ಹಣದ ಹೋಳೆ ಹರಿಯುವ ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣಿಟ್ಟ ಚುನಾವಣಾ ಆಯೋಗ…!!!

ಬೆಂಗಳೂರು

           ಶಾಂತಿಯತವಾಗಿ ಲೋಕಸಭಾ ಚುನಾವಣೆ ನಡೆಸಲು ಸರ್ವ ಪ್ರಯತ್ನ ನಡೆಸಿರುವ ಚುನಾವಣಾ ಆಯೋಗವು ಕರ್ನಾಟಕದ 12 ಸೇರಿ ದೇಶದ 110 ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಯಲಿದೆ ಎಂಬ ಮಾಹಿತಿ ಕಲೆಹಾಕಿ ಆ ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದೆ.

        ಚುನಾವಣೆ ಸಮೀಪಿಸುತ್ತಿರುವಂತೆ ಹಣದ ಹೊಳೆ ಹರಿಯುವ ಕ್ಷೇತ್ರಗಳ ಸಂಖ್ಯೆ 110 ರಿಂದ 150 ಏರಿಕೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಹದ್ದಿನ ಕಣ್ಣು ಇಟ್ಟಿದೆ.

        ಮೊದಲ ಮೂರು ಸ್ಥಾನದಲ್ಲಿ ಮಂಡ್ಯ, ಹಾಸನ, ಮೈಸೂರು ಲೋಕಸಭಾ ಕ್ಷೇತ್ರಗಳಿವೆ.ಬೆಂಗಳೂರು ಉತ್ತರ, ತುಮಕೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಬೀದರ್ ಲೋಕಸಭಾ ಕ್ಷೇತ್ರಗಳು ಚುನಾವಣಾ ಆಯೋಗದ ಪಟ್ಟಿಯಲ್ಲಿವೆ. ಈ ಸಂಬಂಧ ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ಹೆಚ್ಚು ಸ್ಕ್ವಾಡ್ ಮತ್ತು ಮನಿ ಕಮಾಂಡೋಗಳನ್ನು ನೇಮಕ ಮಾಡಲಾಗುತ್ತಿದೆ.

         ಈಗಾಗಲೇ 28 ಲೋಕಸಭಾ ವ್ಯಾಪ್ತಿಯ 224 ಕ್ಷೇತ್ರಗಳಲ್ಲಿ ಒಬ್ಬೊಬ್ಬ ಅಧಿಕಾರಿ ನೇಮಕವಾಗಿದ್ದಾರೆ. ಅದರಲ್ಲೂ ಸ್ಟಾರ್ ಕ್ಷೇತ್ರಗಳಲ್ಲಿ ಅಧಿಕಾರಿಗಳು ತೀವ್ರ ನಿಗಾ ವಹಿಸಲಿದ್ದಾರೆ. ಮಂಡ್ಯ, ಹಾಸನ, ಕಲಬುರಗಿ, ಬೆಂಗಳೂರು ಉತ್ತರ ಸೇರಿದಂತೆ ಸ್ಟಾರ್ ಕ್ಷೇತ್ರಗಳಿಗೆ ಮನಿ ಕಮಾಂಡೋ ಪಡೆ ಎಚ್ಚರಿಕೆಯಿಂದ ಕಾರ್ಯವಹಿಸಲಿದೆ. ಮಂಡ್ಯ ಒಂದು ಜಿಲ್ಲೆಗೇನೆ ಸುಮಾರು 16 ಮಂದಿ ಮನಿ ಕಮಾಂಡೋಗಳನ್ನ ನೇಮಕ ಮಾಡಲಾಗಿದೆ. ಹಾಗೆಯೇ ಬೆಂಗಳೂರು ನಗರದಲ್ಲೇ 35ಕ್ಕೂ ಹೆಚ್ಚಿನ ಮನಿ ಕಮಾಂಡೋ ತಂಡ ಬೀಡುಬಿಟ್ಟಿದೆ.

        ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಮನಿ ಕಮಾಂಡೋ ಪಡೆ ಹದ್ದಿನ ಕಣ್ಣು ಇಡಲು ಸಿದ್ಧರಾಗಿದ್ದಾರೆ. 224 ಕ್ಷೇತ್ರಗಳಲ್ಲಿ 250 ಐಟಿ ಅಧಿಕಾರಿಗಳ ತಂಡ ಬಂದಿಳಿದಿದ್ದಾರೆ. ಇವರು ಅಕ್ರಮ ಹಣ ಸಾಗಾಣಿಕೆ, ಅಕ್ರಮ ಹಣ ಸಂಗ್ರಹದ ಮೇಲೆ ತೀವ್ರ ನಿಗಾ ವಹಿಸಲು ಯೋಜನೆ ಹಾಕಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link