ಮಿಡಿಗೇಶಿ:
ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ದೊರೆಯಬೇಕು ಎನ್ನವ ಕಾರಣಕ್ಕೆ ಸರ್ಕಾರ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುತ್ತಿದೆ. ಆದರೆ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಸಿಗಬೇಕಾದ ನೀರು ಸಿಗದಂತಾಗಿದೆ.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮ ಪಂಚಾಯ್ತಿ ಮಿಡಿಗೇಶಿಯ ಮಾರುತಿ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸಮೀಪ ಕರ್ನಾಟಕ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಶುದ್ಧ ನೀರು ಆರೋಗ್ಯಕರ,ಆರೋಗ್ಯದ ಆಧಾರ ಇತ್ಯಾದಿ ನಾಮ ಫಲಕಗಳನ್ನು ಶುದ್ಧ ಕುಡಿಯುವ ನೀರಿನ ಘಟಕದ ನಾಮಫಲಕದಲ್ಲಿ ನಮೂದಿಸಿ ಶುದ್ದ ಕುಡಿಯುವ ನೀರಿನ ಮಹತ್ವ ಹೇಳಿದೆ.
ಕಳೆದ 18 ರಿಂದ 20 ತಿಂಗಳುಗಳಿಂದ ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಗೊಂಡು ನೀರು ಸರಬರಾಜಾಗುತ್ತಿತ್ತು. ಆದರೆ, ದಿ.27 ರಂದು ಇಲ್ಲಿನ ಕೆ.ಪಿ.ಟಿ.ಸಿ.ಎಲ್‍ನವರು ಈ ನೀರಿನ ಘಟಕದ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಸಂಪರ್ಕ ಕಡಿತಗೊಳಿಸಿರುತ್ತಾರೆ. ಇದರ ಬಾಬ್ತು 7500 ರೂಗಳನ್ನು ಪಾವತಿಸಬೇಕಾಗಿದೆ. ಪಾವತಿಸಬೇಕಾದ ಭೂ ಸೇನಾ ನಿಗಮದ ಇಂಜಿನಿಯರ್ ನಿರ್ಲಕ್ಷತನದಿಂದಾಗಿ ವಿದ್ಯುತ್ ಸಂಪರ್ಕವಿಲ್ಲದೆ ಈ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಇಲ್ಲದಂತಾಗಿದೆ.ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ