ಹೊಸ ವರ್ಷಕ್ಕೆ ಗ್ರಾಹಕರಿಗೆ ವಿದ್ಯುತ್ ನಿಗಮದಿಂದ ಭರ್ಜರಿ ಗಿಫ್ಟ್ .!

ಬೆಂಗಳೂರು:

    ರಾಜ್ಯದ ವಿದ್ಯುತ್ ನಿಗಮವು 2020 ರ ಮೊದಲ ತ್ರೈಮಾಸಿಕದಲ್ಲಿ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆ ರೂಪದಲ್ಲಿ ಎಫ್ ಎ ಸಿ ಅನ್ನು ಶೇ.60% ಇಳಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ  .ಈ ಕಡಿತದಿಂದ ಭಾರಿ ವಿದ್ಯುತ್ ಬಿಲ್ ಗಳಿಗೆ ಕತ್ತರಿ ಬೀಳಲಿದೆ  ಹಾಗಾಗಿ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. 

   ಇಂಧನ ಪೂರೈಕೆ (ಕಲ್ಲಿದ್ದಲು) ಯ ಆಧಾರದ ಮೇಲೆ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಮ್ಸ್) ದರ ಹೆಚ್ಚಿಸುತ್ತವೆ   ಅದನ್ನು ಎಫ್‍ಎಸಿ ಎನ್ನುತ್ತಾರೆ ಇದು ಜಾಸ್ತಿ ಆದಷ್ಟು ಗ್ರಾಹಕರ ಮೇಲಿನ ಹೊರೆ ಹೆಚ್ಚಾಗುತ್ತದೆ , ಬೆಸ್ಕಾಮ್  ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 12 ಪೈಸೆಗಳಷ್ಟನ್ನು ಇಳಿಕೆ ಮಾಡಲು ಮುಂದಾಗಿದೆ ಇನ್ನು 2019 ರ ಕೊನೆಯ ತ್ರೈಮಾಸಿಕದಲ್ಲಿ ಬೆಸ್ಕಾಮ್ ಮಿತಿಯಲ್ಲಿ ಎಫ್‍ಎಸಿ 29 ಪೈಸೆ / ಯುನಿಟ್ ಆಗಿತ್ತು.

    ಜೂನ್ 2019 ರಲ್ಲಿ, ಎಫ್‍ಎಸಿಯನ್ನು 60% ಕ್ಕಿಂತ ಸ್ವಲ್ಪ ಹೆಚ್ಚಿಸಲಾಗಿತ್ತು. ಡಿಸೆಂಬರ್ 20 ರಂದು ಹೊರಡಿಸಲಾದ ಕೆಇಆರ್‍ಸಿಯ ಇತ್ತೀಚಿನ ಆದೇಶವು ಎಫ್‍ಎಸಿಯನ್ನು ಸುಮಾರು 60% ರಷ್ಟು ಇಳಿಸಿದರಿಂದ ಮೆಸ್ಕಾಮ್ ಗ್ರಾಹಕರಿಗೆ ಎಫ್‍ಎಸಿ ಯನ್ನು 4 ಪೈಸೆ/ಯುನಿಟ್ ಗೆ ಇಳಿಸಿದೆ,ಹೆಸ್ಕಾಮ್ ಗ್ರಾಹಕರಿಗೆ 7 ಪೈಸೆ / ಯುನಿಟ್ ಗೆ ಇಳಿಸಿದರೆ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಗ್ರಾಹಕರಿಗೆ 6 ಪೈಸೆ / ಯುನಿಟ್ ಇಳಿಸಿದೆ. ಮಂಗಳೂರು ಎಸ್‍ಇ ಜಡ್ ಮತ್ತು ಹೆಸ್ಕಾಮ್‍ನ ವ್ಯಾಪ್ತಿಯಲ್ಲಿ ಬರುವ ಗ್ರಾಹಕರಿಗೆ ಹುಕ್ಕೇರಿ ಆರ್‍ಇಸಿಎಸ್ ಮತ್ತು ಐಕಸ್ ಎಸ್‍ಇ ಜಡ್ ಗ್ರಾಹಕರಿಗೆ ಮೆಸ್ಕಾಮ್‍ ಎಫ್‍ಎಸಿ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.

  ಬೆಲೆ ಕಡಿಮೆ ಆಯ್ತು ಅನ್ನೊ ಸಂತೋಷ ಒಂದುಕಡೆಯಾದರೆ ಈ FAC ಅಂದರೆ ಏನು??  FAC -Fuel Adjustment charges ಎನ್ನುತ್ತಾರೆ ಇದನ್ನು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ತಾವು ಉತ್ಪಾದಿಸುವ ವಿದ್ಯುತ್ ಶಕ್ತಿಗೆ ತಗುಲುವ ಇಂಧನದ ಒಟ್ಟು ವೆಚ್ಚವನ್ನು ತನ್ನ ಎಲ್ಲಾ ಗ್ರಾಹಕರಿಗೆ ಸಮನಾಗಿ ಹಂಚುತ್ತವೆ ಮತ್ತು ಈ ಮೊತ್ತವು ಪೈಸೆಗಳ ಲೆಕ್ಕದಲ್ಲಿರುತ್ತದೆ. ಇನ್ನು ಕೆಲವೊಮ್ಮೆ ಇಂಧನದ(ಕಲ್ಲಿದ್ದಲು) ಮೂಲ ಬೆಲೆ ಏರಿಕೆಯಾದಾಗ ವಿಧಿಯಿಲ್ಲದೆ ಕಂಪನಿಗಳು ಅದನ್ನು ಗ್ರಾಹಕರ ಮೇಲೆ ಹಾಕುತ್ತಾರೆ, ಈ ಪ್ರಕ್ರಿಯೆಯಲ್ಲಿ ಇಂಧನದ ಹಿಂದಿನ ಮೂಲ ಬೆಲೆಗೂ ಇಂದಿನ ಮೂಲ ಬೆಲೆಯನ್ನು ತಾಳೆಹಾಕಿ ಬೆಲೆ ಏರಿಕೆ ಅಥವಾ ಇಳಿಕೆ ಮಾಡುತ್ತಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

  

Recent Articles

spot_img

Related Stories

Share via
Copy link