ಚೇತನ ಓಲಂಪಿಯಾಡ್ ಶಾಲೆಯಿಂದ ಶೈಕ್ಷಣಿಕ ಪ್ರವಾಸ

ದಾವಣಗೆರೆ:

          ನಗರದ ಚೇತನ ಓಲಂಪಿಯಾಡ್ ಶಾಲೆಯ ಮಕ್ಕಳನ್ನು ಶೈಕ್ಷಣಿಕ ಪ್ರವಾಸ ಕರೆದೊಯದ್ದರು.ಪಶ್ಚಿಮ ಘಟ್ಟದ ಖಾನಾಪುರ ಹಾಗೂ ಗೋವಾ ಗಡಿಭಾಗದಲ್ಲಿರುವ ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ, ತಂಬೂಡಿ ಸುರ್ಲಾ ಹಾಗೂ ಇನ್ನಿತರ ಬಯೋಡೈವರ್‍ಸಿಟಿ ಮುಖ್ಯ ಸ್ಥಳಗಳಿಗೆ ಎರಡು ದಿನಗಳ ಕಾಲ ಪಶ್ಚಿಮ ಘಟ್ಟಗಳಲ್ಲಿ ಸಸ್ಯಶಾಸ್ತ್ರ, ಪಕ್ಷಿಗಳ ವೀಕ್ಷಣೆ ಹಾಗೂ ವೈಜ್ಞಾನಿಕ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡಿದೆ.

          ಈ ಪ್ರವಾಸದಲ್ಲಿ ಪ್ರಸಿದ್ಧ ಪ್ರಕೃತಿ ಪ್ರೇಮಿ ಹಾಗೂ ವಿಜ್ಞಾನದ ಉಪನ್ಯಾಸಕ ಭಾಸ್ಕರ್ ಅವರ ತಂಡ ಭಾಗವಹಿಸುತ್ತಿದೆ. ತಂಬೂಡಿ ಸುರ್ಲಾ ಹಾಗೂ ಪಶ್ಚಿಮ ಘಟ್ಟಗಳ ಐತಿಹಾಸಿಕ ಹಿನ್ನೆಲೆ ಹಾಗೂ ಉತ್ತರ ಕರ್ನಾಟಕದ ಪ್ರಮುಖ ನದಿಗಳು ಹಾಗೂ ಬಯೋ ಡೈವರ್ಸಿಟಿ ಹಾಟ್‍ಸ್ಪಾಟ್ಸ್ ಬಗ್ಗೆ ಸುರೇಶ್‍ನಾಯ್ಕ ಮಾಹಿತಿ ನೀಡಲಿದ್ದಾರೆ.

         ವಿದ್ಯಾರ್ಥಿಗಳಲ್ಲಿ ಪರಿಸರದಲ್ಲಿ ಕಲಿಯುವ ಅವಕಾಶವನ್ನು ಕಲ್ಪಿಸಿ ವಿಷಯಗಳನ್ನು ಕೂಲಂಕುಷವಾಗಿ ಪ್ರಬಂಧದ ರೀತಿಯಲ್ಲಿ ಮಂಡಿಸಲು ಆಂಗ್ಲ ಉಪನ್ಯಾಸಕ ಶ್ರೀಧರ್ ಭಾಗವಹಿಸಿದ್ದಾರೆ. ಇಡೀ ಪ್ರವಾಸವು ಪ್ರಾಂಶುಪಾಲ ಶ್ರೀನಿವಾಸ್‍ಮೂರ್ತಿ ನೇತೃತ್ವದಲ್ಲಿ ನಡೆಯಲಿದೆ. ಈ ಪ್ರವಾಸದಲ್ಲಿ ಸುಮಾರು 100 ವಿದ್ಯಾರ್ಥಿಗಳು ಹಾಗೂ ಭೌತಶಾಸ್ತ್ರ ವಿಜ್ಞಾನಿ ಸ್ವಾಮಿ ಭಾಗವಹಿಸಲಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link