ಮಕ್ಕಳ ಗೌರವಯುತ ಬದುಕಿಗೆ ಶಿಕ್ಷಣ ಮುಖ್ಯ, ಅವರ ದುಡಿಮೆಯ ಹಣವಲ್ಲ

ಹರಪನಹಳ್ಳಿ: .

    ಮರಳಿ ಬಾರದ ಮಕ್ಕಳ ಬಾಲ್ಯಜೀವನವನ್ನು ದುಡಿಮೆ ಮಾಡಿಸಿ ಹಾಳು ಮಾಡುವುದು ಅಕ್ಷಮ್ಯ ಅಪರಾಧ, ಇದು ದೇಶದ ಪ್ರಗತಿಗೂ ಕಂಟಕ ಎಂದು ಹಿರಿಯ ಸಿವಿಲ್ ನ್ಯಾಯಾದೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

     ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮತಿ, ವಕೀಲರ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹರಪನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು.

      ಮಕ್ಕಳ ಗೌರವಯುತ ಬದುಕಿಗೆ ಶಿಕ್ಷಣ ಮುಖ್ಯವೇ ಹೊರತು ಅವರು ದುಡಿದು ತರುವ ಹಣದಿಂದಲ್ಲ ಎನ್ನುವುದನ್ನು ಪೋಷಕರು ಅರಿಯಬೇಕು. ಮಕ್ಕಳನ್ನು ದುಡಿಮೆಗೆ ತೆಗೆದುಕೊಳ್ಳುವ ಮುನ್ನ ಕಾನೂನನ್ನು ತಿಳಿಯುವ ಕೆಲಸ ಮಾಲೀಕು ಮಾಡಬೇಕಿದೆ ಇಲ್ಲವಾದರೆ ಶಿಕ್ಷೆ ತಪ್ಪುವುದಿಲ್ಲ. ದೈಹಿಕ ಸಾಮಥ್ರ್ಯಕ್ಕೆ ಮೀರಿದ ಕೆಲಸ ಅಪರಾಧವಾಗಿದೆ. ಸಂವಿಧಾನದ ಆಶಯಗಳನ್ನು ಎಲ್ಲರೂ ಪಾಲಿಸಬೇಕು, ದೇಶದ ಜನತೆ ಪಾಲಿಸಿದ್ದರೆ ಹೊಸ ಹೊಸ ಸಾವಿರಾರು ಕಾನೂನಿನ ಹುಟ್ಟು ಅವಶ್ಯವಿರಲಿಲ್ಲ ಎಂದರು.

     ವಕೀಲ ಎಂ.ಮೃತ್ಯುಂಜಯಪ್ಪ ಉಪನ್ಯಾಸ ನೀಡಿ ಮಾತನಾಡಿ. ವಿಶ್ವದಲ್ಲಿ 700 ಬಿಲಿಯನ್ ಬಾಲ ಕಾರ್ಮಿಕರಿದ್ದಾರೆ, ಭಾರತ ದೇಶದಲ್ಲಿ 33 ದಶಲಕ್ಷ ಬಾಲಕಾರ್ಮಿಕರು ಬಡತನ, ಅನಕ್ಷರತೆಯ ಮೂಲ ಕಾರಣಗಳಾಗಿವೆ. ವರ್ಷದಲ್ಲಿ 60 ಸಾವಿರ ಮಕ್ಕಳು ಕಣ್ಮರೆಯಾಗುತ್ತಾರೆ. ಮಕ್ಕಳನ್ನು ಕದ್ದವರು ಬಿಕ್ಷಾಟನೆ, ಕಳ್ಳಸಾಗಾಟ, ಡ್ರಗ್ಸ್ ಮಾಫೀಯಾದಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದು ದೇಶದ ದುರಂತವೇ ಸರಿ. ಬಾಲಕಾರ್ಮಿಕರು ತಮ್ಮ ಬಾಲ್ಯ ಮತ್ತು ಯೌವ್ವನವನ್ನು ಕಳೆದುಕೊಳ್ಳುತ್ತಾರೆ ಎಂದರು.

       ಪಿಎಸ್‍ಐ ಕೆ.ಶ್ರೀಧರ್ ಮಾತನಾಡಿ. ಶಿಕ್ಷಣ ಹುಲಿಯ ಹಾಲಿನಂತೆ, ಕುಡಿದವರು ಘರ್ಜಿಸಲೇಬೇಕು ಎನ್ನುವ ಮಹಾತ್ಮರ ನುಡಿಯಂತೆ ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ಬದುಕು ರೂಪಿಸಿಕೊಳ್ಳುತ್ತಾರೆ. ಸರ್ಕಾರಿ ಕೆಲಸಕ್ಕೆ ಜೋತು ಬೀಳದೆ ಜೀವನಕ್ಕೆ ಉತ್ತಮ ಸ್ವ ಉದ್ಯೋಗ ಆಯ್ಕೆ ಮಾಡಿಕೊಳ್ಳಿ. ಮಾಡುವ ಯಾವ ಕೆಲಸವೂ ಕೀಳಲ್ಲ, ಕೆಟ್ಟ ಮನಸ್ಥಿತಿಗಳು ಮಾತ್ರ ಕೀಳು. ಎಲ್ಲಾ ವರ್ಗದ ನೌಕರರನ್ನು ಗೌರವಿಸಿ ಎಂದರು.

     ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ್ ಮಾತನಾಡಿ. ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸಲು ಶಿಕ್ಷಣವೊಂದೇ ಪ್ರಮುಖ ದಾರಿ. ತಲೆ ತಗ್ಗಿಸಿ ಓದಿ ತಲೆ ಎತ್ತಿ ಬದುಕಿ. ಬಾಲಕಾರ್ಮಿಕರು ಕಂಡು ಬಂದರೆ ಕೂಡಲೇ ಮಾಹಿತಿ ತಿಳಿಸಿ ಮಕ್ಕಳ ನಿಜವಾದ ಬಾಲ್ಯವನ್ನು ಉಳಿಸಿ ಎಂದರು.

       ಕಾರ್ಯಕ್ರಮದಲ್ಲಿ ಕಿರಿಯ ಸಿವಿಲ್ ನ್ಯಾಯಾದೀಶೆ ಬಿ.ಜೆ.ಶೋಭಾ, ಅಧ್ಯಕ್ಷತೆಯನ್ನು ತಹಶಿಲ್ದಾರ ಡಾ.ನಾಗವೇಣಿ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ ಎಸ್. ದೇಸಾಯಿ, ವಕೀಲ ಕೆ.ಬಸವರಾಜ, ಅಪಾರ ಸರಕಾರಿ ವಕೀಲ ಮಂಜುನಾಥ ಕಣಿವಿಹಳ್ಳಿ, ಕಾರ್ಮಿಕ ನಿರೀಕ್ಷಕ ವಿ.ವೇಮಣ್ಣ, ಎಸ್‍ಡಿಎಂಸಿ ಅದ್ಯಕ್ಷ ಕೆ.ಲಿಂಗಾನಂದ, ಜಗದೀಶಗೌಡ, ಕೆ.ಪ್ರಕಾಶ, ಮುಖ್ಯೋಪಾದ್ಯಾಯ ಮುಸ್ತಾಫ್, ಸಿದ್ದಲಿಂಗನಗೌಡ, ಷಣ್ಮುಖಪ್ಪ, ಚೇತನ, ರಾಜಶೇಖರ, ಶಶಿಕಲಾ, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap