ಆರ್ ಆರ್ ನಗರ ಚುನಾವಣೆ : ಮತ್ತೆ ಸದ್ದು ಮಾಡುತ್ತಿದೆ ನಕಲಿ ವೋಟರ್ ಐಡಿ

ಬೆಂಗಳೂರು

   ಕಳೆದ ಬಾರಿಯ ವಿಧಾನಸಭಾ ಚುನಾವಣೆ ವೇಳೆ  ಕಾಂಗ್ರೆಸ್ ಮತ್ತು  ಬಿಜೆಪಿ ಅಭ್ಯರ್ಥಿ ನಡುವೆ ಒಂದು ರೀತಿಯ ಸಮರಕ್ಕೆ ಕಾರಣವಾಗಿದ್ದ  ನಕಲಿ ಗುರುತಿನ ಚೀಟಿ ಹಾವಳಿ ಈಗ ಮತ್ತೆ ಕೇಳಿ ಬರುತ್ತಿದೆ ಕೆಲವು ಅನಾಮಧೇಯರು ಮತದಾರರಿಗೆ ಕರೆ ಮಾಡಿ ವೋಟರ್ ಐಡಿ ನಂಬರ್ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ .

   ಈ ಬಗ್ಗೆ ಸಾಕಷ್ಟು ದೂರುಗಳು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಸಲ್ಲಿಕೆಯಾಗಿವೆ. ಅಕ್ರಮವಾಗಿ ಫೋನ್‍ನಲ್ಲಿ ವೋಟರ್ ಐಡಿ ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರ ಗಮನಕ್ಕೂ ತರಲಾಗಿದೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಪ್ರಸಾದ್ ತಿಳಿಸಿದರು.ಬೇರೆಯವರ ವೋಟರ್ ಐಡಿ ಮಾಹಿತಿ ಕೇಳುವುದು ಶಿಕ್ಷಾರ್ಹ ಅಪರಾಧವಾಗಿದೆ.

    ಆರ್‍ಆರ್‍ನಗರದಲ್ಲಿ ಇಂತಹ ದೂರುಗಳು ಸಾಕಷ್ಟು ಜನರಿಂದ ಬರುತ್ತಿವೆ. ಜನರ ಬಳಿ ವೋಟರ್ ಐಡಿ ನಂಬರ್ ಮಾಹಿತಿಯನ್ನು ಕೇಳುತ್ತಿದ್ದಾರೆ. ಅಂಥವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

     ರಾಜರಾಜೇಶ್ವರಿ ಕ್ಷೇತ್ರದ ಮತದಾರರ ಸಂಖ್ಯೆ 4,62,201 ಆಗಿದೆ. ಆರ್‍ಆರ್‍ನಗರದಲ್ಲಿ ಎಲ್ಲಾ ಮತದಾರರಿಗೆ ಫೋಟೊ, ಐಡಿ ಕಾರ್ಡ್‍ಗಳನ್ನು ವಿತರಿಸಲಾಗಿದೆ. ಒಂದು ವೇಳೆ ಗುರುತಿನ ಚೀಟಿ ಕಳೆದುಕೊಂಡಿದ್ದರೆ, ಪಾಸ್‍ಪೋರ್ಟ್, ರೇಷನ್‍ಕಾರ್ಡ್, ಆಧಾರಕಾರ್ಡ್, ಪಾಸ ಬುಕ್ ಸೇರಿದಂತೆ ವಿವಿಧ 11 ದಾಖಲೆಗಳಲ್ಲಿ ಒಂದನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ನವೆಂಬರ್ 3ರಂದು ನಡೆಯುವ ಉಪಚುನಾವಣೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಅಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಅಂತ್ಯವಾಗುತ್ತದೆ.

     ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದರು. ಕ್ಷೇತ್ರದಲ್ಲಿ ಮತಗಟ್ಟೆಗಳ ಸಂಖ್ಯೆ 381, ಸಾಂದರ್ಭಿಕ ಮತಗಟ್ಟೆಗಳ ಸಂಖ್ಯೆ 287 ಸೇರಿದಂತೆ ಒಟ್ಟು 678 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನ.10ರಂದು ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆಗೆ ಜ್ಞಾನಾಕ್ಷಿ ವಿದ್ಯಾ ನಿಕೇತನ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ಟ್ರಾಂಗ್‍ರೂಮ್‍ನಲ್ಲಿ ಕಂಟ್ರೋಲ್ ಯೂನಿಟ್ ಬ್ಯಾಲೆಟ್‍ಗಳನ್ನು ತಯಾರಿ ಮಾಡಿ ಕಂಟ್ರೋಲ್ ರೂಮ್ ಸಿದ್ದವಾಗಿದೆ ಎಂದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link