ತಿಪಟೂರು : ಕಷಾಯವಾದ ಕುಡಿಯುವ ನೀರು

ತಿಪಟೂರು :

    ಕೊರೊನಾ ಮಹಾಮಾರಿಯು ಹರಡುತ್ತಿರುವ ಸಂದರ್ಭದಲ್ಲಿಆಯುರ್ವೇದದ ಪ್ರಕಾರ ಕುದಿಸಿದ ಶುದ್ದ ನೀರು, ಇಲ್ಲಕಷಾಯವನ್ನು ಸೇವಿಸಿದರೆ ಕೊರೊನಾವನ್ನುತಡೆಗಟ್ಟಬಹುದು ಎಂಬ ಮಾಹಿತಿಯನ್ನು ತಿಳಿದ ನಗರಸಭೆ ಮನೆಮನೆಗೂ ಕಷಾಯದಂತಿರುವಕುಡಿಯುವ ನೀರನ್ನೇಕೊಡುತ್ತಿದ್ದಾರೆ.

    ನಗರದ ಕೆಲವು ಬಡಾವಣೆಗಳಲ್ಲಿ 24/7 ಯೋಜನೆಯಡಿಯಲ್ಲಿ ಅಳವಡಿಸಿರುವ ಪೈಪ್‍ಲೈನ್ ಮುಖಾಂತರ ನೀರು ಸರಬರಾಜನ್ನು ಆರಂಭಿಸಿದೆ.ಆದರೆ 24/7 ಕುಡಿಯುವ ನೀರಿನಯೋಜನಗೆ ಪೈಪ್‍ಲೈನ್‍ಮಾಡಿ ಈಗಾಗಲೇ ವರ್ಷಗಳೆ ಕಳೆದಿದ್ದು ಎಲ್ಲೆಂದಲ್ಲಿ ಹೊಡೆದು ಹೋಗಿ ಕುಡಿಯುವ ನೀರಿಗೆ ಮಣ್ಣು ಮತ್ತುಕಲ್ಮಶ ಸೇರಿ ನೀರು ಕೊಳಕಾಗಿ ಮಾರ್ಪಟ್ಟಿರುವುದು ಪೈಪ್‍ಲೈನ್ ಬಳಸುವ ಮುನ್ನವೇ ಹಾಳಾಗುವತ್ತ ಸಾಗಿದೆ.

    ಕೂಸು ಹುಟ್ಟುವ ಮುನ್ನವೇ ಕುಲಾವಿ ಒಲೆಸಿದಂತೆ ಎಂಬ ಗಾದೆಗೆ ಹೇಳಿಮಾಡಿಸಿದಂತಿರುವ 24/7 ಯೋಜನೆಗೆ 124 ಕೋಟಿರೂ ವೆಚ್ಚದ ಬೃಹತ್‍ಯೋಜನೆಯಲ್ಲಿ ನೊಣವಿನಕೆರೆಯಿಂದತಿಪಟೂರು ನಗರಕ್ಕೆ ನೀರೊದಗಿಸುವಯೋಜನೆಯನ್ನುಜಾರಿಗೆತಂದು ಅನುಷ್ಠಾನಗೊಳಿಸಲಾಯಿತು.ಆದರೆ ನೀರುತರುವ ಮುನ್ನವೇಗುತ್ತಿಗೆದಾರು ನಗರದರಸ್ತೆಯನ್ನು ಸಂಪೂರ್ಣವಾಗಿ ಹಾಳು ಗೆಡವಿ ಮನೆಮನೆಗಳಿಗೆ ನಲ್ಲಿ ಮತ್ತು ಮೀಟರ್‍ಗಳನ್ನೇನೊ ಅಳವಡಿಸಿ ಹೊದರೇ ಹೊರತು ನೊಣವಿನಕೆರೆಯಿಂದ ನೀರುತರುವಯೋಜನೆ ಹಳ್ಳಹಿಡಿಯಿತು.

    ಈಗ ನಗರಸಭೆಕುಡಿಯುವ ನೀರನ ಪೈಪ್‍ಲೈನ್ ಹಾಳಾಗಿದ್ದರಿಂದಲೋ ಇಲ್ಲ 24/7 ಪೈಪ್‍ಲೈನ್ ಪರೀಕ್ಷಿಸಲೋಎಂಬಂತೆ 24/7 ನೀರಿನ ಪೈಪ್‍ಲೈನ್‍ಗೆ ನೀರನ್ನುಬಿಡತೊಡಗಿದಾಗ ಪೈಪ್‍ಎಲ್ಲಿಬೇಕೆಂದರಲ್ಲಿ ಹೊಡೆದುಇಲ್ಲ ಸರಿಯಾಗಿಪೈಪ್‍ಗಳನ್ನು ಜೋಡಿಸದೇಇದ್ದಕಾರಣ ನೀರು ಪೋಲಾಗುವುದಲ್ಲದೇಎಲ್ಲಾ ಮನೆಗಳಿಗು ಕೊರೊನಾಕಷಾಯದಂತ ನೀರನ್ನು ಬಿಡುತ್ತಿದ್ದಾರೆ.

    ಈಗಾಗಲೇ ಜನರುಕೊರೋನಾ ಸೋಂಕಿನಿಂದ ತತ್ತರಿಸಿದ್ದು ಆಸ್ಪತ್ರೆಗಳಲ್ಲಿ ಕೆಮ್ಮು, ಜ್ವರ ಮತ್ತಿತರಖಾಯಿಲೆಯಿಂದ ಬಳಲುತ್ತಿದ್ದರು ಆಸ್ಪತ್ರೆಗೆ ಹೋದರೆ ನಮ್ಮನ್ನುಎಲ್ಲಿಕ್ವಾರಂಟೈನ್‍ಗೆ ಹಾಕುತ್ತಾರೋಎಂದು ಹೆದರಿ ಆಸ್ಪತ್ರೆಗಳ ಹತ್ತಿರತಲೆಯನ್ನೇ ಹಾಕುತ್ತಿಲ್ಲ. ಇಂತಹ ಸಮಯದಲ್ಲಿ ಈ ನೀರನ್ನೇನಾದರೂ ನೀರನ್ನುಕುಡಿದರೆಜನರಆರೋಗ್ಯದಗತಿಯೇನುದಯವಿಟ್ಟು ಅಧಿಕಾರಿಗಳು ಆದಷ್ಟು ಬೇಗನೆ ಈ ಸಮಸ್ಯೆಯನ್ನು ಗಮಹರಿಸಿ ಜನರಿಗೆ ಶುದ್ದುಕುಡಿಯುವ ನೀರನ್ನುಕೊಡಲಿ ಎಂಬುದು ಸಾರ್ವಜನಿಕರಆಗ್ರಹವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link