ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ ಗ್ಯಾರೇಹಳ್ಳಿ ಪಾಳ್ಯದಲ್ಲಿನ ಕಾಲೋನಿಯ ಚರಂಡಿಗಳು ತುಂಬಿ ತುಳುಕಿ ಗ್ರಾಮದಲ್ಲಿ ಅನೈರ್ಮಲ್ಯ ಉಂಟಾಗಿದ್ದರೂ ಇಲ್ಲಿನ ಗ್ರಾ.ಪಂ.ಅಧ್ಯಕ್ಷರು ಪಿ.ಡಿ.ಓಗಳು ಸ್ವಚ್ಛತೆ ಮಾಡುವಲ್ಲಿ ಮರೆತಿದ್ದಾರೆ.
ಗ್ರಾಮದ ಸ್ವಚ್ಛತೆ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ, ನಮ್ಮ ಮನವಿಗೆ ಇದುವರೆಗೂ ಅಧಿಕಾರಿಗಳು ಸ್ಪಂದಿಸದೇ ತಮ್ಮ ಕರ್ತವ್ಯದ ಬಗ್ಗೆ ಬೇಜವಬ್ದಾರಿತನ ತೋರಿಸುತ್ತಿದ್ದಾರೆ, ಗ್ರಾಮದ ಸಮಸ್ಯೆ ಬಗ್ಗೆ ಗ್ರಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರಿಗೆ ತಿಳಿಸೋಣವೆಂದರೆ ಇವರುಗಳು ಗ್ರಾಮದಲ್ಲಿ ಯಾರಿಗೂ ಸಿಗದಂತಾಗಿದ್ದರೆ, ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ಗ್ಯಾರೇಹಳ್ಳಿಪಾಳ್ಯದ ಗ್ರಾಮಸ್ಥರು ಪಟ್ಟಣಕ್ಕೆ ಆಗಮಿಸಿ ತಮ್ಮ ಸಮಸ್ಯೆ ಬಗ್ಗೆ ಪತ್ರಿಕೆ ಮುಂದೆ ಅಳಲು ತೋಡಿಕೊಂಡರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಶಂಕರ್, ನೀಲಕಂಠಯ್ಯ, ನಾಗರಾಜು, ಶಂಕರಯ್ಯ, ಲೋಕೇಶ್ ಉಪಸ್ಥಿತರಿದ್ದರು.