ತುರುವೇಕೆರೆ:
ತಾಲೂಕಿನ ಸಾರಿಗೆಹಳ್ಳಿ ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮದ್ಯಾಹ್ನ ನೆಡೆದಿದೆ.
ಮೃತ ದುರ್ದೈವಿ ಚಂದ್ರು (22) ತಾಲೂಕಿನ ತೋವಿನಕೆರೆ ಗೊಲ್ಲರಹಟ್ಟಿ ನಾಗಣ್ಣನ ಮಗ ಎಂದು ತಿಳಿದು ಬಂದಿದೆ. ಈತನು ಕಡಬ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದನು. ಭಾನುವಾರವಾದ್ದರಿಂದ ಗ್ರಾಮಕ್ಕ ಆಗಮಿಸಿದ್ದು ಸ್ನೇಹಿತರ ಜೊತೆ ಈಜಾಡಲು ಸಾರಿಗೆಹಳ್ಳಿ ಕೆರೆಗೆ ತೆರಳಿದ್ದಾರೆ. ಈಜುವಾಗ ಆಯತಪ್ಪಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಅಗ್ನಿ ಶಾಮಕ ದಳದವರು ಮೃತ ದೇಹ ಶೋದ ಕಾರ್ಯ ಮುಂದುವರೆಸಿದ್ದಾರೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
