ಚಿತ್ರದುರ್ಗ;
ದೋಷರಹಿತ ಮತದಾರರ ಪಟ್ಟಿ ಪರಿಷ್ಕರಣೆಗೆ ರಾಜಕೀಯ ಪಕ್ಷಗಳು ಸೇರಿದಂತೆ ಸಾರ್ವಜನಿಕರು, ಸಂಘ, ಸಂಸ್ಥೆಯವರು ಸಹಕರಿಸಬೇಕೆಂದು ಮತದಾರರ ಪಟ್ಟಿ ಚಿತ್ರದುರ್ಗ ಜಿಲ್ಲಾ ವೀಕ್ಷಕರು ಹಾಗೂ ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿಯವರಾದ ಮಹೇಶ್ವರರಾವ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತಪರಿಷ್ಕರಣೆಕುರಿತುನಡೆಸಿದ ಪರಿಶೀಲನಾ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪರಿಷ್ಕರಣೆ ನಡೆಯುತ್ತಿದ್ದು ಹೊಸದಾಗಿ ಸೇರ್ಪಡೆ, ಮತಗಟ್ಟೆ ವರ್ಗಾವಣೆ, ಕ್ಷೇತ್ರ ವರ್ಗಾವಣೆ, ಹೆಸರುತಿದ್ದುಪಡಿ ಸೇರಿದಂತೆ ಪಟ್ಟಿಯಿಂದಕೈಬಿಡಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿಇದು ನಡೆಯಲಿದೆ. ರಾಜಕೀಯ ಪಕ್ಷಗಳು ಸಹ ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿನಏಜೆಂಟರನ್ನುಮೂರು, ನಾಲ್ಕು ದಿನಗಳಲ್ಲಿ ನೇಮಕ ಮಾಡುವ ಮೂಲಕ ಆ ಪಟ್ಟಿಯಲ್ಲಿ ತಹಶೀಲ್ದಾರ್‍ಗಳಿಗೆ ನೀಡಿಪರಿಷ್ಕರಣೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಮತದಾರರ ಪಟ್ಟಿಯ ಪರಿಶೀಲನೆ ವೇಳೆ ಜನಸಂಖ್ಯೆಗನುಗುಣವಾಗಿ ಮತದಾರರ ಪಟ್ಟಿಅನುಪಾತ, ಲಿಂಗಾನುಪಾತ ಹಾಗೂ ಮರಣದ ಅಂಕಿಸಂಖ್ಯೆಗಳನುಸಾರವಾಗಿ ಪರಿಶೀಲನೆ ನಡೆಸಬೇಕು.ಹಿರಿಯೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಮತದಾರರ ಸಂಖ್ಯೆಕಡಿಮೆಇದ್ದು ಪರಿಶೀಲನೆ ನಡೆಸಲು ತಿಳಿಸಿದರು.
ಜಿಲ್ಲೆಯಲ್ಲಿನಎಲ್ಲಾ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿನ 1648 ಮತಗಟ್ಟೆ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದುಇವರ ಮೇಲ್ವಿಚಾರಣೆ ಮಾಡಲುಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರನ್ನು ಮೇಲ್ವಿಚಾರಣೆಗೆ ನೇಮಕ ಮಾಡಲಾಗಿದೆ.ಆದರೆ ಕೆಲವೊಂದುಕಡೆ ಬಿ.ಎಲ್.ಓ.ಗಿಂತಲೂಕಡಿಮೆ ಶ್ರೇಣಿ ಹೊಂದಿರುವ ಅಧಿಕಾರಿಗಳನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ.ಆದರೆ ಬಿ.ಎಲ್.ಓ.ಗಿಂತಕಡಿಮೆ ಶ್ರೇಣಿ ಹೊಂದಿದ ಅಧಿಕಾರಿಗಳನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಬಾರದುಎಂದು ಸೂಚನೆ ನೀಡಿದರು.
ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಮತಗಟ್ಟೆಯಿಂದ ಬೇರೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುತ್ತಾರೆ.ಇಂತಹ ಸಂದರ್ಭದಲ್ಲಿಆವರು ವಾಸಿಸುವ ವಿಳಾಸದ ವ್ಯಾಪ್ತಿಯ ಮತಗಟ್ಟೆಗೆ ವರ್ಗಾಹಿಸಿಕೊಳ್ಳಬೇಕಾಗುತ್ತದೆ.ಈ ಬಗ್ಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ, ಆಯುಕ್ತರು ಪರಿಶೀಲನೆ ನಡೆಸಿ ವರ್ಗಾವಣೆಗೆಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಶೇ 100 ರಷ್ಟುದೋಷರಹಿತವಾದ ಮತದಾರರ ಪಟ್ಟಿಯನ್ನು ಸಿದ್ದಪಡಿಸುವುದರಿಂದ ಚುನಾವಣೆ ಸಂದರ್ಭದಲ್ಲಿ ಬರಬಹುದಾದ ಸಮಸ್ಯೆಗಳು ಎದುರಾಗುವುದಿಲ್ಲ. ಇಲ್ಲವೆಂದರೆಚುನಾವಣೆ ಸಂದರ್ಭದಲ್ಲಿಕೈಬಿಟ್ಟೋಗಿದೆ, ತಪ್ಪಾಗಿದೆ, ಬೇರೆ ಮತಗಟ್ಟೆಗೆ ಸೇರಿದೆ ಎಂಬ ಆಪಾದನೆಗಳು ಬರಲಿವೆ. ಅಧಿಕಾರಿಗಳು ಹಾಗೂ ಮತದಾರರು ಸಹ ತಮ್ಮತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ಖಾತರಿಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾಚುನಾವಣಾಧಿಕಾರಿಆರ್.ಗಿರೀಶ್ ಮಾತನಾಡಿಮತದಾರರ ಪಟ್ಟಿಯಪರಿಷ್ಕರಣೆ ನಡೆಯುತ್ತಿದ್ದುಇದುನವಂಬರ್ 20 ರ ವರೆಗೆ ನಡೆಯಲಿದೆ.ಈಗಾಗಲೇ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಮನೆ ಮನೆ ಸಮೀಕ್ಷೆ ಮಾಡಲು ಸೂಚನೆ ನೀಡಲಾಗಿದೆ.ಜಿಲ್ಲೆಯಲ್ಲಿ 2019 ರಜನವರಿಗೆ 1787580 ಜನಸಂಖ್ಯೆಇರಬಹುದೆಂದು ಅಂದಾಜಿಸಿದ್ದು ಇದರಲ್ಲಿ1332168 ಮತದಾರರುಇರಬೇಕೆಂದುಅಂದಾಜಿಸಲಾಗಿದೆ.ಅದರನ್ವಯ 18 ರಿಂದ19 ವರ್ಷದೊಳಗಿನವರು 15016 ಇರುತ್ತಾರೆಎಂದುಅಂದಾಜಿಸಲಾಗಿದೆ. ಈ ಯುವ ಮತದಾರರ ನೋಂದಣಿಗೆಕಾಲೇಜಿನ ಪ್ರಾಂಶುಪಾಲರೊಂದಿಗೆ ಸಮಾಲೋಚಿಸಿ ನೋಂದಣಿಗೆಕ್ರಮ ಕೈಗೊಳ್ಳಲಾಗಿದೆ.
ಎಲ್ಲಾ ಮತಗಟ್ಟೆಗಳ ಬಿ.ಎಲ್.ಓ.ಗಳಿಗೆ ಕಿಟ್ ಗಳನ್ನು ವಿತರಣೆ ಮಾಡಿದ್ದು311 ಮಾತ್ರ ಬಾಕಿ ಉಳಿದಿವೆ. ಎಲ್ಲಾ ಬಿ.ಎಲ್.ಓ.ಗಳು ನವಂಬರ್ 15 ರಿಂದ 20 ರವರೆಗೆ ಬಿ.ಎಲ್.ಓ.ಗಳು ಮನೆ ಮನೆ ಭೇಟಿ ಮಾಡಿ ಸಮೀಕ್ಷೆ ನಡೆಸಲಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಹಾಯಕ್ಕಾಗಿಜಿಲ್ಲಾ ಮಟ್ಟದಲ್ಲಿ08194-222176 ಸಹಾಯವಾಣಿಯನ್ನು ಸಹ ಸ್ಥಾಪಿಸಲಾಗಿದೆಎಂದರು.
ಹಾಗೂ ಆಯಾತಾಲ್ಲೂಕುಕಚೇರಿಯಲ್ಲಿಯು ಸಹಾಯವಾಣಿ ಸ್ಥಾಪಿಸಲಾಗಿದೆ. ಮೊಳಕಾಲ್ಮುರು 08198-229234, 08195-250508, ಚಿತ್ರದುರ್ಗ 08194-221661, ಹಿರಿಯೂರು 08193-263091, ಹೊಸದುರ್ಗ 08199-230240 ಹಾಗೂ ಹೊಳಲ್ಕೆರೆ 08191-275062 ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ.ಸಾರ್ವಜನಿಕರುಇದರಉಪಯೋಗ ಪಡೆಯಬಹುದಾಗಿದೆಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವೀಂದ್ರ, ಉಪವಿಭಾಗಾಧಿಕಾರಿ ವಿಜಯಕುಮಾರ್ ಹಾಗೂ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್, ಮುಖ್ಯಾಧಿಕಾರಿ, ಪೌರಾಯುಕ್ತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ