ಹೊನ್ನಾಳಿ ಪಟ್ಟಣದಲ್ಲಿ ನಾಟಕ ಥೇಯಟರ್

ಹೊನ್ನಾಳಿ:

      ಕಲಾಸಕ್ತರು ಹಾಗೂ ಸಾರ್ವಜನಿಕರು ನಾಟಕಗಳನ್ನು ವೀಕ್ಷಿಸುವುದರ ಮೂಲಕ ರಂಗಕಲಾವಿದರನ್ನು ಪೋಷಿಸಬೇಕು ಎಂದು ರಾಣೇಬೆನ್ನೂರು ಶ್ರೀಮಂಜುನಾಥ ನಾಟ್ಯ ಸಂಘದ ಮಾಲೀಕರಾದ ನಾಗರತ್ನಮ್ಮ ಚಿಕ್ಕಮಠ್ ಹೇಳಿದರು.ಪಟ್ಟಣದ ನ್ಯಾಮತಿ ರಸ್ತೆಯ ಎಸ್‍ಬಿಐ ಬ್ಯಾಂಕ್ ಪಕ್ಕದಲ್ಲಿ ಹಾಕಿರುವ ರಂಗಸಜ್ಜಿಕೆಯಲ್ಲಿ ಸೋಮವಾರ ಕರೆದಿದ್ದು ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.

      40 ವರ್ಷಗಳಿಂದ ನಮ್ಮ ನಾಟಕ ಪಂಪನಿ ನಡೆದುಕೊಂಡು ಬರುತ್ತಿದ್ದು ಮೊದಲ ಬಾರಿಗೆ ಹೊನ್ನಾಳಿ ಪಟ್ಟಣದಲ್ಲಿ ನಾಟಕ ಥೇಯಟರ್ ಸ್ಥಾಪಿಸಿ ಅ.10ರಿಂದ ನಾಟಕ ಪ್ರದರ್ಶನ ಪ್ರಾರಂಭವಾಗುತ್ತದೆ ಪಟ್ಟಣದ ಹಾಗೂ ಸುತ್ತಮುತ್ತಲಿನ ನಾಗರಿಕರು ನಾಟಕ ನೋಡಿ ರಂಗ ಕಲೆಯ ಉಳಿವಿಗೆ ಹಾಗೂ ಕಲಾವಿದರನ್ನು ಸಂರಕ್ಷಿಸಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

      ಕಳೆದ 40 ವರ್ಷಗಳಿಂದ ಉತ್ತರ ಕರ್ನಾಟಕದ ಗದಗ್, ಹಾವೇರಿ, ರಾಯಚೂರು, ಗುಲ್ಬರ್ಗ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದೇವು. ಈ ವರ್ಷ ಉತ್ತರ ಕರ್ನಾಟಕದಲ್ಲಿ ಮಳೆ ಬಾರದೆ ಬರ ಬಂದೊದಗಿದೆ ಈ ವರ್ಷ ಅರೆಮಾಲೆನಾಡಿನ ತಾಲೂಕುಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದೇವೆ ಎಂದರು.
ಹೊನ್ನಾಳಿಗೆ ಬರುವ ಮುನ್ನ ಶಿಕಾರಿಪುರ ಪಟ್ಟಣದಲ್ಲಿ ನಾಟಕ ಪ್ರದರ್ಶನ ಮಾಡಲಾಯಿತು. ಮಳೆಗಾಲವಾದ್ದರಿಂದ ನಾಟಕಗಳನ್ನು ನೋಡಲು ಜನರು ಬಾರದೆ ನಷ್ಟ ಅನುಭವಿಸಬೇಕಾಯಿತು ಎಂದು ಹೇಳಿದರು.

     ಅ.10ರಂದು ನಾಟಕಗಳ ಪ್ರದರ್ಶನದ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ ಸಾನಿಧ್ಯವಹಿಸುವರು. ಶಾಸಕ ಎಂ.ಪಿ. ರೇಣುಕಾಚಾರ್ಯ ಸಮಾರಂಭ ಉದ್ಘಾಟಿಸುವರು ಎಂದು ಹೇಳಿದರು.

      ನಮ್ಮ ನಾಟಕ ಕಂಪನಿಯು ಶಾಶ್ವತ 10 ಕಲಾವಿದರನ್ನು ಹೊಂದಿದ್ದು ದಿನಭತ್ಯದ ಮೇಲೆ 6ರಿಂದ 8 ಜನ ಕಲಾವಿದರನ್ನು ಪ್ರತಿ ನಾಟಕಕ್ಕೆ ಕರೆಸಲಾಗುವುದು ಎಂದು ಹೇಳಿದರು.

      3ತಿಂಗಳ ಕಾಲ ಪಟ್ಟಣದಲ್ಲಿ ಮುಕ್ಕಾಂ ಹೂಡಿ ವಿವಿಧ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತೇವೆ ದಯಮಾಡಿ ಕಲಾಸಕ್ತರು ಆಗಮಿಸಿ ನಾಟಕಗಳನ್ನು ನೋಡಿ ಆನಂದಿಸಿ ಕಲಾವಿದರ ಬಾಳಿಗೆ ಬೆಳಕಾಗಬೇಕು ಎಂದು ಅವರು ಮನವಿ ಮಾಡಿದರು.
ನಾಟಕ ಕಂಪನಿ ಮ್ಯಾನೇಜರ್ ಮಲ್ಲಿಕಾರ್ಜುನ ಚಿಕ್ಕಮಠ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ