ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಉತ್ಪಾದನೆ

ದಾವಣಗೆರೆ:

       ಮಾಗನಹಳ್ಳಿ ರತ್ನ ಎಂಟರ್ ಪ್ರೈಸಸ್ ವತಿಯಿಂದ ನಗರದಲ್ಲಿ ಪ್ರಪ್ರಥಮವಾಗಿ ಹೈಜೀನಿಕ್ ಮೆನ್‍ಸ್ಟ್ರೂವಲ್ ಅಬ್ಸರ್‍ವಿಂಗ್ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸುಧೀರ್ ಆನಂದ್ ತಿಳಿಸಿದ್ದಾರೆ.ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ಋತು ಚಕ್ರದ ಸಂದರ್ಭದಲ್ಲಿ ಬಳಸುತ್ತಿರುವ ಸ್ಯಾನಿಟರಿ ಪ್ಯಾಡ್‍ಗಳು ವಿವಿಧ ರಾಸಾಯನಿಕಗಳಿಂದ ತಯಾರಿಸುವ ಉಡ್‍ಪಲ್ಪ್ ಹಾಗೂ ಕಣ, ಕಣ ಇರುವ ಪ್ಲಾಸ್ಟಿಕ್ ಶೀಟ್‍ನಿಂದ ಕೂಡಿವೆ.

        ಹೀಗಾಗಿ ಅವುಗಳಿಂದ ತುರುಕೆ, ದದ್ದುಗಳು ಉಂಟಾಗಲಿವೆ. ಅಲ್ಲದೇ, ಅದರಿಂದ ಹೊರಸೂಸುವ ದುರ್ವಾಸನೆಯಿಂದ ಮಹಿಳೆಯರು ಮುಜುಗರಕ್ಕೆ ಒಳಗಾಗುತ್ತಿರುವುದರ ಜೊತೆಗೆ ಈ ಪ್ಯಾಡ್‍ಗಳ ಬಳಕೆಯಿಂದ ಪರಿಸರ ಮಾಲಿನ್ಯಕ್ಕೂ ಕಾರಣವಾಗಿವೆ ಎಂದು ಹೇಳಿದರು.
ನಮ್ಮ ಸಂಸ್ಥೆಯು ಪರಿಸರ ಸ್ನೇಹಿಯಾಗಿ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಹೈಜೀನಿಕ್ ಮೆನ್‍ಸ್ಟ್ರೂವಲ್ ಅಬ್ಸರ್‍ವಿಂಗ್ ಸ್ಯಾನಿಟರಿ ಪ್ಯಾಡ್‍ಗಳನ್ನು ತಯಾರಿಸಲಾಗುತ್ತಿದೆ.

         ಇತರೆ ಪ್ಯಾಡ್‍ಗಳಲ್ಲಿ ಬಳಸುವ ಮೂಲವಸ್ತುವಿಗೆ ಪರ್ಯಾಯವಾಗಿ ಹುಲ್ಲಿನಿಂದ ತಯಾರಾದ ಎಳೆಯನ್ನು ಮೇಲ್ಪದರಕ್ಕೆ ಹಾಗೂ ಉತ್ತಮ ಹೀರುವ ಗುಣಮಟ್ಟದ ಶೀಟ್‍ಗಳನ್ನು ಬಳಸಿ ಪ್ಯಾಡ್ ಉತ್ಪಾದಿಸಲಾಗುತ್ತಿದೆ ಎಂದರು.ನಾವು ಉತ್ಪಾದಿಸಿರುವ ಪ್ಯಾಡ್‍ಗೆ ಶೀ ಕೇರ್ ಎಂಬ ಹೆಸರಿಡಲು ನಿರ್ಧರಿಸಿದ್ದು, ನಾವು ತಯಾರಿಸುತ್ತಿರುವ ಪ್ಯಾಡ್ ಋತುಚಕ್ರದ ಸಂದರ್ಭದಲ್ಲಿ ಆಗುವ ರಕ್ತಸ್ರಾವವನ್ನು ಕ್ಷಣಾರ್ಧದಲ್ಲಿ ಹೀರಿಕೊಂಡು ಟಾಪ್ ಶೀಟ್ ಅನ್ನು ಒಣಗಿಸುವುದರಿಂದ ಹಾಗೂ ಹೀರುವಿಕೆಯ ಶೀಟ್‍ನಲ್ಲಿ ಕ್ಷಮತೆ ಹೆಚ್ಚಾಗಿರುವ ಕಾರಣದಿಂದ ಪದೇ, ಪದೇ ಪ್ಯಾಡ್ ಬಳಸುವ ಅವಶ್ಯಕತೆ ಇಲ್ಲ. ಅಲ್ಲದೆ, ರಕ್ತದ ದುರ್ವಾಸನೆ ಹೊರ ಸೂಸುವುದಿಲ್ಲ. ಇದು ಪರಿಸರ ಸ್ನೇಹಿಯಾಗಿದ್ದು, ಇದನ್ನು ಮನೆಯಂಗಳದಲ್ಲಿ ಸುಲಭವಾಗಿ ನಾಶ ಮಾಡಬಹುದು ಎಂದು ಮಾಹಿತಿ ನೀಡಿದರು.

          ಈಗಾಗಲೇ ಮಹಿಳಾ ಶಾಲಾ-ಕಾಲೇಜುಗಳಲ್ಲಿ ಹಾಗೂ ವಸತಿಯುತ ಶಾಲೆಗಳಲ್ಲಿಯೂ ನಮ್ಮ ಪ್ಯಾಡ್‍ಗಳ ಗುಣಮಟ್ಟದ ಬಗ್ಗೆ ಡೆಮೋ ತೋರಿಸಲಾಗಿದೆ. ಅಲ್ಲದೇ, ದಾವಣಗೆರೆಯ ಹಳೇ ಭಾಗದ ಮೆಡಿಕಲ್ ಶ್ಯಾಪ್‍ಗಳಲ್ಲಿ ಉಚಿತವಾಗಿ ವಿತರಿಸಲು ಡೆಮೋ ಸಹ ತೋರಿಸಲಾಗಿದೆ. ಅಲ್ಲದೇ, ವಸತಿಯುತ ಶಾಲೆಗಳಲ್ಲಿ ಈ ಪ್ಯಾಡ್‍ಗಳ ಉತ್ಪಾದನೆಗೆ ಮುಂದಾದರೆ, ನಾವೇ ಅಗ್ಗದ ದರದಲ್ಲಿ ಕಚ್ಚಾವಸ್ತು ಹಾಗೂ ಯಂತ್ರವನ್ನು ಸಹ ಪೂರೈಸುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಎಂ.ಎಸ್.ವಿದ್ಯಾ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link