ಹುಳಿಯಾರು : ವಠಾರದಲ್ಲಿ ದುಡ್ಡಿಗೆ ನೀರು ಖರೀದಿ

ಹುಳಿಯಾರು

   ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಠಾರದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು ಇಲ್ಲಿನ ನಿವಾಸಿಗಳು ದುಡ್ಡು ಕೊಟ್ಟು ನೀರು ಖರೀದಿಸುವಂತಾಗಿದೆ.ವಠಾರದಲ್ಲಿ ಮೂವತ್ತರಿಂದ ನಲವತ್ತು ಕುಟುಂಬಗಳು ವಾಸವಿದ್ದು ನೂರೈವತ್ತಕ್ಕೂ ಹೆಚ್ಚು ಜನರಿದ್ದಾರೆ. ಇವರಿಗೆ ಇಲ್ಲಿಯವರೆವಿಗೂ ಕುಡಿಯುವ ನೀರು ಪೂರೈಸುತ್ತಿದ್ದ ಒಂದು ಕೊಳವೆ ಬಾವಿಯಲಿ ನೀರು ಕಡಿಮೆಯಾಗಿದ್ದು ದಿನಕ್ಕೆ ಹತ್ತು ನಿಮಿಷ ನೀರು ಬಂದರೆ ಹೆಚ್ಚು ನ್ನುವಂತ್ತಾಗಿದೆ.

    ಪರಿಣಾಮ ಇಲ್ಲಿನ ನಿವಾಸಿಗಳು ಬಿಂದಿಗೆಗೆ ಎರಡ್ಮೂರು ರೂಪಾಯಿ ದುಡ್ಡು ಕೊಟ್ಟು ಟ್ಯಾಂಕರ್ ನೀರು ಖರೀದಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ. ನೀರಿನ ಟ್ಯಾಂಕರ್ ಬಾರದಿದ್ದರೆ ಮಹಿಳೆಯರು, ಮಕ್ಕಳು ಇತರೆ ಬೀದಿಗಳಲ್ಲಿ ನೀರು ಬಿಟ್ಟಾಗ ಅವರನ್ನು ಕಾಡಿಬೇಡಿ ನೀರು ತರಬೇಕಿದೆ.

      ಇಲ್ಲಿನ ನಿವಾಸಿಗಳೆಲ್ಲರೂ ಸರ್ಕಾರದ ಆಶ್ರಯಮನೆ ಯೋಜನೆಯಲ್ಲಿ ನಿವೇಶನ ಪಡೆದು ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಿಕೊಂಡ ಬಡವರ್ಗದವರಾಗಿದ್ದಾರೆ. ಇವರು ಬೆಲೆ ಏರಿಕೆಯ ಹಾಗೂ ಕೂಲಿ ನಾಲಿ ಸಿಗದ ಈ ಸಂದರ್ಭದಲ್ಲಿ ಜೀವನ ನಿರ್ವಹಣೆಯೇ ದುತ್ಸರವಾಗಿದ್ದು ಕುಡಿಯುವ ನೀರು ದುಡ್ಡು ಕೊಟ್ಟು ಖರೀದಿಸುವುದು ಹೆಚ್ಚಿನ ಹೊರೆ ಬಿದ್ದಂತ್ತಾಗಿದೆ.

       ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಕೂಡ ಅಧಿಕಾರಿಗಳು ಇತ್ತ ಕಡೆ ಗಮನಹರಿಸುತ್ತಿಲ್ಲ ಎಂಬುದು ಇಲ್ಲಿನ ನಿವಾಸಿಗಳು ಆರೋಪಿಸುತ್ತಾರೆ. ಬರಗಾಲದ ಹಣದಲ್ಲಿ ಟ್ಯಾಂಕರ್ ನೀರು ಹೊಡೆಸಲು ಅವಕಾಶವಿದ್ದರೂ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ. ಈಗಲಾದರೂ ಸಂಬಂದಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಇಲ್ಲಿನ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link