ಹೊಳಲ್ಕೆರೆ:
ಮನುಷ್ಯನಿಗೆ ಹಲವಾರು ದುಶ್ಚಟಗಳ ಅಭ್ಯಾಸಗಳಿವೆ. ಆದರೆ ಮಧ್ಯಪಾನ ಅತ್ಯಂತ ಕೆಟ್ಟ ಅಭ್ಯಾಸ. ಇದರಿಂದ ಹಲವಾರು ಜನರು ಬಲಿಯಾಗಿ ಅವರ ಸಂಸಾರಗಳು ಬೀದಿಪಾಲಾಗಿವೆ. ಈ ದುಶ್ಚಟದಿಂದ ಹಲವಾರು ಯುವಕರುಗಳು ಚಿಕ್ಕ ವಯಸ್ಸಿನಲ್ಲಿಯೇ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಮದ್ಯವ್ಯಸನಿಗಳು ಈ ಕಟ್ಟ ಚಟವನ್ನು ಬಿಡಲು ಇಂದಿನಿಂದಲೆ ಬಿಡಬೇಕೆಂಬ ನಿರ್ಧಾರ ಮಾಡಬೇಕೆಂದು ಮಧ್ಯವ್ಯಸನದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳಿಗೆ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ, ಅಖಿಲ ಕರ್ನಾಟಕ ರಾಜ್ಯ ಜನ ಜಾಗೃತಿ ವೇದಿಕೆ ಬೆಳ್ತಂಗಡಿ, ಮಧ್ಯ ವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಗುಂಡೇರಿ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು, ಸ್ವಸಹಾಯ ಸಂಘಗಳ ಒಕ್ಕೂಟಗಳು, ಕಸಬಾ ವಲಯ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ದಾನಿಗಳು ಇವರ ಸಂಯುಕ್ತಾಶ್ರಯದಲ್ಲಿ ಗುಂಡೇರಿ ಗ್ರಾಮದ ಶ್ರೀ ಈಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಧ್ಯವರ್ಜನೆ ಶಿಬಿರಾರ್ಥಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಹಬ್ಬಿರುವ ಕುಡಿತದ ಚಟವನ್ನು ಮದ್ಯವ್ಯಸನಗಳಿಂದ ಬಿಡಿಸುವುದು ಕಷ್ಟಕರ ಕೆಲಸ. ಈ ಕೆಟ್ಟ ದುರಭ್ಯಾಸವನ್ನು ನಿರ್ಮೂಲನೆ ಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಅತ್ಯಂತ ಶ್ರೇಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷವನ್ನು ಉಂಟು ಮಾಡಿದೆ ಎಂದು ಮೆಚ್ಚುಗೆಯನ್ನು ಹನುಮಲಿ ಷಣ್ಮುಖಪ್ಪ ವ್ಯಕ್ತಪಡಿಸಿದರು.
ಇಲ್ಲಿಯವರೆಗೆ ರಾಜ್ಯಾದ್ಯಾಂತ ಈ ಸಂಸ್ಥೆ 1995ಮದ್ಯವ್ಯಸನ ಶಿಬಿರವನ್ನು ಏರ್ಪಡಿಸಿ ಶೇಕಡಾ 70ರಷ್ಟು ಮದ್ಯವ್ಯಸನಿಯಗಳು ಕುಡಿತವನ್ನು ತ್ಯೆಜಿಸಿರುವುದು ಅತ್ಯಂತ ಗಮನಾರ್ಹವಾದ ವಿಷಯ. ಮದ್ಯವ್ಯಸನಿಯಗಳಿಂದ ಅನೇಕರು ಬಲಿಯಾಗಿದ್ದಾರೆ. ಇವರ ಜೀವನ ನೋಡಿದರೆ ನರಕ ಸದೃಷ್ಯವಾಗಿದೆ. ಈ ದುಶ್ಚಟವನ್ನು ಮದ್ಯಪಾನಿಗಳು ತ್ಯೆಜಿಸಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸುವಂತೆ ಮಾಡುವುದೇ ಈ ಮಹಾ ಸಂಸ್ಥೆಯ ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.
ಗುಂಡೇರಿ ಸೇರಿದಂತೆ ಹೊಳಲ್ಕೆರೆಯ ಕೆಲವು ಭಾಗಗಳಿಗೆ ಸೇರಿದ 23 ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಭದ್ರಾ ಮೇಲ್ದಂಡೆಯಿಂದ ಅತೀ ಶೀಘ್ರದಲ್ಲಿ ಕುಡಿಯುವ ನೀರನ್ನು ಹರಿಸುವ ಕಾರ್ಯಕ್ರಮವನ್ನು ಸರ್ಕಾರ ಸದ್ಯದಲ್ಲೆ ಕಾರ್ಯಗತ ಮಾಡಲಿದೆ. ಇದರಿಂದ ಈ ಭಾಗದ ಸಾರ್ವಜನಿಕರಿಗೆ ಮತ್ತು ರೈತರಿಗೆ ನೀರಾವರಿಯ ಸಮಸ್ಯೆ ಬಗೆ ಹರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೇ ಈಗಾಗಲೆ ಮುಗಿದಿದೆ ಎಂದು ತಿಳಿಸಿ ಸರ್ಕಾರ ಕಾಮಗಾರಿಗೆ ಅನುಮೋದನೆ ನೀಡಿದ್ದು ಅಂತಿಮವಾಗಿ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಷಣ್ಮುಖಪ್ಪ ಸಭೆಯಲ್ಲಿ ತಿಳಿಸಿದರು.
ಇದರ ಜೊತೆಗೆ ಸಾಸ್ವೆಹಳ್ಳಿ ಭದ್ರಾ ನಾಲೆಯಿಂದ ಬಿದುರ್ಗ ಹೋಬಳಿಗೆ ಸೇರಿದ 40 ಕೆರೆಗಳಿಗೆ ನೀರನ್ನು ಹರಿಸಲು ಈಗಾಗಲೆ ಸರ್ಕಾರ ಅನುಮೋದನೆ ನೀಡಿದೆ. ಇದಕ್ಕೆ ಬೇಕಾದ ಅನುದಾನವನ್ನು ಸಹ ನೀಡಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಅತೀ ಶೀಘ್ರದಲ್ಲಿಯೆ ಕೈಗೊಳ್ಳುವಂತೆ ತರಳ ಬಾಳು ಜಗದ್ಗುರು ಡಾ.ಶೀವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮತ್ತು ಚಿತ್ರದುರ್ಗ ಮುರುಘಾಮಠದ ಮುರುಘ ಶರಣರು ಸರ್ಕಾರದ ಮೇಲೆ ಒತ್ತಡವನ್ನು ತಂದಿದ್ದಾರೆ. ಈ ಆಸೆಯನ್ನು ಉಭಯಶ್ರೀಗಳ ಮಹಾತ್ವಾಕಾಂಕ್ಷೆಯಾಗಿದೆ ಎಂದು ತಿಳಿಸಿ ಈ ಮಹತ್ವದ ಕೆಲಸ ಪೂರ್ಣಗೊಂಡರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ಷಣ್ಮುಖಪ್ಪ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಜಿಲ್ಲಾ ನಿರ್ದೇಶಕ ಬಿ.ಗಣೇಶ್, ಗ್ರಾ.ಪಂ ಅಧ್ಯಕ್ಷೆ ಜಲಜಾಕ್ಷಿ ಚಂದ್ರಶೇಖರ್, ತಾ.ಆರೋಗ್ಯಾಧಿಕಾರಿ ಡಾ.ಜಯಸಿಂಹ, ಮುಖಂಡರಾದ ಟಿ.ಎಸ್.ಜಯಣ್ಣ, ಗುಂಡೇರಿ ಮದ್ಯವರ್ಜನ ಶಿಬಿರ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ, ಈಶ್ವರ ಟ್ರಸ್ಟ್ ಅಧ್ಯಕ್ಷ ಜಿ.ಬಿ.ಚಂದ್ರಶೇಖರ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯೆ ಸೌಮ್ಯ ರವಿಶಂಕರ್, ಪ್ರೇಮ ಕಲಾ, ತಾ.ಪಂಮಾಜಿ ಅಧ್ಯಕ್ಷ ಲವಮಧು, ಜನಜಾಗೃತಿ ವೇದಿಕೆಯ ಸದಸ್ಯ ಎ.ಸಿ.ಗಂಗಾಧರಪ್ಪ, ಮಾರುತೇಶ, ಮುಂತಾದವರು ಉಪಸ್ಥಿತರಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಯೋಜನಾಧಿಕಾರಿ ಎನ್.ಮೇದಪ್ಪ ಸ್ವಾಗತಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








