ಸಿಲಿಕಾನ್ ಸಿಟಿಯಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಸ್ಥಗಿತ…!

ಬೆಂಗಳೂರು

     ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುವುದನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ .ಕೊರೊನಾ ವೈರಸ್ ಭೀತಿ‌ ಹಿನ್ನೆಲೆಯಲ್ಲಿ ತಪಾಸಣೆ ಗೆ ಬ್ರೇಕ್ ಹಾಕಲಾಗಿದೆ. ಕೊರೊನಾ ಇದೊಂದು ಸೋಂಕು ವೈರಸ್ ಆಗಿದ್ದು,  ತಪಾಸಣೆ ಮಾಡುವ ಸಂದರ್ಭದಲ್ಲಿ ಸೋಂಕು ಹರಡುವ ಸಂಭವವಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಸಂಚಾರಿ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.

    ಮದ್ಯಪಾನ ತಪಾಸಣೆಯ ಯಂತ್ರಕ್ಕೆ ವಾಹನ ಸವಾರರು ಬಾಯಿಯಿಂದ ಊದಬೇಕಾಗುತ್ತದೆ. ಹೀಗೆ ಪ್ರತಿಯೊಬ್ಬರೂ ಒಂದೇ ಯಂತ್ರ ಊದಬೇಕಿರುವುದರಿಂದ ಯಾರಿಗಾದರೂ ಸೋಂಕು ಇದ್ದರೆ ಇತರರಿಗೂ ಅದು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

   ಈಗಾಗಲೇ ರಾಜೀವ್ ಗಾಂಧಿ ಆರೋಗ್ಯ ವಿವಿಕ್ಕೆ ಸಂಚಾರಿ ಪೊಲೀಸರು ವರದಿ ಕೇಳಿ ಪತ್ರ ಬರೆದಿದ್ದು, ವರದಿ ಬಂದ ನಂತರ ಸೂಕ್ತ ಕ್ರಮಗಳೊಂದಿಗೆ ತಪಾಸಣೆ ಕಾರ್ಯ ಮುಂದುವರೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಮಾರಣಾಂತಿಕ ಕೊರೊನಾ ವೈರಸ್ ಮೊದಲು ಚೀನಾದಲ್ಲಿ ಕಂಡುಬಂದಿದ್ದು, ಜಗತ್ತಿನ ಎಲ್ಲೆಡೆ ಕೊರೋನಾ ಭೀತಿ ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Recent Articles

spot_img

Related Stories

Share via
Copy link