ಕುಣಿಗಲ್
ಕೊತ್ತಗೆರೆ ಸಮೀಪ ಮೂಡಲ್ ಕುಣಿಗಲ್ ದೊಡ್ಡಕೆರೆಯ ಏರಿಯ ಕೋಡಿ ಸೇತುವೆ ಪಕ್ಕದ ಕಬ್ಬಿಣದ ತಡೆಗೋಡೆಯನ್ನು ಮುರಿದುಕೊಂಡು ಕಬ್ಬಿಣದ ಸರಳನ್ನು ತುಂಬಿದ ಬೃಹತ್ ಲಾರಿಯೊಂದು ಉರುಳಿ ಬಿದ್ದಿದ್ದು ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು ಈ ಬೃಹತ್ ಲಾರಿಯ ದೃಶ್ಯ ಪ್ರಯಾಣಿಕರನ್ನು ಬಾರಿ ಕುತೂಹಲಕ್ಕೆಡೆ ಮಾಡಿತ್ತು.
ಸೋಮವಾರ ರಾತ್ರಿ 10 ಗಂಟೆಯ ಸುಮಾರಿನಲ್ಲಿ ಜಾರ್ಖಂಡ್ ರಾಜ್ಯದ ರಾಯಗಡದಿಂದ ಮಂಡ್ಯ ಜಿಲ್ಲೆಗೆ ಮೌಲ್ಡಿಂಗ್ ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿ NL01 AD5834 ತಲೆಕೆಳಗಾಗಿ ಬಿದ್ದು ಹೋಗಿದೆ. ಚಾಲಕ ಅವತಾರ್ ಸಿಂಗ್ಗೆ ಸಣ್ಣಪುಟ್ಟಗಾಯಗಳಾಗಿದ್ದು ಆತ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ. ಇಂತಹ ಬೃಹತ್ ಲಾರಿಯೊಂದು ಉಲ್ಟಾ ಬಿದ್ದಿರುವುದನ್ನು ಕುತೂಹಲದಿಂದ ಸಾರ್ವಜನಿಕರು ಹಾಗೂ ಆ ಭಾಗದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದು ಕೆಲವೊತ್ತು ಸದರಿ ಸ್ಥಳದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.ಈ ಸಂಬಂಧ ಕುಣಿಗಲ್ ಪೊಲೀಸರು ಪ್ರರಕರಣ ದಾಖಲಿಸಿ ಮುಂದಿನ ಕ್ರಮತೆಗೆದು ಕೊಂಡಿದ್ದಾರೆ.