ಡಿಸೆಂಬರ್ ವೇಳೆಗೆ ನೂತನ ಕಾಯ್ದೆ ಪ್ರಕಾರ ಚುನಾವಣೆ : ಜೆ.ಸಿ.ಮಾಧುಸ್ವಾಮಿ

ಬೆಂಗಳೂರು

     ವಾರ್ಡ್ ಮರು ವಿಂಗಡಣೆ,ಮರು ನಿಯೋಜನೆ ಬಳಿಕ ಬಿಬಿಎಂಪಿ ಚುನಾವಣೆ ಯನ್ನು ಡಿಸೆಂಬರ್ ಅಂತ್ಯದ ವೇಳೆಗೆ ನಡೆಸಲು ಸರ್ಕಾರ ತೀರ್ಮಾನಿಸಿದೆ.ಅಂತೆಯೇ ಸೆ 21ರಂದು ನಡೆಯಲಿರು ವ ಮಳೆಗಾಲದ ವಿಧಾನ ಸಭೆ ಅಧಿವೇಶದಲ್ಲಿಯೇ ವಿಧೇಯಕಕ್ಕೆ ಅನುಮೋದನೆ ಪಡೆದು ಚುನಾವಣೆ ನಡೆಸಲಾ ಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

     ಬಿಬಿಎಂಪಿ ವಿಧೇಯಕ ಸಂಬಂಧ ರಚಿಸಲಾಗಿರುವ ಜಂಟಿ ಸದನ ಸಮಿತಿ ಸಭೆಯ ಬಳಿಕ ಯುಎನ್ಐ ಸುದ್ದಿಸಂ ಸ್ಥೆಯೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ,ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಉದ್ದೇಶ ಸರ್ಕಾರದ ಮುಂದಿಲ್ಲ.ಆದರೆ 1970ನೇ ಬೆಂಗಳೂರು ನಗರ ಪಾಲಿಕೆ ವಿಧೇಯಕದಂತೆ ಇದುವರೆಗೆ ಚುನಾವಣೆ, ವಾರ್ಡ ಮರು ವಿಂಗಡಣೆ,ಆಡಳಿತ ನಡೆಸಿಕೊಂಡು ಬರಲಾಗಿದೆ.ಆದರೆ ಬೆಂಗಳೂರು ಪ್ರಸ್ತುತ ದೆಹಲಿ,ಮುಂಬೈ ನಗರದ ಬಳಿಕ ಮೂರನೇ ಅತಿದೊಡ್ಡ ಹಾಗೂ ಅತಿ ಹೆಚ್ಚು ಜನಸಂಖ್ಯೆಯುಳ್ಳ ಮಹಾನಗರವಾಗಿದೆ.

     ಇದರ ಆಡಳಿತ ಹಾಗೂ ಜನರಿಗಅಗತ್ಯ ಸೇವೆ,ಸೌಲಭ್ಯ ಕಲ್ಪಿಸಲು ಸದಸ್ಯದ ಾಆಡಳಿತ ವ್ಯವಸ್ಥೆಯಲ್ಲಿ ಕಷ್ಟಸಾಧ್ಯ ವಾಗಿದೆ.ಹೀಗಾಗಿ ನೂತನ ವಿಧೇಯಕ ಜಾರಿ ಮೂಲಕ ಹಾಲಿ ಇರುವ 198 ವಾರ್ಡಗಳ ಬದಲಾಗಿದೆ. 225 ವಾರ್ಡ ಗಳ ಮರು ನಿಯೋಜನೆ ಮತ್ತು ಮರು ವಿಂಗಡಣೆ ಅಗತ್ಯವಿದೆ.

      ಆಡಳಿತ ದೃಷ್ಟಿಯಿಂದ ಹಾಲಿ 8 ವಿಭಾಗಗಳಿದ್ದು 15 ವಿಭಾಗಗಳನ್ನು ರೂಪಿಸುವ ಅಗತ್ಯವಿದೆ.ಅವೈಜ್ಞಾನಿಕ ವಾಗಿ ರೂಪಿಸಲಾಗಿರುವ ವಾರ್ಡ್ ಗಳನ್ನು ಪುನರ್ ರಚನೆ ಅನಿವಾರ್ಯವಾಗಿದೆ.ಜನ ಸಂಖ್ಯೆ,ಭೌಗೋಳಿಕ ಪ್ರದೇ ಶ ಆಧರಿಸಿ ವಾರ್ಡ್ ಗಳು,ಆಡಳಿತ ವಿಕೇಂದ್ರೀಕರಣ ರೂಪಿಸಲು ಸರ್ಕಾರ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರೂಪಿ ಸಿದೆ.ಹಾಲಿ ವಾರ್ಡಗಳ ಮರು ವಿಂಗಣೆಯಿಂದಾಗಿ ಸುಗಮ ಆಡಳಿತಕ್ಕೆ ಅವಕಾಶವಾಗಲಿದೆ.ಪ್ರಸ್ತುತ ಕೆಲವು ವಾರ್ಡ್ ಗಳು 35 ಸಾವಿರ ರಿಂದ 45 ಸಾವಿರ ಜನಸಂಖ್ಯೆ ಇದೆ.ಹಾಗೂ ಗಾಂಧಿ ನಗರ,ಚಾಮರಾಜ ಪೇಟೆಯಂತಹ ಪ್ರದೇಶಗಳಲ್ಲಿ ಒಂದರಿಂದ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಅತೀ ಜನ ಸಂಖ್ಯೆ ದಟ್ಟಣೆಯಿದೆ.

     ಅಂತೆಯೇ ಬೆಂಗ ಳೂರು ಹೊರ ವಲಯ,ಔಟರ್ ರಿಂಗ್ ರಸ್ತೆ ಆಸು ಪಾಸಿನಲ್ಲಿ ನಾಲ್ಕದಿಂದ ಐದು ಅಥವಾ 6 ಕಿ.ಮೀ ವ್ಯಾಪ್ತಿಯಲ್ಲಿ ಜನಸಂಖ್ಯೆ 30 ರಿಂದ 32 ಸಾವಿರ ಇದೆ.ಜೊತೆಗೆ ಹಲವಾರು ವಾರ್ಡ್ ಗಳು ಎರಡೆರಡು,ಮೂರು ವಿಧಾನ ಸಭಾ ಕ್ಷೇತಗಳಲ್ಲಿ ಹರಿದು ಹಂಚಿಹೋಗಿದೆ.ಹೀಗಾಗಿ ಅಭಿವೃದ್ದಿಗೆ,ಆಡಳಿತಕ್ಕೆ ಅನಾನೂಕೂವಾಗುತ್ತಿದೆ.ಇದಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ನೂತನ ಕಾಯ್ದೆ ಜಾರಿ ಮತ್ತು ಅನುಷ್ಟಾನ ಹಾಗೂ ಕಾಯ್ದೆ ಪ್ರಕಾರ ಚುನಾವಣೆ ನಡೆಸುವು ದು ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂಬುದನ್ನು ಜಂಟಿ ಸದನ ಪರಿಶೀಲನಾ ಸಮಿತಿ ಮನಗಂಡಿದೆ.ಶಾಸಕ ರಿಗೆ ಮನದಟ್ಟು ಮನದಟ್ಟಾಗಿದೆ.

     ಅದರಂತೆ ಚುನಾವಣೆಯನ್ನು ನಡೆಸಲು ಸರ್ಕಾರ ತೀರ್ಮಾನಿ ಸಿದೆ.ಈ ಸಂಬಂಧ ವಿಧಾನ ಸಭೆಯಲ್ಲಿ ವಿಧೇಯಕ ಮಂಡಿಸಲಾಗಿದೆ .ಆಡಳಿತ ಮತ್ತು ಪ್ರತಿಪಕ್ಷದ ಶಾಸಕರು,ಮಾಜಿ ಸಚಿವರು ಒತ್ತಾಯದ ಮೇರೆಗೆ ವಿಧೇಯಕವ ನ್ನು ಜಂಟಿ ಪರಿಶೀಲನಾ ಸಮಿತಿಗೆ ವಹಿಸಲಾಗಿದೆ.ಸಮಿತಿಯು ನಿರಂತರ ಸಭೆಗಳನ್ನು ನಡೆಸಿ ಮಧ್ಯಂತರ ವರದಿ ಯನ್ನು ವಿಧಾನ ಸಭೆ ಅಧಿವೇಶನದಲ್ಲಿ ಮಂಡಿಸಿ ಕಾಯ್ದೆಗೆ ಅನುಮೋದನೆ ಪಡೆದುಕೊಳ್ಳಲು ತೀರ್ಮಾನಿಸಿದೆ ಎಂದರು.

     ಸೆ 03ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 225 ವಾರ್ಡಗಳನ್ನು ಪುರನ್ ರಚನೆ ಮಾಡಿ ಚುನಾವಣೆ ನಡೆಸ ಲು ತೀರ್ಮಾನಿಸಲಾಗಿದೆ.ಅಂತೆಯೇ ಸೆ 04 ರಂದು ನಡೆಸು ಜಂಟಿ ಪರಿಶೀಲನಾ ಸಭೆಯಲ್ಲಿ ಆಡಳಿತ ಪಕ್ಷ,ವಿಪಕ್ಷ, ಜೆಡಿಎಸ್ ಪಕ್ಷಗಳ ಶಾಸಕರು ವಾರ್ಡ್ ಮರು ವಿಂಗಡಣೆ ಮಾಡಿ ಚುನಾವಣೆ ನಡೆಸಲು.225 ವಾರ್ಡ್ ಗಳನ್ನು ರಚಿಸಲು ಒಪ್ಪಿಗೆ ನೀಡಿದ್ದಾರೆ.ಈ ಸಂಬಂದ ಪ್ರತ್ಯೇಕ ಎರಡು ಉಪ ಸಮಿತಿಗಳನ್ನು ರಚಿಸಿದ್ದು ದಿನ ನಿತ್ಯ ಸಭೆ ಗಳನ್ನು ನಡೆಸಿ ಜಂಟಿ ಸದನ ಸಮಿತಿಗೆ ಮಾಹಿತಿ,ವರದಿ ನೀಡಲಿದೆ.ಜಂಟಿ ಪರಿಶೀಲನಾ ಸಮಿತಿಯು ಪ್ರತೀ ಮಂಗ ಳವಾರ ಸಭೆ ಸೇರಿ ಹಿಂದೆ ಬಿ.ಎಸ್.ಪಾಟೀಲ್ ಹಾಗೂ ಸಿದ್ದಯ್ಯ ಅವರ ನೇತೃತ್ವದ ಸಮಿತಿ ನೀಡಿದ ವರದಿ ಪ್ರಕಾ ರ ಬಿಬಿಎಂಪಿ ಮರು ವಿಂಗಡಣೆ,ಅಧಿಕಾರ ಹಂಚಿಕೆ,ಕಾರ್ಯಭಾರಗಳು,ಜವಾಬ್ದಾರಿಗಳನ್ನು ಮರುಹಂಚಿಕೆ ಮಾ ಡುವ ಮೂಲಕ ದಕ್ಷ ಹಾಗೂ ಪಾರದರ್ಶಕ,ಜನಪರ ಆಡಳಿತ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿ ದರು.

    ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟಂಬರ್ 21ರಂದು ಆರಂಭವಾಗಲಿರುವ ವಿಧಾನ ಸಭೆ ಮಳೆಗಾಲದ ಅಧಿವೇಶನದಲ್ಲಿ ಜಂಟಿ ಸದನ ಸಮಿತಿಯ ಮಧ್ಯಂತರ ವರದಿಯನ್ನು ಮಂಡಿಸಿ ಬಿಬಿಎಂಪಿ ವಿಧೇಯಕ ಅನು ಮೋದನೆ ಪಡೆದು ಚುನಾವಣೆ ನಡೆಸಲು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

   ಆ ಮೂಲಕ ಬಿಬಿಎಂಪಿ ಚುನಾವಣೆ ಮುಂದೂಡಲು ಸದನದ ಜಂಟಿ ಪರಿಶೀಲನಾ ಸಮಿತಿ ರಚಿಸಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕುವ ಜೊತೆಗೆ ಸಕಾಲದಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾ ಗಿದೆ ಎಂಬ ಸಂದೇಶ ರವಾನಿಸಲು ಸರ್ಕಾರ ತೀರ್ಮಾನಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap