ಬೆಂಗಳೂರು
ಕಾರು ಡಿಕ್ಕಿ ಹೊಡೆದು ಬೈಕ್‍ನಿಂದ ಕೆಳಗೆ ಬಿದ್ದ ಬಾಲಕನೊಬ್ಬ ಕೆಎಸ್‍ಆರ್‍ಟಿಸಿ ಬಸ್ ಹರಿದು ಮೃತಪಟ್ಟಿರುವ ದುರ್ಘಟನೆ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್‍ಎಂಸಿಯಾರ್ಡ್ ಜಂಕ್ಷನ್‍ನಲ್ಲಿ ಶನಿವಾರ ಸಂಜೆ ನಡೆದಿದೆ.
ತುಮಕೂರು ರಸ್ತೆ ಪಾರ್ಲೆ ಜಿ ಬಳಿಯ ಮಂಜುನಾಥ ನಗರದ ವಿನಯ್ ಕುಮಾರ್ (14)ಎಂದು ಮೃತ ಬಾಲಕನನ್ನು ಗುರುತಿಸಲಾಗಿದೆ.ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿನಯ್‍ಕುಮಾರ್‍ನನ್ನು ಪಕ್ಕದ ಮನೆಯ ರಘು ಎಂಬಾತ ಬೈಕ್‍ನಲ್ಲಿ ಹಿಂದೆ ಕೂರಿಸಿಕೊಂಡು ಯಶವಂತಪುರಕ್ಕೆ ಕರೆದುಕೊಂಡು ಹೋಗಿದ್ದ.
ವಾಪಸ್ ಮನೆಗೆ ಸಂಜೆ 6.30ರ ವೇಳೆ ಬರುತ್ತಿದ್ದಾಗ ಆರ್‍ಎಂಸಿಯಾರ್ಡ್ ಬಳಿ ವೇಗವಾಗಿ ಬಂದ ಮಾರುತಿ ಕಾರು ಡಿಕ್ಕಿ ಹೊಡೆದು ಬಲಗಡೆ ಬಿದ್ದ ವಿನಯ್ ಮೇಲೆ ಬಸ್ ಹರಿದು ಮೃತಪಟ್ಟಿದ್ದಾನೆ.
ಎಡಗಡೆ ಬಿದ್ದ ರಘು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಪ್ರಕರಣ ದಾಖಲಿಸಿರುವ ಯಶವಂತಪುರ ಸಂಚಾರ ಪೊಲೀಸರು ಬಸ್ ಹಾಗೂ ಕಾರು ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪಾವಗಢದಿಂದ ಬಂದಿದ್ದ ವಿನಯ್ ಕುಮಾರ್, ಅಪಘಾತದಲ್ಲಿ ಮೃತಪಟ್ಟಿರುವುದು ದುರಂತವೇ ಸರಿ.
ಮನೆಗಳವು
ಸಂಪಿಗೆ ಹಳ್ಳಿಯ ರಾಮಕೃಷ್ಣಹೆಗಡೆ ನಗರದ ಆರ್‍ಪಿ ರಸ್ತೆಯ ಮನೆಯೊಂದಕ್ಕೆ ವೆಂಟಿಲೇಷನ್ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು, ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಮನೆ ಮಾಲೀಕ ಸಿದ್ದಯ್ಯ ಅವರು ಶನಿವಾರ ಬೆಳಿಗ್ಗೆ ಕೆಲಸದ ನಿಮಿತ್ತ ಹೊರಗೆ ಹೋಗಿ ರಾತ್ರಿ ವಾಪಸ್ ಬರುವಷ್ಟರಲ್ಲಿ ಈ ದುರ್ಘಟನೆ ನಡೆದಿದ್ದು. ಪ್ರಕರಣ ದಾಖಲಿಸಿರುವ ಸಂಪಿಗೆಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








