ಬೆಂಗಳೂರು
ಕಳೆದ ಎರಡು ವರ್ಷಗಳಿಂದ ಯಾರಿಗೂ ಗೊತ್ತಾಗದಂತೆ ಹೆಸರಾಂತ ಹಿಂದೂಸ್ತಾನ್ ಲಿವರ್ ಲಿಮಿಟೆಡ್ ಕಂಪನಿಯ ರೆಡ್ ಲೇಬಲ್ ಬ್ರೂಕ್ ಬಾಂಡ್ ತ್ರೀ ರೋಸಸ್ ಬ್ರಾಂಡ್ನ ನಕಲಿ ಟೀ ಪುಡಿ, ಪ್ಯಾಕಿಂಗ್ ಜಾಲವನ್ನು ಬಂಡೆಪಾಳ್ಯ ಪೆÇಲೀಸರು ಬೇಧಸಿ ರಾಜಸ್ತಾನ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜಸ್ಥಾನದ ರಾಣಾ ಸಿಂಗ್ಪೇಟ್ನ ಭವರ್ ಲಾಲ್ (26) ಹಾಗೂ ಜಗರಾಂ (40) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಬ್ರೂಕ್ ಬಾಂಡ್ ರೆಡ್ ಲೇಬಲ್ ತ್ರೀ ರೋಸಸ್ನ 15 ಲಕ್ಷ ಮೌಲ್ಯದ 2,497 ಕೆಜಿ ನಕಲಿ ಟೀ ಪುಡಿ , ನಕಲಿ ಟೀ ಪುಡಿ ಪ್ಯಾಕಿಂಗ್ ಮಾಡುತ್ತಿದ್ದ ಯಂತ್ರ, ಲೇಬಲ್ಗಳು ಸೇರಿದಂತೆ, 30 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ತಿಳಿಸಿದ್ದಾರೆ.
ಆರೋಪಿಗಳು ಬಂಡೆಪಾಳ್ಯದಲ್ಲಿ ಮನೆಯೊಂದನ್ನು ಪ್ಯಾಕಿಂಗ್ ಮಾಡುವುದಾಗಿ ಮಾಲೀಕರನ್ನು ನಂಬಿಸಿ, ಬಾಡಿಗೆ ಪಡೆದು ಕಳೆದ ಎರಡು ವರ್ಷಗಳಿಂದ ನಕಲಿ ಟೀ ಪುಡಿಯನ್ನು ಹಿಂದೂಸ್ತಾನ್ ಲಿವರ್ ಕಂಪನಿಯ ಟೀ ಪುಡಿ, ಲೇಬಲ್, ಬಾಕ್ಸ್ ಬಳಸಿ ಮಾರಾಟ ಮಾಡುತ್ತಿದ್ದರು. ಯಾರಿಗೂ ಗೊತ್ತಾಗದಂತೆ, ನಕಲಿ ಟೀ ಪುಡಿ ಜಾಲವನ್ನು ಆರೋಪಿಗಳು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದರು.
ನಕಲಿ ಟೀ ಪುಡಿ ಪ್ಯಾಕಿಂಗ್ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಿದ ಬಂಡೆಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ಯೋಗೇಶ್, ಮತ್ತವರ ಸಿಬ್ಬಂದಿಗಳು, ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಾಗ ಆರೋಪಿಗಳು ತಯಾರಿಸಿ ಪ್ಯಾಕಿಂಗ್ ಮಾಡುತ್ತಿದ್ದ ನಕಲಿ ಟೀ ಪುಡಿಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








