ಶಿರಾ:
ಒಳ ಮೀಸಲಾತಿಯನ್ನು ಜಾರಿಗೊಳಿಸದ ಕಾಂಗ್ರೆಸ್ ಸರ್ಕಾರಕ್ಕೆ ಈ ಹಿಂದೆ ಮಾದಿಗ ಸಮುದಾಯ ತಕ್ಕ ಪಾಠ ಕಲಿಸಿ ಮನೆಗೆ ಕಳಿಸಿತ್ತು ಇದೀಗ ಇದೇ ಒಳ ಮೀಸಲಾತಿಯನ್ನು ಜಾರಿಗೊಳಿಸದೆ ನಿರ್ಲಕ್ಷ್ಯ ದೋರಣೆ ತಾಳಿರುವ ಈ ಸರ್ಕಾರಕ್ಕೆ ದಲಿತ ಬಂಧುಗಳು ತಕ್ಕ ಪಾಠ ಕಲಿಸಬೇಕಿದೆ ಎಂದು ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಮಾರೆಪ್ಪ ತಿಳಿಸಿದರು.
ನಗರದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಿರಾ ಹಾಗೂ ಆರ್.ಆರ್.ನಗರದಲ್ಲಿ ಉಪ ಚುನಾವಣೆ ನಡೆಯಲಿದ್ದು ಈ ಉಪ ಚುನಾವಣೆ ಸಂಬಂಧ ಸರ್ಕಾರ ಮನೆ ಬಾಗಿಲಿಗೆ ಮತ ಯಾಚನೆಗೆ ಬರುತ್ತಿದೆ. ಈಗಾಗಲೇ ಜಾರಿಗೆ ಬಾರದ ಒಳ ಮೀಸಲಾತಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಬೇಕು. ಈ ಹಿಂದೆ ಕಾಂಗ್ರೆಸ್ ಕೂಡಾ ಅದೇ ಕೆಲಸ ಮಾಡಿತ್ತು. ಜೆ.ಡಿ.ಎಸ್. ಪಕ್ಷವು ದೇವನಹಳ್ಳಿ ಚುನಾವಣೆಯಲ್ಲಿ ದಲಿತ ಶಾಸಕರಿಗೆ ಟಿಕೇಟ್ ವಂಚನೆ ಮಾಡಿತ್ತು.
ಮಾರಸ್ವಾಮಿ ಅವರು ಕೂಡಾ ಒಳ ಮೀಸಲಾತಿ ಬಗ್ಗೆ ಚಕಾರವೆತ್ತಲಿಲ್ಲ. ಇವರಿಗೆಲ್ಲಾ ದಲಿತ ಮತದಾರರು ಪಾಠ ಕಲಿಸಬೇಕಿದೆ ಎಂದರು.ಹೋರಾಟ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಕೇಶವಮೂರ್ತಿ ಮಾತನಾಡಿ ಸದಾಶಿವ ಆಯೋಗದ ವರದಿ, ಕಾಂತರಾಜ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗದ ವರದಿ, ಡಾ.ನಾಗಮೋಹನ್‍ದಾಸ್ ವರದಿಗಳನ್ನು ಯಾವುದೇ ಸರ್ಕಾರ ಬಹಿರಂಗಗೊಳಿಸದೆ ಮುಚ್ಚಿಟ್ಟಿದೆ. ಇವರಿಗೆಲ್ಲಾ ಪಾಠ ಕಲಿಸಲು ಈ ಚುನಾವಣೆ ಒಂದು ಅಸ್ತ್ರವಾಗಿದ್ದು ಎಲ್ಲರೂ ಜಾಗೃತಿಗೊಳಬೇಕಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಯ್ ಅಕ್ಕರಗಿ, ರಾಜ್ಯ ಕಾರ್ಯದರ್ಶಿ ಸೋಮುಚೂರಿ, ಜಿಲ್ಲಾಧ್ಯಕ್ಷ ಸತ್ಯಪ್ಪ, ಸಿದ್ಧಗಂಗಯ್ಯ, ಶಿವಾಜಿ ನಗರ ತಿಪ್ಪೇಸ್ವಾಮಿ ಯರಗುಂಟೆ ಶಾಂತಕುಮಾರ್, ಲಿಂಗರಾಜು, ಪಾವಗಡ ಹನುಮಂತರಾಪ್ಪ, ಕಗ್ಗಲಡು ಮಹಾಲಿಂಗಪ್ಪ, ಮಹಾಲಿಂಗಪ್ಪ, ಅಪ್ಪಿ ರಂಗನಾಥ್, ಶಿವಣ್ಣ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ