ಬೆನಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾ ನಿರ್ವಹಣಾ ತಂಡ..!!

ಮಿಡಿಗೇಶಿ
     
        ಮಾ.15 ನಮ್ಮ ಭಾರತ 28 ಲೋಕಸಭಾ ಚುನಾವಣೆಯು ಏಪ್ರಿಲ್ ತಿಂಗಳಲ್ಲಿ ನಡೆಸಲು ನಿಗಧಿಯಾಗಿದ್ದು ಸರಿಯಷ್ಠೇ ಸದರಿ ಚುನಾವಣೆಯು ಬಹಳ ಮಹತ್ವಪೂರಕ ಚುನಾವಣೆಯಾಗಿದ್ದು ಚುನಾವಣಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ಸಂಭಂವಿಸ ಬಾರದೆಂಬುದು ಚುನಾವಣಾ ಆಯೋಗದ ಸ್ಪಷ್ಟ ನಿಲುವಾಗಿದ್ದು ಮುಂಜಾಗೃತವಾಗಿ ಆಯಾಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮತಗಟ್ಟೆಗಳ ಬಗ್ಗೆ ಮುನ್ನಚ್ಚೆರಿಕೆ ವಹಿಸುವಂತೆ ತಿಳಿಸಿದ್ದಾರೆ.
        ಆಯಾ,ಜಿಲ್ಲೆಯ ಜಿಲ್ಲಾಧಿಕಾರಿ,ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿ ,ದಂಢಾಧಿಕಾರಿಗಳವರು, ಮತಗಟ್ಟೆಗಳ ಸ್ಥಳ ಪರಿಶೀಲನೆ ಹಾಗೂ ಆಯಾಭಾಗದಲ್ಲಿನ ಈಗಿನ ಬರಗಾಲದ ಪರಿಸ್ಥಿತಿಯಲ್ಲಿ ಅಲ್ಲಿನ ಜನತೆಯ ಕುಂದುಕೊರತೆಗಳ ಬಗ್ಗೆ ಅರಿತು ಸದರಿ ಜನಸಾಮಾನ್ಯರುಗಳವರಿಗೆ ಅತ್ಯಗತ್ಯವಾದ ಅನುಕೂಲಕತೆಗಳನ್ನು ಕಲ್ಪಿಸಲು ಸರ್ಕಾರದಿಂದ ದೊರೆಯಬಹುದಾದ ಅನುಕೂಲತೆಗಳನ್ನು ಒದಗಿಸಿ ಕೊಡುವಂತೆ ಚುನಾವಣಾ ಆಯೋಗ ತಿಳಿಸಿರುತ್ತದೆ
 
        ಸದರಿ ಆಯೋಗದ ಆದೇಶದಂತೆ ತುಮಕೂರು ಲೋಕಸಭಾ ಚುನಾವಣೆಯ ಜವಬ್ದಾರಿ ಹೊತ್ತಂತಹ ಜಿಲ್ಲಾಧಿಕಾರಿ ರಾಖೇಶ್,ಪೋಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ,ಉಪವಿಭಾಗಾಧಿಕಾರಿ ವೇಣುಗೋಪಾಲ್,ಗ್ರಾಮ ಲೆಕ್ಕಿಗ ಪ್ರಸನ್ನ,ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜುಂಜೆಗೌಡ,ಸಿಪಿ.ಐ.ದಯಾನಂದ ಶೇಷಗುಣಿ,ಹಾಗೂ ಚುನಾವಣೆಗೆ ಸಂಭಂಧಿಸಿದ ಬಿ,ಎಲ್,ಓ ಗಳವರು ತಾ-15-03-2019 ರಂದು ಮಧ್ಯಾಹ್ನ ಸಮಯ 3-30 ಗಂಟೆಯ ತನಕ ಮಿಡಿಗೇಶಿ ಗ್ರಾಮ ಪಮಚಾಯಿತಿಗೆ ಸೇರಿದ ಬೆನಕನಹಳ್ಳಿ ಗ್ರಾಮ ಚುನಾವಣಾ ಆಯೋಗದ ಲೆಕ್ಕ ಪತ್ರದ ದಾಖಲೆಗಳಲ್ಲಿ ಅತ್ಯಂತ ಅತಿಸೂಕ್ಷ್ಮ ಕೇಂದ್ರ ಎಂದೇ ಹೆಸರಾಗಿರುವ ಬೆನಕನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದ್ದು
 
        ಅಲ್ಲಿನ ಮಹಿಳೆಯರ ಹಾಗೂ ಪುರುಷರ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಕೊಡುವಂತೆ,ಮಳೆಬಾರದ ಬೆಳೆ ಬೆಳೆಯದೆ ರೈತರಿಗೆ ಅತಿಮುಖ್ಯವಾಗಿ ದನಕರುಗಳಿಗೆ ಮೇವು ಒದಗಿಸುವಂತೆ,ಜನ ಸಾಮಾನ್ಯರುಗಳಿಗೆ ಕೆಲಸ ಕಾರ್ಯಗಳಿಲ್ಲದೆ ಗುಳೆ ಹೋಗುವ ಪರಿಸ್ಥಿತಿ ತಲೆದೂರಿರುವ ಬಗ್ಗೆ ಜನರು ಅಧಿಕಾರಿಗಳ ಗಮನ ಸೆಳೆದಾಗ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕಾರ್ಯಗಳನ್ನು ಒದಗಿಸುವುದಾಗಿ,ಕುಡಿಯುವ ನೀರಿಗಾಗಿ ಶುದ್ಧ ನೀರಿನ ಘಟಗವನ್ನು ಶೀರ್ಘದಲ್ಲಿ ಒದಗಿಸಿ ಕೊಡುವ ಭರವಸೆ ನೀಡಿದರು,ಹಾಗೂ ತಮ್ಮ ಪವಿತ್ರವಾದ ಮತದಾನವನ್ನು ಯಾವುದೇ ಅಂಜಿಕೆಯಿಲ್ಲದೆ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ರಾಖೇಶ್ ಹಾಗೂ ಪೋಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣರವರು ಬೆನಕನಹಳ್ಳಿಯ ಜನ ಸಮಾನ್ಯರಿಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಎ.ಎಸ್.ಐ,ಗಳಾದ ತಾರಾಸಿಂಗ್,ರವಿ ಹಾಗೂ ರಕ್ಷಣಾ ಸಿಬ್ಬಂಧಿ ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link