ಚಿತ್ರದುರ್ಗ:
ಚಂದ್ರವಳ್ಳಿ ಕಡೆಯಿಂದ ಹರಿದು ಬರುವ ಮಳೆ ನೀರು ಮನೆಗಳಿಗೆ ನುಗ್ಗದೆ ಸರಾಗವಾಗಿ ಹರಿದು ಹೋಗಲಿಕ್ಕಾಗಿ ಹೊಳಲ್ಕೆರೆ ರಸ್ತೆಯಲ್ಲಿರುವ ಕೋಟೆ ಪೋಲಿಸ್ ಠಾಣೆ ಸಮೀಪ ಸ್ಟಾರ್ಮ್ ವಾಟರ್ ಡ್ರೈನೇಜ್ ಕಾಮಗಾರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭಾನುವಾರ ಚಾಲನೆ ನೀಡಿದರು.
ಎರಡು ಕೋಟಿ 93 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಶಾಸಕರು ಚಂದ್ರವಳ್ಳಿ ಹಾಗು ಸುತ್ತಮುತ್ತಲಿನ ಬೆಟ್ಟಗುಡ್ಡಗಳಿಂದ ಹರಿದು ಬರುವ ಮಳೆ ನೀರು ನೆಹರು ನಗರ, ಸಿ.ಕೆ.ಪುರ, ಬುದ್ದನಗರ, ಜೈನ್ ಕಾಲೋನಿ, ಮಾರುತಿ ನಗರಗಳಲ್ಲಿನ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯಾಗುತ್ತಿತ್ತು. ಮುಂದಿನ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗದಂತೆ ತಡೆಯುವುದಕ್ಕಾಗಿ ಇದು ಅನುಕೂಲವಾಗಲಿದೆ ಎಂದು ಹೇಳಿದರು.
ದೇಶದ ಪ್ರಧಾನಿ ನರೇಂದ್ರಮೋದಿರವರು ಅಮೃತ್‍ಸಿಟಿ ಯೋಜನೆಯಡಿ ಚಿತ್ರದುರ್ಗವನ್ನು ಆಯ್ಕೆ ಮಾಡಿಕೊಂಡಿದ್ದು, 140 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿ 112 ಕೋಟಿ ರೂ.ಗಳನ್ನು ಶಾಂತಿಸಾಗರ ಹಾಗೂ ಹಿರಿಯೂರಿನ ವಿ.ವಿ.ಸಾಗರದಿಂದ ಚಿತ್ರದುರ್ಗಕ್ಕೆ ನೀರು ಪೂರೈಕೆಗಾಗಿ ಬಳಸಲಾಗುತ್ತಿದೆ. ಮತ್ತೊಂದು ಲೈನ್ ಅಳವಡಿಸಿ ಪ್ರತಿ ಮನೆಗಳಿಗೆ ಹಾಗೂ ಮಾರ್ಗ ಮಧ್ಯದಲ್ಲಿ ಬರುವ ಹಳ್ಳಿಗಳಿಗೆ ದಿನದ 24 ಗಂಟೆಯೂ ಕುಡಿಯಲು ನೀರು ನೀಡಲಾಗುವುದು. ಇನ್ನು 18 ಕೋಟಿ ರೂ.ಗಳನ್ನು ಬೇರೆ ಬೇರೆ ಕಾಮಗಾರಿಗಳಿಗೆ ಖರ್ಚು ಮಾಡಲಾಗುವುದೆಂದು ತಿಳಿಸಿದರು.
ಪಾರ್ಕ್‍ಗಳ ಅಭಿವೃದ್ದಿಗೆ ಮೂರು ಕೋಟಿ ರೂ.ಗಳನ್ನು ನೀಡಿದ್ದು, ನಗರದಲ್ಲಿ ಹಾಳು ಬಿದ್ದಿರುವ ಪಾಠಿರ್ïಗಳಲ್ಲಿ ಹಸಿರು ಕಂಗೊಳಿಸುವಚಿತೆ ಮಾಡಲಾಗುವುದು ಎಂದರು.
ನಗರಸಭೆ ಸದಸ್ಯರುಗಳಾದ ಶಶಿಧರ್, ಹರೀಶ್, ಜಯಪ್ಪ, ಟೌನ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವೀರೇಶ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.