ಚುನಾವಣೆಯ ಸಕಲಸಿದ್ದತೆಗಾಗಿ ಪೂರ್ವಭಾವಿ ತರಬೇತಿ ಕಾರ್ಯಾಗಾರ : ಮಾಂಟೇಸ್ವಾಮಿ

ಜಗಳೂರು:

       ವಿವಿ ಪ್ಯಾಟ್ ಬಳಕೆಯ ಬಗ್ಗೆ ಪ್ರತಿ ಮತಗಟ್ಟೆ ಹಂತದಲ್ಲಿ ಯಾವುದೆ ಅಡೆತಡೆಗಳು ಉಂಟಾಗದಂತೆ ಸಿಬ್ಬಂದಿಗಳು ಸಮರ್ಥವಾಗಿ ಚುನಾವಣೆ ಕರ್ತವ್ಯವನ್ನು ನಿಭಾಯಿಸುವ ಸಲುವಾಗಿ ಪೂರ್ವಭಾವಿಯಾಗಿ 2 ಹಂತಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಎಆರ್‍ಓ ಮಾಂಟೆಸ್ವಾಮಿ ಹೇಳಿದರು.

        ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣಾ ಸೆಕ್ಟರ್ ಆಫೀಸರ್ ಗಳ ಸಮ್ಮುಖದಲ್ಲಿ ಮತಗಟ್ಟೆಯ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಮೊದಲನೆ ಹಂತದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

        ತಾಲೂಕಿನಲ್ಲಿ ಚುನಾವಣೆಗೆ ನೇಮಕಮಾಡಿರುವ ಒಟ್ಟು 1240 ಜನ ಸಿಬ್ಬಂದಿಗಳಿಗೆ 31 ಜನ ಸೆಕ್ಟರ್ ಆಫೀಸರ್ ಗಳು ಪ್ರಾಜೆಕ್ಟರ್ ಮೂಲಕ ಪ್ರಾತ್ಯಕ್ಷಿಕವಾಗಿ ಮಾಹಿತಿ ನೀಡುವರು ಹಾಗೂ ಮಾಹಿತಿ ಕೈಪಿಡಿಯ ಪುಸ್ತಕದಲ್ಲಿರುವಂತೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ.ಅಲ್ಲದೇ ಮತದಾನದ ದಿನದಂದು ಸಿಬ್ಬಂದಿಗಳಿಗೆ ಯಾವುದೆ ತೊಂದರೆಯಾಗದಂತೆ ಮೂಲ ಸೌಕರ್ಯಗಳನ್ನು ಪ್ರತಿ ಮತಗಟ್ಟೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

       ತರಬೇತಿಯಲ್ಲಿ ಹಾಜರಿರುವ ಪ್ರತಿಯೊಬ್ಬ ಊಟದ ವ್ಯವಸ್ಥೆಯನ್ನು ಚುನಾವಣಾ ಖರ್ಚುವೆಚ್ಚದಲ್ಲಿ ಭರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ತಾ.ಪಂ.ಇಓ ಜಾನಕಿರಾಂ, ಎಸ್‍ಟಿ ಇಲಾಖೆಯ ಶಿವಣ್ಣ, ಸಮಾಜಕಲ್ಯಾಣಾಧಿಕಾರಿ ಆರ್ ಅಶೋಕ್, ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ವೆಂಕಟೇಶ್ ಮೂರ್ತಿ, ಸಿಡಿಪಿಓ ಭಾರತಿಬಣಕಾರ್ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಪ್ಪ ಲೋಕೊಪಯೋಗಿ ಇಲಾಖೆಯ ಪ್ರಭು ಸೇರಿಂದತೆ ತರಬೇತಿಯಲ್ಲಿ ಸಿಬ್ಬಂದಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap