ಕೊಳವೆ ನೀರಿನಲ್ಲಿ ಕೊಚ್ಚೆ-ಹುಳುಗಳು

ಚಿಕ್ಕನಾಯಕನಹಳ್ಳಿ

        ಅಧಿಕಾರಿಗಳ ನಿರ್ಲಕ್ಷತನವೋ, ಜನಪ್ರತಿನಿಧಿಗಳ ಅಸಡ್ಡೆಯೋ ಗೊತ್ತಿಲ್ಲ. ಪಟ್ಟಣದ ಪುರಸಭೆಯ 10ನೇ ವಾರ್ಡ್‍ನಲ್ಲಿ ಕೊಳವೆ ಮಾರ್ಗದಲ್ಲಿ ಕೊಳಚೆ ನೀರು ಹಾಗೂ ಹುಳವಿರುವ ನೀರು ಸರಬರಾಜಾಗಿದೆ ಎಂದು ಆ ಭಾಗದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

        ಪಟ್ಟಣದಲ್ಲಿ ಪ್ರಸಕ್ತ ಎಲ್ಲಾ ವಾರ್ಡ್‍ಗಳಿಗೂ ವಾರಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಎಲ್ಲಾ ಮನೆಗಳಿಗೂ ಕೊಳಾಯಿ ಮೂಲಕ ಹಾಗೂ ಬೀದಿ ನಲ್ಲಿ ಮೂಲಕ ಪಟ್ಟಣದ ಜನತೆಗೆ ನೀರು ಸರಬರಾಜಾಗುತ್ತಿದೆ. ಸರಬರಾಜಾಗುತ್ತಿರುವ ನೀರನ್ನು ಜನತೆ ಕುಡಿಯಲು ಹಾಗೂ ಮನೆಯ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶುಕ್ರವಾರ ಬ್ರಾಹ್ಮಣರ ಬೀದಿಯಲ್ಲಿ ಮುಂಜಾನೆ 6ಗಂಟೆಗೆ ನೀರು ಹಾಯಿಸಲಾಗಿದೆ. ಆದರೆ ಬಂದಿರುವ ನೀರಿನಲ್ಲಿ ಪೂರ್ಣ ಕೊಳಚೆಯುಕ್ತ ನೀರು ಸರಬರಾಜಾಗಿದೆ. ನೀರಿನ ಜೊತೆಯಲ್ಲಿ ಹುಳುಗಳು ಸಹ ಬಂದಿವೆ.

           ಕೊಳಚೆ ನೀರನ್ನು ನೋಡದೆ ಜನರು ತೊಟ್ಟಿಯೊಳಗೆ ನೀರನ್ನು ಹಾಯಿಸಿದ್ದರಿಂದ ಈ ಮೊದಲು ಮನೆಯ ತೊಟ್ಟಿಯೊಳಗಿದ್ದ ನೀರೂ ಸಹ ಪೂರ್ಣ ಕೊಳಚೆಯಾಗಿ ನೀರನ್ನೆಲ್ಲಾ ಹೊರಗೆ ಚೆಲ್ಲಲಾಗಿದೆ. ಪುರಸಭೆಯಿಂದ ಸರಬರಾಜಾಗಿರುವ ಈ ಕೊಳಚೆ ನೀರನ್ನು ಬಿಡುವಾಗಲೇ, ಪುರಸಭೆ ಎಂಜಿನಿಯರ್ ಹಾಗೂ ನೀರುಗಂಟಿಗಳು ಎಚ್ಚರ ವಹಿಸಬೇಕಿತ್ತು. ಇದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ಸಾರ್ವಜನಿಕರು ದೂರಿದ್ದಾರೆ.

          ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೊಳವೆ ಮಾರ್ಗಕ್ಕೆ ಜೋಡಿಸಿರುವ ಗೇಟ್‍ವಾಲ್ವ್‍ಗಳು ಹಾಳಾಗಿದ್ದು, ಗೇಟ್‍ವಾಲ್ವ್‍ಗಳಲ್ಲಿ ನೀರು ಹೊರಬಂದು ನಂತರ ನೀರು ಅದೇ ಗೇಟ್‍ವಾಲ್ವ್ ಮುಖಾಂತರ ಪಟ್ಟಣಕ್ಕೆ ಹರಿಯುತ್ತದೆ. ಇದರಿಂದ ಸಾರ್ವಜನಿಕರೂ ನೀರನ್ನು ಕುಡಿಯಲು ಹಿಂದು, ಮುಂದು ನೋಡಿ ಶುದ್ದ ಕುಡಿಯುವ ನೀರಿನ ಘಟಕಗಳನ್ನೇ ಆಶ್ರಯಿಸಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link