ಶುದ್ದ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು

ಪಾವಗಡ

   ಯಾವುದೇ ಕಾರಣಕ್ಕೂ ಶುದ್ದಕುಡಿಯುವ ಸರಬರಾಜು ಮಾಡುವಲ್ಲಿ ಸಮಸ್ಯೆಯಾಗದಂತೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಕಾರ್ಯನಿರ್ವಸಬೇಕೆಂದು ತುಮಕೂರು ಜಿಪಂನ ಸಿಇಓ ಶುಭಕಲ್ಯಾಣ್ ತಿಳಿಸಿದರು.

    ಮಂಗಳವಾರ ತಾಪಂ ಸಭಾಂಗಣದಲ್ಲಿ ಶುದ್ದ ಕುಡಿಯುವ ನೀರು ಪೂರೈಕೆ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಾವಗಡ ಶಾಶ್ವತ ಬರಪೀಡಿತ ಪ್ರದೇಶವಾಗಿರುವ ಕಾರಣ ಪ್ರತಿ ಗ್ರಾಪಂನಲ್ಲೂ ಶುದ್ದಕುಡಿಯುವ ನೀರಿನ ಪೂರೈಕೆ ಬಗ್ಗೆ ಹೆಚ್ಚು ಗಮನಹರಿಸುವಂತೆ ಅಧಿಕಾರಿಗಳಿಗೂ ತಾಕೀತು ಮಾಡಿದರು.

    ರಂಗಸಮುದ್ರ ಮತ್ತು ನಾಗಲಾಪುರ ಗ್ರಾಪಂಗಳ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪಿಡಿಓ ಅಕ್ಕಲಪ್ಪರವರಿಂದ ಮಾಹಿತಿ ಪಡೆದು, 14 ನೆ ಹಣಕಾಸಿನಲ್ಲಿ ಎರಡು ಕಂತಿನಲ್ಲಿ 31 ಲಕ್ಷ ರೂ. ಬಿಡುಗಡೆಯಾಗಿದ್ದು, ಮೊದಲ ಕಂತಿನ ಹಣಕ್ಕೆ ಕ್ರಿಯಾ ಯೋಜನೆ ಸಿದ್ದ ಪಡಿಸಿ ಎಂದು ಸೂಚಿಸಿದರು.

    ಪೋತಗಾನಹಳ್ಳಿ, ಬೂದಿಬೆಟ್ಟ, ಕಾಮನದುರ್ಗ ಸೇರಿದಂತೆ ತಾಲ್ಲೂಕಿನ 33 ಗ್ರಾಪಂಗಳಲ್ಲಿನ ಶುದ್ದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪ್ರತಿ ಗ್ರಾಪಂನಿಂದಲೂ ಮಾಹಿತಿ ಪಡೆದರು. ಕಳೆದ ವರ್ಷ ತಾಲ್ಲೂಕಿನ ಗ್ರಾಪಂಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿರುವ ಹಣ 98 ಲಕ್ಷ ರೂ. ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಸಂಬಂಧÀಪಟ್ಟವರು ತಹಸೀಲ್ದಾರ್ ಕಚೇರಿಯಲ್ಲಿ ಮಾಹಿತಿ ಪಡೆಯಿರಿ ಎಂದು ತಿಳಿಸಿದರು.

   ಶಾಸಕ ವೆಂಕಟರವಣಪ್ಪ ಮಾತನಾಡಿ, ತಾಲ್ಲೂಕಿನಾದ್ಯಂತ ಶುದ್ದ ಕುಡಿಯುವ ನೀರಿನ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ನಡೆಯುತ್ತಿದೆ. ತಾಲ್ಲೂಕಿನ 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೋಳವೆ ಬಾವಿಗಳನ್ನು ಕೊರೆಸಿ ನೀರು ಪೂರೈಕೆ ಮಾಡಿ ಎಂದು ಪಿಡಿಓ ಹಾಗೂ ಕುಡಿಯುವ ನೀರಿನ ವಿಭಾಗಾಧಿಕಾರಿಗಳಿಗೆ ತಿಳಿಸಿದರು.

ತಾಪಂ ಇಓಗೆ ತರಾಟೆ :

     ಮಾಜಿ ಸಚಿವ ವೆಂಕಟರವಣಪ್ಪ ತಾಪಂ ಇಓ ಕಾರ್ಯವೈಖರಿಯ ಬಗ್ಗೆ ಕೆಂಡಕಾರಿದ್ದು, ತಾಲ್ಲೂಕಿನ ಯಾವುದೆ ಗ್ರಾಪಂಗಳಿಗೆ ಇಓ ಭೇಟಿ ನೀಡದ ಕಾರಣ ಹಲವು ಗ್ರಾಪಂ ಪಿಡಿಓಗಳು ಗ್ರಾಪಂಗಳಿಗೆ ತೆರಳದೆ ಕಾಲಹರಣ ಮಾಡುತ್ತಿದ್ದಾರೆ. ಜನತೆಯನ್ನು ಪೀಡಿಸಿ ಹಣ ವಸೂಲಿ ಮಾಡುವ ದಂಧೆಗೆ ಮುಂದಾಗಿದ್ದಾರೆಂದು ಶಾಸಕರು ಇಓರನ್ನು ತರಾಟೆಗೆ ತೆಗೆದುಕೊಂಡರು. ಆಗ ಮಧ್ಯೆ ಪ್ರವೇಶಿಸಿದ ಸಿಇಓ ಗ್ರಾಪಂಗೆ ಭೇಟಿ ನೀಡಿ ವರದಿ ನೀಡುವಂತೆ ಇಓಗೆ ಸೂಚಿಸಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap