ರಾಮಕೃಷ್ಣ ಸೇವಾಶ್ರಮಕ್ಕೆ ಡಿವೈಎಸ್ಪಿ ಭೇಟಿ

ಪಾವಗಡ

     ಇಲ್ಲಿನ ಶ್ರೀ ರಾಮಕೃಷ್ಣ ಸೇವಾಶ್ರಮಕ್ಕೆ ಡಿವೈಎಸ್ಪಿ ಪ್ರವೀಣ್ ಕುಮಾರ್ ಭೇಟಿ ನೀಡಿ, ಆಶ್ರಮದ ಸೇವಾ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರ ಹಾಗೂ ಇತರ ಸೋದರ ಸಂಸ್ಥೆಗಳು ನಡೆಸುತ್ತಿರುವ ಕಾರ್ಯಯೋಜನೆಗಳ ಬಗ್ಗೆ ತಿಳಿದಿಕೊಂಡು, ಶುದ್ದ ಕುಡಿಯುವ ನೀರಿನ ಘಟಕ ಮತ್ತು ಅಂಧರ ಶಾಲೆಗಳನ್ನು ಹಾಗೂ ರಾಯಚೂರು ಪ್ರವಾಹ ಪೀಡಿತರಿಗೆ ಅಣಿ ಮಾಡುತ್ತಿರುವ ಎರಡನೇ ಹಂತದ ಕಾರ್ಯವನ್ನು ವೀಕ್ಷಿಸಿದರು.

     ಸ್ವಾಮಿ ಜಪಾನಂದಜೀರವರ ನೇತೃತ್ವದಲ್ಲಿ ನಡೆಯುತ್ತಿರುವ ಕೋವಿಡ್-19 ನಿಯಂತ್ರಣ ಯೋಜನೆ ಮತ್ತು ಈ ಎಲ್ಲ ಯೋಜನೆಗಳಿಗೆ ಪೂರ್ಣ ಸಹಕಾರ ನೀಡುತ್ತಿರುವ ಇನ್ಫೋಸಿಸ್ ಫೌಂಡೇಷನ್ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

     ಇಡೀ ರಾಜ್ಯದಲ್ಲಿಯೇ ಮಾದರಿಯಾಗಿರುವಂತೆ ಸ್ವಾಮೀಜಿಯವರು ಕಳೆದ 30 ವರ್ಷಗಳಿಂದ ಸಾಮಾಜಿಕ ಕಳಕಳಿಯಿಂದ ನಾನಾ ರೀತಿಯ 20 ಯೋಜನೆಗಳನ್ನು ನಡೆಸುತ್ತಾ ಬರುತ್ತಿರುವುದು ಸುಲಭವಲ್ಲ ಎಂದು ತಿಳಿಸಿ, ಪೊಲೀಸ್ ಇಲಾಖೆ ಸದಾ ಇಂತಹ ಸಾಮಾಜಿಕ ಕಳಕಳಿಯಿರುವ ಸಂಸ್ಥೆಗೆ ಬೆಂಬಲವಾಗಿ, ಯಾವುದೇ ಸಂದರ್ಭದಲ್ಲಿಯೂ ಇಲಾಖೆಯ ಸಹಕಾರ ಸದಾ ದೊರೆಯುತ್ತದೆ ಎಂದರು.

    ಮಧುಗಿರಿ ಉಪವಿಭಾಗದ ಸುಮಾರು 350 ಪೊಲೀಸ್ ಸಿಬ್ಬಂದಿಗೆ ವಿಶೇಷವಾಗಿ ಶಕ್ತಿವರ್ಧಕ ಔಷಧಿಗಳನ್ನು ನೀಡಲಾಯಿತು. ಸಿಬ್ಬಂದಿಯ ಪರವಾಗಿ ಡಿವೈಎಸ್ಪಿ ಪ್ರವೀಣ್‍ಕುಮಾರ್ ಔಷಧಿಗಳನ್ನು ಸ್ವಾಮೀಜಿಯವರಿಂದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ವೃತ್ತ ನಿರೀಕ್ಷಕರಾದ ನಾಗರಾಜ್ ಹಾಗೂ ಸಬ್‍ಇನ್‍ಸ್ಪೆಕ್ಟರ್ ನಾಗರಾಜ್ ಮತ್ತಿತರ ಪೊಲೀಸ್ ಅಧಿಕಾರಿಗಳು  ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link