ಬೆಂಗಳೂರು
ನಗರಕ್ಕೆ ನಕಲಿ ನೋಟು ಸರಬರಾಜು ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಕೋಲ್ಕತ್ತಾದ ಶುಕ್ರದ್ದೀನ್ ಶೇಕ್ ಅಲಿಯಾಸ್ ಸುಕ್ರುದ್ದೀನ್ ಅನ್ಸಾರಿ ಬಂಧಿತ ಆರೋಪಿಯಾಗಿದ್ದಾನೆ,ನಗರಕ್ಕೆ ಸುಮಾರು 82 ಸಾವಿರ ನಕಲಿ ನೋಟುಗಳನ್ನ ಸುಕ್ರುದ್ದೀನ್ ಅನ್ಸಾರಿ ಪೂರೈಸಿದ್ದ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಹಿಂದೆ ನಕಲಿ ನೋಟು ಸರಬರಾಜು ಸಂಬಂಧ ಮೂವರು ಆರೋಪಿಗಳಾದ ದಲೀಮ್ ಮಿಯಾ, ಆಶೋಕ್ ಕುಮಾರ್ ಮತ್ತು ರಾಜೇಂದ್ರ ಪಾಟೀಲ್ ಎಂಬುವರನ್ನ ಬಂಧಿಸಲಾಗಿತ್ತು.
ನಕಲಿ ನೋಟು ಸರಬರಾಜು ಮಾಡಿದ್ದ ಶುಕ್ರುದ್ದೀನ್ ಶೇಕ್ ನಾಪತ್ತೆಯಾಗಿದ್ದ.ಆರೋಪಿಯನ್ನ ಬಂಧಿಸಿ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆದು ಎನ್ಐಎ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








