ಬರ ಪರಿಸ್ಥಿತಿ: ಪಡಿತರ ಪ್ರಮಾಣ ಹೆಚ್ಚಿಸಲು ನಿರ್ಣಯ

ಚಿತ್ರದುರ್ಗ

   ಚಿತ್ರದುರ್ಗ ಜಿಲ್ಲೆ ಸತತವಾಗಿ ಬರಗಾಲಕ್ಕೆ ತುತ್ತಾಗಿದೆ, ಇದರಿಂದ ಜನತೆ ತೊಂದರೆಗೆ ಸಿಲುಕಿದ್ದಾರೆ, ಈಗ ನೀಡುತ್ತಿರುವ ಪಡಿತರವನ್ನು ದುಪ್ಪಟು ಮಾಡುವಂತೆ ಸರ್ಕಾರಕ್ಕೆ ಒತ್ತಡವನ್ನು ಹೇರುವ ನಿರ್ಣಯವನ್ನು ಇಂದು ನಡೆದ ಸಭೆಯಲ್ಲಿ ಅಂಗೀಕರಿಸಲಾಯಿತು.

   ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅಧ್ಯಕ್ಷ ಡಿ.ಎಂ ಲಿಂಗರಾಜು, ಜಿಲ್ಲೆಯಲ್ಲಿ ಈ ಭಾರಿಯೂ ಸಹಾ ಮಳೆ ಇಲ್ಲದೆ ಜನತೆ ಕಂಗಾಲಾಗಿದ್ದಾರೆ. ಈಗಾಗಲೇ ಮುಂಗಾರು ಮಳೆ ಪೂರ್ಣಗೊಂಡಂತೆ ಆಗಿದೆ, ಇನ್ನೂ ಏನ್ನಿದ್ದರೂ ಹಿಂಗಾರು ಮಳೆಯನ್ನು ನೋಡಬೇಕಿದೆ, ಅದು ಸಹಾ ಗ್ಯಾರೆಂಟಿ ಇಲ್ಲ ಇದರಿಂದ ಜನತೆ ತೊಂದರೆಗೆ ಸಿಲುಕಿದ್ದಾರೆ, ಈ ಹಿನ್ನಲೆಯಲ್ಲಿ ಸರ್ಕಾರ ಜನತೆ ಹಸಿವಿನಿಂದ ಇರಬಾರದೆಂದು ಉಚಿತವಾಗಿ ಪಡಿತರ ಚೀಟಿಗೆ 7 ಕೆ.ಜಿ. ಅಕ್ಕಿಯನ್ನು ನೀಡುತ್ತಿದೆ ಆದರೆ ಇದು ನಮ್ಮ ಜಿಲ್ಲೆಯ ಜನತೆಗೆ ಸಕಾಗುವುದಿಲ್ಲ ಆದ್ದರಿಂದ 7 ಕೆ.ಜಿ.ಬದಲಿ 14 ಕೆ.ಜಿ.ಅಕ್ಕಿಯನ್ನು ಬರಗಾಲ ಮುಗಿಯುವವರೆಗೂ ನೀಡಲಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

   ಸರ್ಕಾರ ಪಡಿತರ ವ್ಯವಸ್ಥೆಯನ್ನು ರಾಜ್ಯದಲ್ಲಿ ಒಂದೇ ರೀತಿಯಾಗಿ ಮಾಡಿದೆ ಆದರೆ ಇದು ಜಿಲ್ಲೆಗಳಿಗೆ ಬದಲಾಗಬೇಕಿದೆ ಏಕೆಂದರೆ ಈಗ ರಾಜ್ಯದಲ್ಲಿ ಕೆಲವಡೆ ಮಳೆಯಾಗಿದೆ ಅವರು ಬಿತ್ತನೆ ಮಾಡಿ ಬೆಳೆಯನ್ನು ಬೆಳೆಯಬಹುದಾಗಿದೆ, ಆದರೆ ನಮ್ಮ ಜಿಲ್ಲೆಯಲ್ಲಿ ಮಳೆ ಇಲ್ಲ ಆದ್ದರಿಂದ ಅಲ್ಲಿ ನೀಡುವ ಅಕ್ಕಿಯನ್ನು ನಮ್ಮ ಬರಗಾಲದಂತಹ ಜಿಲ್ಲೆಗಳಿಗೆ ನೀಡಿದರೆ ಜನತೆ ಸಂಕಷ್ಟ ದೂರವಾಗುತ್ತದೆ ಎಂದ ಅಧ್ಯಕ್ಷ ಡಿ.ಎಂ ಲಿಂಗರಾಜು ಅವರು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳೆಸಲಾಗುವುದು ಸಂಬಂಧಪಟ್ಟ ಇಲಾಖೆಯವರು ಸಹಾ ಇದರ ಬಗ್ಗೆ ಸರ್ಕಾರಕ್ಕೆ ಪತ್ರವನ್ನ ಬರೆಯುವಂತೆ ಸೂಚನೆ ನೀಡಿದರು.

   ಚಿತ್ರದುರ್ಗ ತಾಲ್ಲೂಕು ಆರೋಗ್ಯ ಅಧಿಕಾರಿ ಗಿರೀಶ್ ಮಾತನಾಡಿ, ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ಆರೋಗು ಕೇಂದ್ರಗಳಲ್ಲಿ ರೋಗಗಳಿಗೆ ಔಷಧಿ ಸಿದ್ದ ಇದೆ , ಅದೇ ರೀತಿ ವೈದ್ಯರು ಸಹಾ ಕೊರೆತೆ ಇಲ್ಲ ಆದರೆ ಎರಡು ಕಡೆಯಲ್ಲಿ ಮಾತ್ರ ವೈದ್ಯರು ರಜೆಯನ್ನು ಹಾಕಿದ್ದಾರೆ ಅಲ್ಲಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿ ಸೆಪ್ಟಂಬರ್ ಮಾಹಿಯಿಂದ 5 ವರ್ಷದೊಳಗಿನ ಮಕ್ಕಳಿಗೆ ಮತ್ತೊಂದು ಲಸಿಕೆಯನ್ನು ಹಾಕುವ ಕಾರ್ಯಕ್ರಮ ಈಗಾಗಲೇ ಸಿದ್ದವಾಗುತ್ತಿದೆ ಇದಕ್ಕೆ ಬೇಕಾದ ತರಬೇತಿಯನ್ನು ಸಹಾ ನೀಡಲಾಗಿದೆ ಇದು ರೋಟಾ ವೈರಸ್ ಎಂದು ಕರೆಯಲಾಗುತ್ತದೆ ಈಗಾಗಲೇ 10 ವಿವಿಧ ರೀತಿಯ ಲಸಿಕೆಯನ್ನು ಹಾಕಲಾಗುತ್ತಿದೆ ಅದರಲ್ಲಿ ಇದು ಸಹಾ ಸೇರ್ಪಡೆಯಾಗಲಿದೆ ಎಂದು ತಿಳಿಸಿದರು.

   ಕೃಷಿ ಇಲಾಖೆಯ ತಾಲ್ಲೂಕು ಅಧಿಕಾರಿ ಶ್ರೀಮತಿ ಭಾರತಿ ಮಾತನಾಡಿ ಚಿತ್ರದುರ್ಗ ತಾಲ್ಲೂಕಿಗೆ ಅಗತ್ಯವಾಗಿ ಬೇಕಾದ ಮಳೆ ಆಗಿಲ್ಲ ಇರುವ ನಾಲ್ಕು ಹೋಬಳಿಯಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದು ಹಿರೇಗುಂಟನೂರು ಹೋಬಳಿಯಲ್ಲಿ ಮಾತ್ರವೇ ಸ್ವಲ್ಪ ಮಟ್ಟಿಗೆ ಮಳೆ ಆಗಿದೆ ಎಂದು ತಿಳಿಸಿ ಈಗ ಮುಂಗಾರು ಮುಗಿದಿದೆ ಈಗ ಮೆಕ್ಕೆಜೋಳವನ್ನು ಬಿತ್ತಿದರೆ ಅದು ಮುಂದೆ ವಿವಿಧ ರೋಗಗಳಿಗೆ ತುತ್ತಾಗಬಹುದಾಗಿದೆ ಇದರ ಬದಲಾಗಿ ಸಿರಿಧಾನ್ಯಗಳನ್ನು ಬೆಳೆಯಲು ಇದು ಸಕಾಲವಾಗಿದೆ ಅವುಗಳನ್ನು ಬೆಳೆಯಲು ಸಹಾ ಸರ್ಕಾರ ಮತ್ತು ಕೃಷಿ ಇಲಾಖೆ ಸಹಾಯ ಮತ್ತು ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.

   ಕಳೆದ ಸಾಲಿನಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ಬೆಳೆ ವಿಮೆಯನ್ನು ಹಲವಾರು ರೈತರು ಮಾಡಿಸಿದ್ದರು, ಇದರ ಪರಿಹಾರ ಲಭ್ಯವಾಗಿದ್ದು ಶೀಘ್ರದಲ್ಲಿ ರೈತರಿಗೆ ತಲುಪಲಿದೆ. ತಾಲ್ಲೂಕಿನ ಎರಡು ಪಂಚಾಯಿತಿಗಳನ್ನು ಹೋರೆತುಪಡಿಸಿ ಉಳಿದ ಪಂಚಾಯಿತಿಗಳಲ್ಲಿ ಪರಿಹಾರ ವಿತರಣೆ ಕಾರ್ಯ ಆಗಲಿದೆ ಎಂದು ಸಭೆಗೆ ಮಾಹಿತಿ ನೀಡಿ ಸಿರಿಧಾನ್ಯವನ್ನು ಬೆಳೆಯಲು ಸರ್ಕಾರ ಒಂದು ಎಕರೆಗೆ 10 ಸಾವಿರ, ಎರಡು ಎಕರೆಗೆ 20ಸಾವಿರ ನೀಡಲಿದ್ದು ಅರ್ಜಿಯನ್ನು ಸಲ್ಲಿಸಲು ಆ.10 ಕೊನೆಯ ದಿನವಾಗಿದೆ. ಅ 8ರಂದು ಹಿರೇಗುಂಟನೂರು ಹೋಬಳಿಯಲ್ಲಿ ಸಾಮಾನ್ಯ ವರ್ಗಕ್ಕೆ ಟಾರ್ಪಲ್‍ಗಳ ವಿತರಣಾ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ವಿಜ್ಞಾನಿಗಳು ಆಗಮಿಸಿ ಬೆಳೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.

   ಪಶು ಇಲಾಖೆಯ ಅಧಿಕಾರಿ ಪ್ರಸನ್ನ ಮಾತನಾಡಿ, ಸರ್ಕಾರದವತಿಯಿಂದ ನೂತನವಾಗಿ ಕೃಷಿ ಕಲ್ಯಾಣ ಅಭೀಯಾನ -2 ಪ್ರಾರಂಭವಾಗುತ್ತಿದ್ದು ಇದರಲ್ಲಿ ತಾಲ್ಲೂಕಿಗೆ 20 ಗ್ರಾಮಗಳನ್ನು ಆಯ್ಕೆ ಮಾಡಿ ರೈತರ ಮನೆ ಬಾಗಿಲಿಗೆ ಸೇವೆಯನ್ನು ನೀಡಬೇಕಿದೆ ಈಗಾಗಲೇ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿ, ತಾಲ್ಲೂಕಿನಲ್ಲಿ ಜಾನುವಾರುಗಳ ಅಭೀವೃದ್ದಿಗೆ ವಿಶೇಷವಾದ ಕಾಳಜಿಯನ್ನು ವಹಿಸಲಾಗಿದೆ ಇದಕ್ಕೆ ಸಂಬಂಧಪಟ್ಟ ತಳಿಗಳ ಸಂತತಿಯನ್ನು ಅಭೀವೃದ್ದಿ ಮಾಡಲು ಸಹಾ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

   ನೂತನವಾಗಿ ಪಡಿತರ ಚೀಟಿಗಳನ್ನು ಶೀಘ್ರವಾಗಿ ವಿತರಣೆ ಮಾಡಿ 2018ರ ಪಡಿತರ ಚೀಟಿಗಳನ್ನು ಈಗ ವಿತರಣೆ ಮಾಡಲಾಗುತ್ತಿದೆ ವಿಳಂಭ ಏಕೆ ಎಂದು ಅಧ್ಯಕ್ಷರು ಅಧಿಕಾರಿಯನ್ನು ಪ್ರಶ್ನೆ ಮಾಡಿದರು ಈಗಾಗಲೇ 2607 ಅರ್ಜಿಗಳು ಬಂದಿದ್ದು ಇದರಲ್ಲಿ 248 ನಕಲಿ ಅರ್ಜಿಗಳಾಗಿದ್ದು ಶೇ.25 ರಷ್ಟು ಪಡಿತರ ಚೀಟಿ ವಿತರಣೆಯಾಗಿದ್ದು ಮಧ್ಯೆ ಚುನಾವಣೆ ಬಂದಿದ್ದರಿಂದ ವಿಳಂಭವಾಗಿದೆ ಈಗ ಶೀಘ್ರವಾಗಿ ವಿತರಣೆ ಮಾಡಲಾಗುತ್ತದೆ ಎಂದು ಸಭೆಗೆ ಶಿರಸ್ತೆದಾರರು ಮಾಹಿತಿ ನೀಡಿದರು.

   ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷ ಶ್ರೀಮತಿ ಶಾಂತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾನಾಯ್ಕ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link