ಹುಳಿಯಾರು:
ಹುಳಿಯಾರು ಸಮೀಪದ ಕೆಂಕೆರೆ ಗ್ರಾಪಂ ವ್ಯಾಪ್ತಿಯ ಎಂ.ಜಿ.ಪಾಳ್ಯದಲ್ಲಿ ಭಾರಿ ಮಳೆಗಾಳಿಯಿಂದ ವಿದ್ಯುತ್ ಕಂಬಗಳು ಧರೆಗುರುಳಿವೆ.
ಕೆಂಕೆರೆಯಿಂದ ವೆಂಕಟಯ್ಯನಕೆರೆ ಮಾರ್ಗವಾಗಿ ಎಂ.ಜಿ.ಪಾಳ್ಯಕ್ಕೆ ನಿರಂತರ ಜ್ಯೋತಿ ಸಂಪರ್ಕ ಕೊಟ್ಟಿದ್ದ ವಿದ್ಯುತ್ ಕಂಬಗಳಲ್ಲಿ ವೆಂಕಟ್ಟಯ್ಯನ ಕೆರೆಯ ಬಳಿ ಭಾನುವಾರ ರಾತ್ರಿ ಭಾರಿ ಗಾಳಿಗೆ 2 ಕಂಬಳು ರಸ್ತೆಗೆ ಅಡ್ಡಲಾಗಿ ಮರಿದು ಧರೆಗುರಳಿವೆ. ಪರಿಣಾಮ ವಾಹನಗಳ ಸಂಚಾರಕ್ಕೆ ಭಾರಿ ತೊಡಕಾಗಿತ್ತು.
ಅಲ್ಲದೆ ಎಂ.ಜಿ.ಪಾಳ್ಯದಲ್ಲಿ ಹತ್ತನ್ನೆರಡು ಮನೆಗಳ ಹೆಂಚುಗಳು ಹಾರಿಹೋಗಿದ್ದಲ್ಲದೆ ಸುತ್ತಮುತ್ತಲ ತೋಟಗಳಲ್ಲಿ ತೆಂಗಿನ ಮರ ಸೇರಿದಂತೆ ಅನೇಕ ಬಗೆಯ ಮರಗಳು ನೆಲಕ್ಕುರುಳಿದೆ. ಅಲ್ಲದೆ ರಸ್ತೆಗೆ ಅಡ್ಡಲಾಗಿ ತೆಂಗಿನ ಮರಗಳೂ ಸಹ ಬಿದ್ದಿದ್ದು ರೈತರೇ ಮರಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಬೆಳಿಗ್ಗೆಯೇ ಬೆಸ್ಕಾಂ ಶಾಖಾಧಿಕಾರಿ ಮೂರ್ತಿ ಅವರ ನೇತೃತ್ವದಲ್ಲಿ ಎಂ.ಜಿ.ಪಾಳ್ಯ ಸೇರಿದಂತೆ ಗೌಡಗೆರೆ, ಕುರಿಹಟ್ಟಿ, ಕೆ.ಸಿಪಾಳ್ಯದ ಬಳಿ ಮುರಿದು ಬಿದ್ದಿದ್ದ ವಿದ್ಯುತ್ ಕಂಬಳನ್ನು ಪುನಃ ನೆಟ್ಟು ಸೋಮವಾರ ಮಧ್ಯಾಹ್ನದಷ್ಟರಲ್ಲಿ 3 ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕೊಡಲಾಯಿತು.