ಉತ್ತಮ ಸಂಸ್ಕಾರವಂತ ಸಾಗಬೇಕಾದರೆ ಮಧ್ಯಪಾನ ಕೈಬಿಡುವುದೇ ಸೂಕ್ತ

ಕುಣಿಗಲ್ :

      ದೇಶವನ್ನು ಮದ್ಯಪಾನ ಮುಕ್ತವಾಗಿ ಮಾಡಬೇಕೆಂದು ಮೊದಲು ದೇಶಕ್ಕೆ ಕರೆ ನೀಡಿದವರು ಮಹಾತ್ಮಗಾಂಧಿಜೀ ಅವರು ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿಯೇ ಸಾಮಾಜಿ ಪಿಡುಗಾದ ಮಧ್ಯವಪಾನ ನಿಷೇದಕ್ಕೆ ಒತ್ತು ನೀಡಿದ ಮಹಾತ್ಮರು ಇಂತಹವರ ಹಿತನುಡಿಗಳನ್ನ ಪಾಲಿಸಿದರೆ ನಿಮ್ಮ ಬದುಕು ಉತ್ತಮವಾಗುತ್ತದೆ ಎಂದು ಅಮೃತ್ತೂರು ಪಿ.ಎಸ್.ಐ. ಅನಿಲ್‍ಕುಮಾರ್ ಅಭಿಪ್ರಾಯಪಟ್ಟರು.

      ತಾಲೂಕಿನ ಎಡೆಯೂರಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ವತಿಯಿಂದ ಏರ್ಪಡಿಸಿದ್ದ ಮದ್ಯವ್ಯರ್ಜನ ಶಿಬಿರದ ಮದ್ಯವ್ಯಸನಿಗಳ ಉದ್ದೇಶಿಸಿ ಮಾತನಾಡಿದರು.

     ಮದ್ಯಪಾನ ಚಟದಿಂದ ದೇಹದ ಅರೋಗ್ಯದ ಜೊತೆಗೆ ಮನೆಯಲ್ಲಿನ ಮಾನಸಿಕ ನೆಮ್ಮದಿ ಹಾಳಾಗುತ್ತದೆ ಅರ್ಥಿಕ ಕಷ್ಟಕ್ಕೆ ತಲುಪುತ್ತೀರ ಇದರಿಂದ ಹಲವಾರು ಅಪರಾಧಗಳು ನಡೆಯುತ್ತವೆ ನಂತರ ಸಮಾಜದಲ್ಲಿ ನಿಮಗೆ ಗೌರವ ನೀಡುವುದಿಲ್ಲ ಆದ್ದರಿಂದ ಮದ್ಯಪಾನದಿಂದ ದೂರವಿರಿ ಎಂದು ಸಲಹೆ ನೀಡಿದರು .

      ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ರಾಧಾಕೃಷ್ಣರಾಮ ಮಾತನಾಡಿ ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರು ಗ್ರಾಮೀಣ ಭಾಗ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ 1278 ಮದ್ಯವ್ಯಜನ ಶಿಬಿರವನ್ನು ನಡೆಸುತ್ತಾ ಬಂದಿದ್ದಾರೆ ಅವರೊಟ್ಟಿಗೆ ಅಖಿಲ ಕರ್ನಾಟಕ ಜನಜಾಗೃತಿ ಸಮಿತಿಯ ಸದಸ್ಯರು ಉತ್ತಮವಾಗಿ ಸ್ಪಂದಿಸಿತ್ತಿರುವುದು ಅಭಿನಂದನೆ ವಿಚಾರ ಎಂದರು.

      ಸ್ವಯಂ ಪ್ರೇರಣೆಯಿಂದ ಮದ್ಯವ್ಯಸನಿಗಳ ಮನಸು ಪರಿವರ್ತನೆಯಾಗಿ ಅವರು ಮದ್ಯ ಮುಕ್ತರಾಗಬೇಕು ಅದಕ್ಕಾಗಿ ಅವರಿಗೆ ಅವಶ್ಯವಿರುವ ದ್ಯಾನ,ಸಂಸ್ಕಾರ,ಸಂಸ್ಕøತಿ,ನೀತಿ–ಹಾಗೂ ನಿದರ್ಶನಗಳನ್ನು ಹೇಳುತ್ತೇವೆ ಈಗಾಗಲೆ 2 ಸಾವಿರ ಮಂದಿ ಕುಣಿಗಲ್‍ನಲ್ಲಿ ಮದ್ಯ ಬಿಟ್ಟವರು ಇದ್ದಾರೆ ಅವರು ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

      ಕಾರ್ಯಕ್ರಮದಲ್ಲಿ ಬಾಗವಹಿಸಿದ ಗಣ್ಯರಿಗೆ ಗಿಡಗಳನ್ನು ನೀಡುವುದರ ಮುಖಾಂತರ ಸ್ವಾಗತಿಸಲಾಯಿತು ಜಿಲ್ಲಾಪಂಚಾಯಿತಿ ಸದಸ್ಯೆ ವರಲಕ್ಷ್ಮಿನಾಗರಾಜ್,ತಾಲೂಕುಪಂಚಾಯಿತಿ ಸದಸ್ಯ ಅರುಣ್‍ಕುಮಾರ್, ರೈತಸಂಘದ ಜಿಲ್ಲಾಧ್ಯಕ್ಷ ಆನಂದ್‍ಪಟೇಲ್ ಹುಲಿಕಟ್ಟೆ ,ಎಡೆಯೂರು ಜಯಕರ್ನಾಟಕ ಹೋಬಳಿ ಅಧ್ಯಕ್ಷ ವೆಂಕಟೇಶ್,ಬಿಜೆಪಿ ಮುಖಂಡ ನಾಗರಾಜು,ತಾಲೂಕು ನಿರ್ದೇಶಕ ಗಣಪತಿಭಟ್, ಜನಜಾಗೃತಿ ಸಮಿತಿ ಸದಸ್ಯ ರವೀಂದ್ರಕುಮಾರ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap