ಚಿತ್ರದುರ್ಗ:
ನಗರದ ಹೊರವಲಯದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಮಂಗಳವಾರದಂದು ಸಡಗರ ಸಂಭ್ರಮದಿಂದ ಯಾವುದೇ ಜಾತಿ ಮತಧರ್ಮ, ಬೇಧವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಸಡಗರದಿಂದ ರಂಜಾನ್ ಹಬ್ಬವನ್ನು ಆಚರಿಸಲಾಯಿತು
ನಂತರ ಶಾಲೆಯಲ್ಲಿ ಸಂಗ್ರಹಿಸಿದ 6000 ರೂ ಮತ್ತು ದವಸಧಾನ್ಯವನ್ನು ಚಿತ್ರದುರ್ಗದ ಸಮೀಪವಿರುವ ಎಂ ಕೆ ಹಟ್ಟಿಯಲ್ಲಿರುವ ಬಸವೇಶ್ವರ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾದ “ಗಾಂಧಿ ಮತ್ತು ಅಂಬೇಡ್ಕರ್ ಅನಾಥಶ್ರಮಕ್ಕೆ” ನೀಡಲಾಯಿತು ಕಾರ್ಯಕ್ರಮದಲ್ಲಿ ಹಾಜರಿದ್ದ ಎಸ್‍ಆರ್‍ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಹಬ್ಬ ಜಗತ್ಪ್ರಸಿದ್ಧ ಹಬ್ಬವಾಗಿ ಜಗತ್ತಿನಾಧ್ಯಂತ ರಂಜಾನ್ ಆಚರಿಸಲಾಗುತ್ತದೆ.
ಹಾಗೂ ಪ್ರತಿಯೊಬ್ಬ ಮನುಷ್ಯನ ಸಂಪಾದನೆಯ ಕಾಲುಭಾಗವನ್ನು ದೀನರು ನಿರ್ಗತಿಕರಿಗೆ ಕೊಡುವ ಮತ್ತು ಮಹತ್ವದ ಉದ್ದೇಶವನ್ನು ಸಾಕಾರಗೊಳಿಸುವ ಹಬ್ಬವಾಗಿದೆ. ಹಾಗೂ ರಂಜಾನ್ ಹಬ್ಬ ಏಕತಾ ಮನೋಭಾವನೆ ಬೆಳೆಸುವ ಧ್ಯೇಯೊದ್ದೇಶವನ್ನೊಳಗೊಂಡ ಹಬ್ಬವಾಗಿದೆ ಎಂದು ಬಣ್ಣಿಸಿದರು ಮುಖ್ಯ ಅತಿಥಿಗಳಾಗಿದದ ಶಿಕ್ಷಣ ತಜ್ಞ ಕುದ್ರತ್, ಮಾತನಾಡಿ ಆಶ್ರಮದಲ್ಲಿರುವ ಮಕ್ಕಳನ್ನು ಕುರಿತು ಮಾತನಾಡಿ ಈ ಒಂದು ವಿನೂತನ ಕಾರ್ಯಕ್ರಮವು ನಿಜಕ್ಕೂ ಶ್ಲಾಘನೀಯ ದೇಶದೆಲ್ಲೆಡೆ ಇಸ್ಲಾಂ ಸಮುದಾಯದ ಬಂಧುಗಳಿಗೆ ಪವಿತ್ರ ಹಬ್ಬ ರಮ್ಜಾನ್ ಹಬ್ಬದ ಸಂಭ್ರಮದಲ್ಲಿರುವ ಬಾಂಧವರಿಗೆ ಸೌಹಾರ್ದತೆ ಪತೀಕವಾಗಿ ಶುಭಾಶಯಗಳ ಮೂಲಕ ಸಂದೇಶ ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗೂ ಓ ಅಲ್ಲಾಹನೇ ನನ್ನನ್ನೂ ಸೇರಿದಂತೆ ಅರಿತೋ ಅರಿಯದೆಯೋ ಮಾಡುವ ತಪ್ಪುಗಳನ್ನು ಮನ್ನಿಸು, ಎಂದು ಹಬ್ಬದ ಮಹತ್ವ ಮತ್ತು ಆಚರಿಸುವ ಬಗೆಯನ್ನು ಮಕ್ಕಳಿಗೆ ತಿಳಿಹೇಳಿದರು.
ಪ್ರಾಂಶುಪಾಲ ಪ್ರಭಾಕರ್ ಎಂ.ಎಸ್ ಮಾತನಾಡಿ ಯಾಂತ್ರಿಕ ಬದುಕು ಸಾಗಿಸುವ ವೇಳೆ ಅನಿರೀಕ್ಷಿತವಾಗಿ ಬಂದೊದಗುವ ದುಃಖದಿಂದ ಪಾರಾಗಲು ಈ ಪವಿತ್ರ ಮಾಸವನ್ನೇ ಇಸ್ಲಾಂ ಧರ್ಮಿಯರು ಹೇಳಿದ್ದಾರೆ. ಖುರಾನ್ ಗ್ರಂಥ ಓದಿದರೆ ಸಾಲದು, ಹೃದ್ಗತ ಮಾಡಿಕೊಂಡು ಸತ್ಯದ ಸಾಕ್ಷಾತ್ಕಾರದಿಂದ ಆತ್ಮ ಸಂಸ್ಕಾರ ಹೊಂದುವ ಮೂಲಕ ಸಿದ್ಧಿ ಪಡೆಯಬೇಕು. ನಿರಂತರ ಒಂದು ತಿಂಗಳು ಕಾಲ ಉಪವಾಸ ಕ್ರಮ ಕಡ್ಡಾಯ ಅನುಸರಿಸಬೇಕು.
‘ಉಪ’ ಎಂದರೆ ಹತ್ತಿರ ‘ವಾಸ’ ಎಂದರೆ ಇರುವುದು. ದೇವರನ್ನು ಆರಾಧಿಸುವ ಮೂಲಕ ದೇವರಿಗೆ ಹತ್ತಿರವಾಗುವುದು ಹಾಗೂ ದೇಹಕ್ಕೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ಕಂಡುಕೊಳ್ಳುವುದು ಅಲ್ಲಾಹನ ಪ್ರೀತಿ, ಪ್ರೇಮ ಸಂಪಾದಿಸಲು ಇರುವ ಏಕೈಕ ಮಾರ್ಗವೆಂದು ನಂಬಿದ್ದಾರೆ ಎಂದರು
ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರುಗಳಾದ ಶ್ರೀಮತಿ ಅರ್ಪಿತ ಎಂ.ಎಸ್ ಮತ್ತು ಶ್ರೀಮತಿ ಕೆ.ಜೆ ಪದ್ಮಾವತಮ್ಮ ಈವೆಂಟ್ ಕೋ-ಆರ್ಡಿನೇಟರ್ ರಾಹುಲ್ ಬಿ ಸಿಬ್ಬಂದಿ ವರ್ಗದವರಾದ ಫರ್ಹಾ, ನಸೀಬಾ, ಲುಬ್ನ, ತಬುಸೂಮ್, ಫರೀನ್, ಬಿಸ್ಮಾ, ಮುಖ್ತೀಯಾರ್ ಬೋಧಕ, ಬೋಧಕೇತರ ವರ್ಗ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
