಿರ್ಧಾರ ಮಾಡಿದ್ದು ಅಲ್ಲ. ಈ ಕಾಯ್ದೆಯಿಂದ ಭಾರತೀಯ ಪ್ರಜೆಯಾದವರನ್ನು ಯಾರನ್ನು ಹೋರಗೆ ಇಡುವ ಪ್ರಶ್ನೆ ಬರುವುದಿಲ್ಲ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಹುಸಿ ಹುಳ್ಳು ಮಾತಿಗೆ ಕಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ದೇಶದ ಭದ್ರತೆ ಹಾಗೂ ಸಮಗ್ರತೆ ದೃಷ್ಠಿಕೋನದಿಂದ ದೇಶಕ್ಕೆ ಪೂರಕ ಕಾನೂನಾಗುವ ಭರವಸೆ ಇದೆ ಎಂದರು.
ಈ ಕಾಯ್ದೆಯನ್ನು ಲೋಕಸಭೆಯಲ್ಲಿ 2014 ರಲ್ಲಿಯೂ ವಿಷಯ ಪ್ರಸ್ತಾವನೆ ಮಾಡಲಾಗಿ ರಾಜ್ಯಸಭೆಯಲ್ಲಿ ನಮಗೆ ಬಹುಮತ ಇಲ್ಲ ಕಾರಣ ಪಾಸ್ ಆಗಿರಲಿಲ್ಲಾ. ಈ ಕಾಯ್ದೆಯ ಬಗ್ಗೆ ಎರಡು ಸದನಗಳಲ್ಲಿ 72 ಘಂಟೆಗಳ ಕಾಲ ಚರ್ಚೆ ಮಾಡಲಾಗಿದೆ. ಪಾಕಿಸ್ತಾನ ಅಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತರು ಹಿಂದೂಗಳಾಗಿದ್ದು, ಅಲ್ಲಿನ ಪರಸ್ಥಿತಿ ಶೋಚನೀಯವಾಗಿರುವ ಅಂಶ ಕಂಡು ಬರುತ್ತಿದೆ.
ಭಾರತದ ಯಾವುದೇ ವ್ಯಕ್ತಿಗೆ ತೊಂದರೆ ಉಂಟು ಮಾಡುವ ಅಂಶಗಳು ಇದರಲ್ಲಿ ಇಲ್ಲ. ಯಾರೂ ಭಯ ಪಡಬೇಡಿ.ಸಮಗ್ರ ಭಾರತದ ಭವಿಷ್ಯಕ್ಕಾಗಿ ಈ ಕಾಯ್ದೆ ತರಲಾಗಿದೆ.ಈ ಬಗ್ಗೆ ಜಾಗೃತಿ ಮೂಡಿಸಲು ಬಿಜೆಪಿ ಪಕ್ಷ ಅಭಿಯಾನವನ್ನು ಮಾಡಲಾರಂಭಿಸಿದೆ ಇದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ.ಶಾಸಕ ನೆಹರೂ ಓಲೇಕಾರ.ಮಾಜಿಶಾಸಕ ಸುರೇಶಗೌಡ ಪಾಟೀಲ.ಮುಖಂಡ ಸಿದ್ದರಾಜ ಕಲಕೋಟಿ.ಮುರಿಗೆಪ್ಪ ಶೆಟ್ಟರ.ಡಾ.ಸಂತೋಷ ಆಲದಕಟ್ಟಿ ಇದ್ದರು.
