ಸಂಡೂರಿಗೆ ವೆಚ್ಚ ವೀಕ್ಷಕ ಮನೀಷಕುಮಾರ ಭೇಟಿ

ಬಳ್ಳಾರಿ

        ಬಳ್ಳಾರಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ನಿಯೋಜಿತರಾಗಿರುವ ವೆಚ್ಚ ವೀಕ್ಷಕ ಮನೀಷಕುಮಾರ ಚವ್ಡಾ ಅವರು ಸಂಡೂರು ವಿಧಾನಸಭಾಕ್ಷೇತ್ರದ ವಿವಿಧೆಡೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

        ನಂತರ ಅವರು ಸಂಡೂರು ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಅವರು ಪಕ್ಷಗಳು ಮತ್ತು ಅಭ್ಯರ್ಥಿಗಳ ಪರವಾಗಿ ನಡೆಸುವ ಸಭೆಗಳಿಗೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳನ್ನು ಕೂಡಲೇ ಜಮಾಗೊಳಿಸುವ ವ್ಯವಸ್ಥೆ ಮಾಡಬೇಕು. ಸಹಾಯಕ ಚುನಾವಣಾಧಿಕಾರಿಗಳು ಅಭ್ಯರ್ಥಿಗಳ ವೆಚ್ಚಕ್ಕೆ 70ಲಕ್ಷ ರೂ.ಮಿತಿ ಇರುವುದರಿಂದ ಖರ್ಚು ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ತೀವ್ರ ನಿಗಾವಹಿಸಿ ಜಮಾಗೊಳಿಸುವ ಕೆಲಸ ಮಾಡಬೇಕು ಮತ್ತು ಯಾವುದೇ ರೀತಿಯಲ್ಲಿ ಚುನಾವಣಾ ಗೈಡ್ ಲೈನ್ಸ್ ಗಳನ್ನು ಉಲ್ಲಂಘಿಸಿದೇ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

       ಎಆರ್ ಒ, ಎಂಸಿಸಿ, ಎಸ್‍ಎಸ್ಟಿ ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಅಮಿತ್ ಬಿದರಿ ಸೇರಿದಂತೆ ಎಂಸಿಸಿ, ಎಸ್‍ಎಸ್ಟಿ ಸಿಬ್ಬಂದಿ ಹಾಗೂ ವೆಚ್ಚ ವೀಕ್ಷಕರ ಉಸ್ತುವಾರಿ ದೇವರಾಜ್ ಹಾಗೂ ಇನ್ನೀತರರು ಇದ್ದರು..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link